ಕೊರೊನಾ ಎರಡನೇ ಅಲೆ ಆರ್ಭಟ: ಮದುವೆ, ಅಂತ್ಯಕ್ರಿಯೆಗೆ ನಿರ್ಬಂಧ

ನವದೆಹಲಿ: ಕೊರೊನಾ ವೈರಸ್ ಸೋಂಕು ಹೆಚ್ಚಿದ್ದು, ಎರಡನೇ ಅಲೆ ಹಿನ್ನೆಲೆ ಮದುವೆ ಸಮಾರಂಭ ಹಾಗೂ ಅಂತ್ಯಕ್ರಿಯೆಗಳಿಗೆ ನಿರ್ಬಂಧ ವಿಧಿಸಿ ದೆಹಲಿ ಸರಕಾರ ಆದೇಶ ಜಾರಿಗೆ ತಂದಿದೆ. ಸಾರ್ವಜನಿಕರು ಒಟ್ಟಾಗಿ ಸೇರುವುದರಿಂದ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ.

ಶನಿವಾರ ದೆಹಲಿಯಲ್ಲಿ 1,558 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿತ್ತು. ಒಟ್ಟು ಈ ತನಕ 6,55,834 ಕೊರೊನಾ ಪ್ರಕರಣ ದಾಖಲಾಗಿದೆ. ಶನಿವಾರ 974 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ಹಿನ್ನೆಲೆ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ(ಡಿಡಿಎಂಎ) ಶನಿವಾರ ಹೊಸ ಆದೇಶಗಳನ್ನು ಹೊರಡಿಸಿದ್ದು, ಮದುವೆ ಹಾಗೂ ಇತರ ಸಮಾರಂಭಗಳಲ್ಲಿ 200 ಜನರು ಪಾಲ್ಗೊಳ್ಳಬಹುದೆಂದು ಸೂಚನೆ ನೀಡಿದೆ.

 
 
 
 
 
 
 
 
 
 
 

Leave a Reply