ಸಿಕ್ಸರ್‌ ಬಾರಿಸಿ ಮೈದಾನದಲ್ಲೇ ಪ್ರಾಣಬಿಟ್ಟ ಕ್ರಿಕೆಟಿಗ!

ಆಟದ ವೇಳೆ ಕ್ರೀಸ್‌ನಲ್ಲಿ ಮುನ್ನುಗ್ಗಿ ಸಿಕ್ಸರ್‌ ಬಾರಿಸಿದ 7 ಸೆಕೆಂಡುಗಳಲ್ಲೇ ಹೃದಯಾಘಾತ ಸಂಭವಿಸಿ ಕ್ರಿಕೆಟಿಗನೊಬ್ಬ ಮೈದಾನದಲ್ಲೇ ಪ್ರಾಣಬಿಟ್ಟ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಥಾಣೆಯ ಮೀರಾ ರೋಡ್‌ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಕ್ರಿಕೆಟಿಗ ಪ್ರಾಣಬಿಟ್ಟಿದ್ದಾರೆ. ಆತ ಯಾರು – ಏನು ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಪಿಂಕ್‌ ಬಣ್ಣದ ಜೆರ್ಸಿ ಧರಿಸಿದ ಕ್ರಿಕೆಟಿಗ ನೆಟ್‌ ಕ್ರಿಕೆಟ್‌ ಆಡುತ್ತಿದ್ದ ವೇಳೆ ಭರ್ಜರಿ ಸಿಕ್ಸರ್‌ ಬಾರಿಸಿದ್ದಾನೆ. ಬಳಿಕ ಮುಂದಿನ ಎಸೆತ ಎದುರಿಸಲು ಕ್ರೀಸ್‌ನಲ್ಲಿ ನಿಂತ 7 ಸೆಕೆಂಡುಗಳಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಸಹ ಆಟಗಾರರು ಕೂಡಲೇ ಸಹಾಯಕ್ಕೆ ಧಾವಿಸಿದ್ದಾರೆ, ಅಷ್ಟರಲ್ಲಿ ಆಟಗಾರ ಮೃತಪಟ್ಟಿರುವುದು ಗೊತ್ತಾಗಿದೆ. 

 
 
 
 
 
 
 
 

Leave a Reply