ಚೆನ್ನೈ ಸೂಪರ್ ಕಿಂಗ್ಸ್
ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ಎಂಎಸ್ ಧೋನಿ ನಿರಾಳವಾಗಿ ತಂಡವನ್ನು ಮುನ್ನಡೆಸುವ ಅವಕಾಶ ಹೊಂದಿದ್ದಾರೆ. ಅನುಭವಿ ಸ್ಪಿನ್ನರ್‌ಗಳ ಉಪಸ್ಥಿತಿ ಯುಎಇ ಪಿಚ್‌ಗಳಲ್ಲಿ ಹೆಚ್ಚು ಲಾಭ ತಂದುಕೊಡುವ ನಿರೀಕ್ಷೆ ಇದೆ. ಎಂಎಸ್ ಧೋನಿ ಸಾರಥ್ಯ, ಅನುಭವಿ ತಂಡ, ಆಡಿದ 10 ಬಾರಿಯೂ ಪ್ಲೇಆ್ ಪ್ರವೇಶ. ಸುರೇಶ್ ರೈನಾ, ಹರ್ಭಜನ್ ಸಿಂಗ್ ಅನುಪಸ್ಥಿತಿ, ಅಗ್ರ ಎಡಗೈ ಬ್ಯಾಟ್ಸ್‌ಮನ್, ಆಫ್-ಸ್ಪಿನ್ನರ್ ಕೊರತೆ.
ಕಳೆದ ಬಾರಿ (2014) ಹಾಲಿ ಚಾಂಪಿಯನ್ ತಂಡವಾಗಿಯೇ ಅರಬ್ ದೇಶದಲ್ಲಿ ಅಭಿಯಾನ ಆರಂಭಿಸಿ ನಿರಾಸೆ ಅನುಭವಿಸಿದ್ದ ಮುಂಬೈ ಈ ಬಾರಿ ಇತಿಹಾಸ ಬದಲಿಸಲಿದೆಯಾ! ಕಳೆದ 7 ವರ್ಷಗಳಲ್ಲಿ 4 ಬಾರಿ ಪ್ರಶಸ್ತಿ ಜಯಿಸಿದ ದಾಖಲೆಯ ಬಲವಿದೆ. ರೋಹಿತ್ ಶರ್ಮರ ಅನುಭವಿ ಕ್ರಿಕೆಟ್ ಸಾರಥ್ಯ, ಹಾರ್ದಿಕ್-ಕೃನಾಲ್ ಪಾಂಡ್ಯ, ಪೊಲ್ಲಾರ್ಡ್‌ರಂಥ ಆಲ್ರೌಂಡರ್ಸ್ ಶಕ್ತಿ. ಇತರ ತಂಡಗಳಿಗೆ ಹೋಲಿಸಿದರೆ ಸ್ಪಿನ್ ವೈವಿಧ್ಯತೆ-ಕ್ವಾಲಿಟಿ ಇಲ್ಲ, ಮಾಲಿಂಗ ಗೈರು, ಯುಎಇಯಲ್ಲಿ ಕೆಟ್ಟ ದಾಖಲೆ.
ತಂಡ: ರೋಹಿತ್ ಶರ್ಮ (ನಾಯಕ), ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಆದಿತ್ಯ ತಾರೆ, ಜಸ್‌ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಜಯಂತ್ ಯಾದವ್, ರಾಹುಲ್ ಚಹರ್, ಅನ್ಮೋಲ್‌ಪ್ರೀತ್ ಸಿಂಗ್, ಅನುಕೂಲ್ ರಾಯ್, ಇಶನ್ ಕಿಶನ್ (ವಿ. ಕೀ), ಕೈರಾನ್ ಪೊಲ್ಲಾರ್ಡ್, ಮಿಚೆಲ್ ಮೆಕ್ಲೀನಘನ್, ಕ್ವಿಂಟನ್ ಡಿಕಾಕ್ (ವಿ.ಕೀ). ಧವಳ್ ಕುಲಕರ್ಣಿ (ರಾಜಸ್ಥಾನದಿಂದ), ಟ್ರೆಂಟ್ ಬೌಲ್ಟ್ (ಡೆಲ್ಲಿಯಿಂದ), ಶೆರ್ಫಾನ್ ರುದರ್ಫೋರ್ಡ್ (ಡೆಲ್ಲಿಯಿಂದ). ಜೇಮ್ಸ್ ಪ್ಯಾಟಿನ್‌ಸನ್, ನಥಾನ್ ಕೌಲ್ಟರ್ ನಿಲ್, ಕ್ರಿಸ್ ಲ್ಯಾನ್, ಸೌರಭ್ ತಿವಾರಿ, ದಿಗ್ವಿಜಯ್ ದೇಶಮುಖ್, ಬಲ್ವಂತ್ ರಾಯ್ ಸಿಂಗ್, ಮೋಹ್ಸಿನ್ ಖಾನ್.
ಕಿಂಗ್ಸ್ ಇಲೆವೆನ್ ಪಂಜಾಬ್
ಬಹುತೇಕ ಕನ್ನಡಿಗರನ್ನೇ ಹೊಂದಿರುವ ತಂಡಕ್ಕೆ ಕನ್ನಡಿಗರೇ ಕೋಚ್-ಕ್ಯಾಪ್ಟನ್. ಆರ್‌ಸಿಬಿ ತಂಡ ಈ ಬಾರಿಯೂ ನಿರೀಕ್ಷಿತ ನಿರ್ವಹಣೆ ತೋರಿದ್ದರೆ, ಕನ್ನಡಿಗರ ಬೆಂಬಲ ಈ ತಂಡದ ಕಡೆ ತಿರುಗಲಿದೆ. ಕುಂಬ್ಳೆ-ರಾಹುಲ್ ಕಾಂಬಿನೇಷನ್ ನಿರೀಕ್ಷೆ ಹೆಚ್ಚಾಗಿದೆ. ಕಳೆದ ಬಾರಿ ಯುಎಇಯಲ್ಲಿ ಅಜೇಯ ಮತ್ತು ಮ್ಯಾಕ್ಸ್‌ವೆಲ್ ಅಬ್ಬರ. ಅನುಭವಿ ಸ್ಪಿನ್ ಬೌಲರ್‌ಗಳಿಲ್ಲ, ಗೇಲ್, ಮ್ಯಾಕ್ಸ್‌ವೆಲ್, ಪೂರನ್ ಅಸ್ಥಿರ ಬ್ಯಾಟಿಂಗ್.
ತಂಡ: ಕೆಎಲ್ ರಾಹುಲ್ (ನಾಯಕ, ವಿ.ಕೀ), ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಅರ್ಷದೀಪ್ ಸಿಂಗ್, ದರ್ಶನ್ ನಲ್ಕಂಡೆ, ಹರ್‌ಪ್ರೀತ್ ಬ್ರಾರ್, ಮಂದೀಪ್ ಸಿಂಗ್, ಮೊಹಮದ್ ಶಮಿ, ಎಂ. ಅಶ್ವಿನ್, ರ್ಸ್ರಾಜ್ ಖಾನ್, ಕ್ರಿಸ್ ಗೇಲ್, ಹರ್ದುಸ್ ವಿಲ್‌ಜೊಯೆನ್, ಮುಜೀಬ್ ಉರ್ ರೆಹಮಾನ್, ನಿಕೋಲಸ್ ಪೂರನ್. ಕೆ. ಗೌತಮ್ (ರಾಜಸ್ಥಾನದಿಂದ), ಜೆ. ಸುಚಿತ್ (ಡೆಲ್ಲಿಯಿಂದ). ಗ್ಲೆನ್ ಮ್ಯಾಕ್ಸ್‌ವೆಲ್, ಶೆಲ್ಡನ್ ಕಾಟ್ರೆಲ್, ಜೇಮ್ಸ್ ನೀಶಾಮ್, ಕ್ರಿಸ್ ಜೋರ್ಡನ್, ರವಿ ಬಿಷ್ಣೋಯಿ, ಸಿಮ್ರನ್ ಸಿಂಗ್, ದೀಪಕ್ ಹೂಡ, ತಜಿಂದರ್ ಸಿಂಗ್, ಇಶಾನ್ ಪೊರೆಲ್.
ಸನ್‌ರೈಸರ್ಸ್ ಹೈದರಾಬಾದ್
ಹೈ-ಪ್ರೊಫೈಲ್ ತಂಡವಲ್ಲದಿದ್ದರೂ, ಸದಾ ಪ್ಲೇಆಫ್ ರೇಸ್‌ನಲ್ಲಿ ಕಾಣಿಸಿಕೊಳ್ಳುತ್ತ ಬಂದಿರುವ ತಂಡವಿದು. ಬಲಿಷ್ಠ ಅಗ್ರ ಕ್ರಮಾಂಕ ಮತ್ತು ಬೌಲಿಂಗ್ ವಿಭಾಗವೇ ಇದುವರೆಗೆ ತಂಡದ ಕೈಹಿಡಿದಿದ್ದು ಈ ಬಾರಿ ಮಧ್ಯಮ ಕ್ರಮಾಂಕವನ್ನೂ ಬಲಪಡಿಸಿಕೊಳ್ಳುವ ಇರಾದೆಯಲ್ಲಿದೆ. 3 ಬಾರಿ ಆರೆಂಜ್ ಕ್ಯಾಪ್ ಗೆದ್ದಿರುವ ವಾರ್ನರ್ ಬ್ಯಾಟಿಂಗ್, ಯುಎಇಯ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ರಶೀದ್ ಖಾನ್ ಅಪಾಯಕಾರಿ. ಮನೀಷ್ ಪಾಂಡೆ ಹೊರತಾಗಿ ಅನುಭವಿ ಭಾರತೀಯ ಬ್ಯಾಟ್ಸ್‌ಮನ್‌ಗಳಿಲ್ಲ, ವಿದೇಶಿ ಸ್ಲಾಟ್ ತುಂಬುವ ಗೊಂದಲ.
ತಂಡ : ಡೇವಿಡ್ ವಾರ್ನರ್ (ನಾಯಕ), ಕೇನ್ ವಿಲಿಯಮ್ಸನ್, ಜಾನಿ ಬೇರ್‌ಸ್ಟೋ (ವಿ.ಕೀ), ಬಿಲ್ ಸ್ಟಾನ್‌ಲೇಕ್, ಮೊಹಮದ್ ನಬಿ, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಮನೀಷ್ ಪಾಂಡೆ, ಸಂದೀಪ್ ಶರ್ಮ, ಅಭಿಷೇಕ್ ಶರ್ಮ, ಬಸಿಲ್ ಥಂಪಿ, ಶ್ರೀವತ್ಸ ಗೋಸ್ವಾಮಿ, ಸಿದ್ಧಾಥ್ ಕೌಲ್, ಶಾಬಾಜ್ ನದೀಂ, ಖಲೀಲ್ ಅಹ್ಮದ್, ಟಿ. ನಟರಾಜನ್, ವಿಜಯ್ ಶಂಕರ್, ವೃದ್ಧಿಮಾನ್ ಸಾಹ (ವಿ.ಕೀ). ಮಿಚೆಲ್ ಮಾರ್ಷ್, ಫ್ಯಾಬಿಯನ್ ಅಲೆನ್, ಪ್ರಿಯಂ ಗಾರ್ಗ್, ವಿರಾಟ್ ಸಿಂಗ್, ಸಂದೀಪ್ ಬವನಕ, ಸಂಜಯ್ ಯಾದವ್, ಅಬ್ದುಲ್ ಸಮಾದ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು
‘ಈ ಸಲ ಕಪ್ ನಮ್ದೇ’ ಎಂಬ ಮಾತನ್ನು ಈ ಸಲವಾದರೂ ಉಳಿಸಿಕೊಳ್ಳುವ ನಿರೀಕ್ಷೆ ಹೆಚ್ಚಿದೆ. ನಾಯಕ ವಿರಾಟ್ ಕೊಹ್ಲಿ ಮೇಲಿನ ಭಾರವನ್ನು ಈ ಬಾರಿ ಸೇರ್ಪಡೆಗೊಂಡಿರುವ ಕೆಲ ಹೊಸ ಆಟಗಾರರು ಇಳಿಸುವ ಭರವಸೆ ಇದೆ. ಸ್ಟಾರ್ ಬ್ಯಾಟ್ಸ್‌ಮನ್‌ಗಳ ಬಲ, ಆಲ್ರೌಂಡರ್ ಕ್ರಿಸ್ ಮಾರಿಸ್ ತಂಡಕ್ಕೆ ಸಮತೋಲನ ತರಬಹುದು, ಚಾಹಲ್-ಜಂಪಾ ಸ್ಪಿನ್. ಕೊಹ್ಲಿ-ಎಬಿಡಿ ಮೇಲೆ ಹೆಚ್ಚು ಅವಲಂಬನೆ, ಮಧ್ಯಮ ಕ್ರಮಾಂಕ ಸದೃಢವಾಗಿಲ್ಲ, ಡೆತ್ ಬೌಲಿಂಗ್.
ತಂಡ: ವಿರಾಟ್ ಕೊಹ್ಲಿ (ನಾಯಕ), ಯಜುವೇಂದ್ರ ಚಾಹಲ್, ದೇವದತ್ ಪಡಿಕಲ್, ಗುರುಕೀರತ್ ಸಿಂಗ್, ಮೊಹಮದ್ ಸಿರಾಜ್, ಪಾರ್ಥಿವ್ ಪಟೇಲ್ (ವಿ.ಕೀ), ನವದೀಪ್ ಸೈನಿ, ಪವನ್ ನೇಗಿ, ಶಿವಂ ದುಬೆ, ಉಮೇಶ್ ಯಾದವ್, ವಾಷಿಂಗ್ಟನ್ ಸುಂದರ್, ಎಬಿ ಡಿವಿಲಿಯರ್ಸ್ (ವಿ.ಕೀ), ಮೊಯಿನ್ ಅಲಿ, ಡೇಲ್ ಸ್ಟೈನ್, ಕ್ರಿಸ್ ಮಾರಿಸ್, ಆರನ್ ಫಿಂಚ್, ಆಡಂ ಜಂಪಾ, ಇಸುರು ಉದಾನ, ಜೋಶ್ ಫಿಲಿಪ್, ಶಾಬಾಜ್ ಅಹಮದ್, ಪವನ್ ದೇಶಪಾಂಡೆ.
ಕೋಲ್ಕತ ನೈಟ್‌ರೈಡರ್ಸ್
ಗೌತಮ್ ಗಂಭೀರ್ ನಿರ್ಗಮಿಸಿದ ಬಳಿಕ ತಂಡವಿನ್ನೂ ಹಳೆಯ ಲಯಕ್ಕೆ ಮರಳಲು ಪರದಾಡುತ್ತಿದೆ. ಆದರೆ ಈ ಬಾರಿಯ ಕೆಲ ಹೊಸ ಸೇರ್ಪಡೆ ನಾಯಕ ದಿನೇಶ್ ಕಾರ್ತಿಕ್ ಕೈ ಬಲಪಡಿಸುವ ಮತ್ತು ರಸೆಲ್ ಮೇಲಿನ ಅವಲಂಬನೆ ಕಡಿಮೆಗೊಳಿಸುವ ನಿರೀಕ್ಷೆ ಇದೆ. ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಏಕಾಂಗಿಯಾಗಿ ಜಯ ತರಬಲ್ಲ ಆಂಡ್ರೆ ರಸೆಲ್ ಸಾಮರ್ಥ್ಯ, ಕಾರ್ತಿಕ್‌ಗೆ ಮಾರ್ಗನ್ ಉಪನಾಯಕರಾಗಿ ಸಾಥ್. ರಸೆಲ್ ಸ್ಫೋಟಕ ಆಟದ ಅವಲಂಬನೆ, ನಾರಾಯಣ್-ಕುಲದೀಪ್‌ಗೆ ಬ್ಯಾಕ್‌ಅಪ್ ಆಗಿ ಅನುಭವಿ ಸ್ಪಿನ್ನರ್‌ಗಳಿಲ್ಲ.
ತಂಡ: ದಿನೇಶ್ ಕಾರ್ತಿಕ್ (ನಾಯಕ), ಶುಭಮಾನ್ ಗಿಲ್, ಕುಲದೀಪ್ ಯಾದವ್, ಕಮಲೇಶ್ ನಾಗರಕೋಟಿ, ನಿತೀಶ್ ರಾಣಾ, ಪ್ರಸಿದ್ಧಕೃಷ್ಣ, ಸಂದೀಪ್ ವಾರಿಯರ್, ಶಿವಂ ಮಾವಿ, ರಿಂಕು ಸಿಂಗ್, ಆಂಡ್ರೆ ರಸೆಲ್, ಲಾಕಿ ಫರ್ಗ್ಯುಸನ್, ಸುನೀಲ್ ನಾರಾಯಣ್. ಸಿದ್ದೇಶ್ ಲಾಡ್ (ಮುಂಬೈನಿಂದ). ಪ್ಯಾಟ್ ಕಮ್ಮಿನ್ಸ್, ಇವೋಯಿನ್ ಮಾರ್ಗನ್, ಟಾಮ್ ಬಾಂಟನ್, ಕ್ರಿಸ್ ಗ್ರೀನ್, ರಾಹುಲ್ ತ್ರಿಪಾಠಿ, ವರುಣ್ ಚಕ್ರವರ್ತಿ, ನಿಖಿಲ್ ನಾಯ್ಕ, ಎಂ. ಸಿದ್ಧಾರ್ಥ್.
ರಾಜಸ್ಥಾನ ರಾಯಲ್ಸ್
ವಿದೇಶಿ ಆಟಗಾರರೇ ತಂಡದ ಪ್ರಮುಖ ಶಕ್ತಿ. ಅದನ್ನು ಹೇಗೆ ಸಮರ್ಥವಾಗಿ ಸಮತೋಲನ ಮಾಡಲಾಗುತ್ತದೆ ಎಂಬುದರ ಆಧಾರದಲ್ಲಿ ಈ ಬಾರಿ ತಂಡದ ಯಶಸ್ಸು ಅಡಗಿದೆ. ವಿದೇಶಿ ಸ್ಟಾರ್‌ಗಳಿಗೆ ಭಾರತದ ಯುವ ಆಟಗಾರರ ಸಮರ್ಥ ಬೆಂಬಲ, ನಿರೀಕ್ಷೆಗಳ ಭಾರ ಇಲ್ಲದಿದ್ದಾಗಲೇ ತಂಡಕ್ಕೆ ಯಶಸ್ಸಿನ ಅವಕಾಶ. ವಿದೇಶಿ ಆಟಗಾರರ ಅವಲಂಬನೆ ದೌರ್ಬಲ್ಯವೂ ಆಗಬಹುದು, ಸ್ಪಿನ್ ವಿಭಾಗದಲ್ಲಿ ಅನುಭವಿಗಳಿಲ್ಲ.
ತಂಡ: ಸ್ಟೀವನ್ ಸ್ಮಿತ್ (ನಾಯಕ), ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಜೋಸ್ ಬಟ್ಲರ್, ಒಶಾನೆ ಥಾಮಸ್, ಸಂಜು ಸ್ಯಾಮ್ಸನ್ (ವಿ.ಕೀ), ಮಹಿಪಾಲ್ ಲೋಮ್ರರ್, ಮನನ್ ವೊಹ್ರಾ, ಶ್ರೇಯಸ್ ಗೋಪಾಲ್, ರಿಯಾನ್ ಪರಾನ್, ಶಶಾಂಕ್ ಸಿಂಗ್, ವರುಣ್ ಆರನ್, ಜೈದೇವ್ ಉನಾದ್ಕತ್. ಅಂಕಿತ್ ರಜಪೂತ್ (ಪಂಜಾಬ್‌ನಿಂದ), ರಾಹುಲ್ ತೆವಾಟಿಯಾ (ಡೆಲ್ಲಿಯಿಂದ), ಮಯಾಂಕ್ ಮಾರ್ಕಂಡೆ (ಮುಂಬೈನಿಂದ). ರಾಬಿನ್ ಉತ್ತಪ್ಪ, ಅನಿರುದ್ಧ ಜೋಶಿ, ಯಶಸ್ವಿ ಜೈಸ್ವಾಲ್, ಕಾರ್ತಿಕ್ ತ್ಯಾಗಿ, ಅನುಜ್ ರಾವತ್, ಆಕಾಶ್ ಸಿಂಗ್, ಟಾಮ್ ಕರ‌್ರನ್, ಆಂಡ್ರ್ಯೋ ಟೈ, ಡೇವಿಡ್ ಮಿಲ್ಲರ್.
ಡೆಲ್ಲಿ ಕ್ಯಾಪಿಟಲ್ಸ್
ರಹಾನೆ, ಆಶ್ವಿನ್ ಸೇರ್ಪಡೆಯೊಂದಿಗೆ ತಂಡಕ್ಕೆ ಈಗ ಯುವಕರ ಬಲದೊಂದಿಗೆ ಅನುಭವವೂ ಕೂಡಿಕೊಂಡಂತಾಗಿದೆ. ಫಿರೋಜ್ ಷಾ ಕೋಟ್ಲಾ ಮಾದರಿಯಲ್ಲೇ ಯುಎಇ ಪಿಚ್‌ಗಳಿದ್ದು, ಸ್ಪಿನ್ ಬೌಲರ್‌ಗಳ ಸಮರ್ಥ ಬಳಕೆಯಾದರೆ ಫೆವರಿಟ್ ತಂಡಗಳಿಗೆ ಸೆಡ್ಡು ಹೊಡೆಯಬಹುದು. ಭಾರತೀಯ ಬ್ಯಾಟ್ಸ್‌ಮನ್‌ಗಳೇ ತಂಡದ ಆಧಾರಸ್ತಂಭ, ಉತ್ತಮ ಸ್ಪಿನ್-ವೇಗದ ಬೌಲಿಂಗ್ ಕಾಂಬಿನೇಷನ್. ಕಳೆದ ಬಾರಿ ಲೀಗ್‌ನಲ್ಲಿ ಉತ್ತಮ ನಿರ್ವಹಣೆ ತೋರಿದ್ದರೂ ಕೊನೆಯಲ್ಲಿ ಹಿನ್ನಡೆ, ಶ್ರೇಯಸ್ ಅಯ್ಯರ್ ಅನನುಭವಿ ನಾಯಕತ್ವ.
ತಂಡ: ಶ್ರೇಯಸ್ ಅಯ್ಯರ್ (ನಾಯಕ), ಇಶಾಂತ್ ಶರ್ಮ, ಶಿಖರ್ ಧವನ್, ಪೃಥ್ವಿ ಷಾ, ಆವೇಶ್ ಖಾನ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಅಮಿತ್ ಮಿಶ್ರಾ, ರಿಷಭ್ ಪಂತ್ (ವಿ.ಕೀ), ಕಗಿಸೋ ರಬಾಡ, ಕೀಮೋ ಪೌಲ್, ಸಂದೀಪ್ ಲಮಿಚನ್ನೆ. ಅಜಿಂಕ್ಯ ರಹಾನೆ (ರಾಜಸ್ಥಾನದಿಂದ), ಆರ್. ಅಶ್ವಿನ್ (ಪಂಜಾಬ್‌ನಿಂದ). ಶಿಮ್ರೋನ್ ಹೆಟ್ಮೆಯರ್, ಮಾರ್ಕಸ್ ಸ್ಟೋಯಿಸ್, ಆನ್ರಿಚ್ ನೋರ್ಜೆ, ಡೇನಿಯಲ್ ಸ್ಯಾಮ್ಸ್, ಅಲೆಕ್ಸ್ ಕ್ಯಾರಿ, ಮೋಹಿತ್ ಶರ್ಮ, ಲಲಿತ್ ಯಾದವ್, ತುಷಾರ್ ದೇಶಪಾಂಡೆ.






