ಹತ್ರಾಸ್ ಪ್ರಕರಣಕ್ಕೆ ಹೊಸ ತಿರುವು ನೀಡಿದ ಬಿಜೆಪಿ ಕಾಶಿ ಕ್ಷೇತ್ರದ ಜಾಲತಾಣ ಮುಖ್ಯಸ್ಥ

ಲಖನೌ: ಎಲ್ಲರಲ್ಲೂ ಆತಂಕ ಮೂಡಿಸಿದ ಮತ್ತು ಆಕ್ರೋಶ ಕೆರಳಿಸಿದ  ಹತ್ರಾಸ್  ಗ್ಯಾಂಗ್​ರೇಪ್​ ಪ್ರಕರಣವನ್ನು ಕಾಂಗ್ರೆಸ್​ ಮತ್ತು ಮಾಧ್ಯಮಗಳು  ತಮಗೆ ಬೇಕಾದಂತೆ ವ್ಯವಸ್ಥಿತವಾಗಿ ಬದಲಿಸಿವೆ ಎಂದು ಬಿಜೆಪಿಯ ಶಶಿಕುಮಾರ್ ಆರೋಪಿಸಿದ್ದಾರೆ.  ಕಾಶಿ ಕ್ಷೇತ್ರದ ಬಿಜೆಪಿ ಜಾಲತಾಣ ಮುಖ್ಯಸ್ಥ ನಾಗಿರುವ ಶಶಿಕುಮಾರ್ ತಮ್ಮ ಟ್ವಿಟ್ಟರ್ ನಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ. ಹತ್ರಾಸ್ ಪ್ರಕರಣದ  ಸತ್ಯಾಂಶ ಬೇರೆಯೇ ಇರುವಾಗ ಇಡೀ ಪ್ರಕರಣವನ್ನು ಗ್ಯಾಂಗ್​ರೇಪ್​ ಮತ್ತು ಕೊಲೆ ಎಂದು ತಿರುಚಲಾಗಿದೆ. ಕಾಂಗ್ರೆಸ್​ ತನ್ನ ರಾಜಕೀಯಕ್ಕಾಗಿ ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದೆ ಎಂದು ದೂರಿದ್ದು, ಕೆಲ ಕೌತುಕ ವಿಷಯಗಳನ್ನು ಸರಣಿ ಟ್ವೀಟ್​ ಮೂಲಕ ತೆರೆದಿಟ್ಟಿದ್ದಾರೆ.

ಈ ಪ್ರಕರಣದ ಸಂತ್ರಸ್ತ ಯುವತಿಯ ಕುಟುಂಬ ಹಾಗೂ ಆರೋಪಿ ಸಂದೀಪ್​ ಕುಟುಂಬದ ನಡುವೆ 2001ರಿಂದ ಹಳೆಯ ವೈಷಮ್ಯವಿತ್ತು. ಈ ಹಿಂದೆಯೆ ಎರಡು ಕುಟುಂಬಗಳು ಪರಸ್ಪರ ದೂರು ಸಹ ಸಲ್ಲಿಸಿದ್ದರು. ಸಂದೀಪ್​ ಕುಟುಂಬದಿಂದ 2 ಲಕ್ಷ ರೂ. ಹಣ ಪಡೆದು ನಂತರ ಸಂತ್ರಸ್ತೆಯ ಕುಟುಂಬ ಪ್ರಕರಣವನ್ನು ಹಿಂಪಡೆದಿತ್ತು. ಆದರೆ, ಈ ಎರಡು ಕುಟುಂಬಗಳ ದ್ವೇಷದ ನಡುವೆಯೂ ಯುವತಿ ಮತ್ತು ಸಂದೀಪ್​ ಪರಸ್ಪರ ಪ್ರೀತಿಸುತ್ತಿದ್ದರು.ಅದು ಕುಟುಂಬದವರಿಗೆ ಸಹಿಸಲಾಗಲಿಲ್ಲ. ಈ ಹಿಂದೆಯೇ ಯುವತಿ ಮತ್ತು ಸಂದೀಪ್ ಮನೆಯವರ ಕೈಯಲ್ಲಿ ಸಿಕ್ಕಿ ಬಿದ್ದು ಥಳಿಸಲ್ಪಟ್ಟಿದ್ದರು. ಆದರೆ ಪಂಚಾಯಿತಿ ನಡೆಸಿದ ಬಳಿಕ ಗ್ರಾಮದ ಮುಖ್ಯಸ್ಥ ಇಬ್ಬರ ನಡುವೆ ರಾಜಿ ಸಂಧಾನ ಮಾಡಿಸಿ, ಮದುವೆಯ ಮಾತುಕತೆ ನಡೆಸಿದ್ದರು. ಆದರೆ, ಯುವತಿ ಕುಟುಂಬಸ್ಥರು ಅದರಲ್ಲೂ ಸಹೋದರನಿಗೆ ಇಷ್ಟವಿಲ್ಲದಿದ್ದರಿಂದ ಮದುವೆಗೆ ನಿರಾಕರಿಸಿದ್ದರು.

ಆದರೂ ಯುವತಿ ಮತ್ತು ಸಂದೀಪ್ ತಮ್ಮ ಸಂಬಂಧವನ್ನು ಹಾಗೆ ಮುಂದುವರಿಸಿದ್ದರು.ಇಬ್ಬರೂ ಅನೇಕ ಬಾರಿ ಜೊತೆಗಿರುವಾಗ ಸಿಕ್ಕಿಬಿದ್ದು ಯುವತಿಯ ಅಣ್ಣ ಇಬ್ಬರನ್ನು ಥಳಿಸಿದ್ದನು. ಇದನ್ನು ಗಮನಿಸಿದ ಸಂದೀಪ್ ಮನೆಯವರು  ಬೇರೆಡೆ ಕೆಲಸ ಹುಡುಕಿ ಅವನನ್ನು ಗ್ರಾಮದಿಂದಲೆ ಹೊರ ಕಳುಹಿಸಿದರು.ಹೋಗುವ ಮುನ್ನ ಯುವತಿಗೆ ಸಂದೀಪ್ ಮೊಬೈಲ್ ನ್ನು ಉಡುಗೊರೆಯಾಗಿ ನೀಡಿದ್ದ, ಇದರಲ್ಲೇ ಇಬ್ಬರ ಸಂಪರ್ಕ ಮುಂದುವರೆದಿತ್ತು. ಕೆಲವು ದಿನಗಳ ನಂತರ ಸಂದೀಪ್​ ಆಕೆಗೆ ಕರೆ ಮಾಡಿದ್ದು, ಕರೆಯನ್ನು ಆಕೆಯ ಅತ್ತಿಗೆ ಕರೆ ಸ್ವೀಕರಿಸಿದ್ದರು. ಬಳಿಕ ಆಕೆಗೆ ಥಳಿಸಿ, ಗ್ರಾಮದ ಮುಖ್ಯಸ್ಥನಿಗೆ ದೂರು ನೀಡಿದ್ದರು. ಬಳಿಕ ಈ ವಿಚಾರ ಸಂದೀಪ್​ ತಂದೆಗೂ ತಿಳಿಸಿ,ಮಗನನ್ನು ಊರಿಗೆ ಕರೆಯಿಸಿ ಆತನಿಗೂ ಚೆನ್ನಾಗಿ ಥಳಿಸಲಾಯಿತು.

ಇನ್ನು ಗ್ಯಾಂಗ್​ ರೇಪ್​ ನಡೆದಿದೆ ಎನ್ನಲಾದ ಸೆ. 14ರಂದು ಸಂದೀಪ್​ ಯುವತಿಯನ್ನು ಭೇಟಿ ಮಾಡಲು ಹೋಗಿದ್ದ.  ಹೊಲದಲ್ಲಿ ಇಬ್ಬರು ಮಾತನಾಡುವುದನ್ನು ಯುವತಿಯ ತಾಯಿ ನೋಡಿ ತನ್ನ ಮಗನನ್ನು ಕರೆದಿದ್ದಳು. ಇದನ್ನು ನೋಡಿದ ಸಂದೀಪ್​ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆದರೆ ಇತ್ತ ಯುವತಿಯ ಸಹೋದರ ಬಹಳ ಕೋಪಗೊಂಡು ಅದೇ ಸಿಟ್ಟಿನಲ್ಲಿ  ಆಕೆಗೆ ನಿಷ್ಕರುಣೆಯಿಂದ ಥಳಿಸಿ, ದುಪ್ಪಟ್ಟದಿಂದ ಉಸಿರುಗಟ್ಟಿಸಿ ಸಾಯಿಸಲು ಯತ್ನಿಸಿದನು. ಅವಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು.  ಇದನ್ನು ನೋಡಿದ ತಾಯಿ ಜೋರಾಗಿ ಕೂಗಿಕೊಂಡಾಗ ಹತ್ತರಿದ ಜಮೀನಿನಲ್ಲಿದ್ದ ಲವಕುಶ್​ (ಪ್ರಕರಣದ ಇನ್ನೊಬ್ಬ ಆರೋಪಿ) ಓಡಿ ಬಂದಿದ್ದಾನೆ.

ಈ ವೇಳೆ ಯುವತಿಯ ತಾಯಿ ನೀರು ಕೇಳಿದಾಗ ಲವಕುಶ್​ ನೀರು ಹಿಡಿದುಕೊಂಡು ಓಡಿ ಬಂದಿದ್ದಾನೆ. ಆತನಿಗೆ ಸಂದೀಪ್​ ನನ್ನ ಮಗಳನ್ನು ಕೊಲ್ಲಲು ಯತ್ನಿಸಿದನು ಎಂದು ಹೇಳಿದರು ಮತ್ತು ಯುವತಿಗೆ ಪ್ರಜ್ಞೆ ಬಂದಾಗ ಆಕೆಯು ಸಹ ಸಂದೀಪ್​ ಕೊಲ್ಲಲು ಯತ್ನಿಸಿದ್ದಾಗಿ ಹೇಳಿದಳು. ಇದೇ ಹೇಳಿಕೆಯನ್ನೇ ಆಕೆ ಆಸ್ಪತ್ರೆಯಲ್ಲಿ ಪೊಲೀಸ್​ ಮತ್ತು ಮಾಧ್ಯಮಗಳ ಮುಂದೆಯೂ ಹೇಳಿರುವುದು. ಆಕೆಯ ತಾಯಿ ಸಹ ಪೊಲೀಸ್​ ಮತ್ತು ಮಾಧ್ಯಮಗಳಿಗೆ ಸಂದೀಪ್​ ವಿರುದ್ಧವಾಗಿ ಹೇಳಿಕೆ ನೀಡಿದ್ದಾರೆ.

ಶಶಿ ಕುಮಾರ್​ ಅವರು ವಿಡಿಯೋವೊಂದನ್ನು ಪೋಸ್ಟ್​ ಮಾಡಿ, ಈ ವಿಡಿಯೋದಲ್ಲಿ ಗ್ಯಾಂಗ್​ರೇಪ್​ ಅಥವಾ ನಾಲಿಗೆ ಕತ್ತರಿಸಿರುವ ಯಾವುದೇ ಸುಳಿವಿಲ್ಲ ಸರಿಯಾಗಿ ನೋಡಿ ಎಂದಿದ್ದಾರೆ

 
 
 
 
 
 
 
 
 
 
 

1 COMMENT

  1. ಯುವತಿಯ ಸೋದರನ ಹೆಸರು ಸಂದೀಪ್ ಅಂತ ಕೆಲವರಿಗೆ ಗೊತ್ತಿಲ್ಲ.

Leave a Reply