ನೆರೆರಾಷ್ಟ್ರಗಳ ಜತೆಗೆ ಕಾಂಗ್ರೆಸ್ ಬೆಳೆಸಿದ್ದ ಸಖ್ಯವನ್ನು ಹಾಳು ಮಾಡ್ತಿದ್ದಾರೆ ಮೋದಿ

ನರೇಂದ್ರ ಮೋದಿ ಅವರು ಕಾಂಗ್ರೆಸ್  ನೆರೆ ರಾಷ್ಟ್ರಗಳೊಂದಿಗೆ ಬೆಳೆಸಿದ್ದ ಸಂಬಂಧವನ್ನು ಹಾಳು ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆ ಸಂಬಂಧ ಬಹಳ ವರ್ಷಗಳ ಪ್ರಯತ್ನದ ಫಲವಾಗಿ ರೂಪುಗೊಂಡಿತ್ತು. ಆದರೆ ಈಗ ಅದನ್ನು ಹಾಳು ಗೆಡವಲಾಗುತ್ತಿದೆ, ಇಂದು ಬಹಳ ಅಪಾಯಕಾರಿ ಬೆಳವಣಿಗೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ದ ಎಕನಾಮಿಸ್ಟ್ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯೊಂದರ ಇಮೇಜ್ ಅನ್ನು ಟ್ಯಾಗ್ ಮಾಡಿದ ರಾಹುಲ್ ಗಾಂಧಿ, ನೆರೆಹೊರೆಯಲ್ಲಿ ಸ್ನೇಹಿತರಿಲ್ಲದೇ ಬದುಕುವುದು ಅಪಾಯಕಾರಿ ಎಂದು ಟ್ವೀಟ್ ಮಾಡಿದ್ದಾರೆ. ಬಾಂಗ್ಲಾದೇಶ ಭಾರತ ದೊಂದಿಗಿನ ಸಂಬಂಧವನ್ನು ಕಡಿಮೆ ಮಾಡಿದ್ದು, ಅದರ ಸಂಬಂಧ ಚೀನಾದೊಂದಿಗೆ ದೃಢವಾಗುತ್ತಿದೆ ಎಂಬದು ದ ಎಕನಾಮಿಸ್ಟ್ ವರದಿಯಲ್ಲಿದೆ. ಬಾಂಗ್ಲಾದೇಶ ಇದನ್ನು ಇಟ್ಟುಕೊಂಡು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಿನ ಸಂದರ್ಭ ನೆನಪಿಸಿಕೊಂಡು ಮೇಲಿನಂತೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

Leave a Reply