ಮೋದಿ ಭೇಟಿ ವೇಳೆ ಶಿಷ್ಟಾಚಾರ ಉಲ್ಲಂಘಿಸಿದ ಬಂಡೋಪಾಧ್ಯಾಯ ಎತ್ತಂಗಡಿ‌‌

ನವದೆಹಲಿ: ಪ್ರಧಾನಿ‌ ಮೋದಿಯವರ ಪಶ್ಚಿಮ ಬಂಗಾಳ ಭೇಟಿ ಬೆನ್ನಲ್ಲೇ ಅಲ್ಲಿನ ಮುಖ್ಯ ಕಾರ್ಯದರ್ಶಿ ಆಲಪನ್ ಬಂಡೋಪಾಧ್ಯಾಯರನ್ನು ಕೇಂದ್ರ ಸರ್ಕಾರ ಎತ್ತಂಗಡಿ‌‌ ಮಾಡಿದೆ. ಪ್ರಧಾನಿ ಮೋದಿ ಭೇಟಿ ವೇಳೆ ಶಿಷ್ಟಾಚಾರ ಉಲ್ಲಂಘಸಿದ ಹಿನ್ನೆಲೆ ಈ‌ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ‌.

ಈ ಆದೇಶ ತಕ್ಷಣದಿಂದಲೇ ಜಾರಿಯಾಗಲಿದೆ ಎಂದು ಕೇಂದ್ರ ಸರ್ಕಾರದ ಪ್ರಿನ್ಸಿಪಲ್ ಸೆಕ್ರೆಟರಿ ಹೊರಡಿಸಿರುವ ಆದೇಶದಲ್ಲಿ ಸೂಚಿಸಲಾಗಿದೆ. ಮೇ 31ರಂದು ನವದೆಹಲಿಯ ಸಾರ್ವಜನಿಕ ಕುಂದುಕೊರತೆ ಹಾಗೂ ಪಿಂಚಣಿ, ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಿದೆ.

ಇನ್ನು ಮುಂದೆ ಕೇಂದ್ರ ಸರ್ಕಾರದ ಸಾರ್ವಜನಿಕ ಕುಂದುಕೊರತೆ ಇಲಾಖೆಯಲ್ಲಿ ಬಂಡೋಪಾಧ್ಯಾಯ ಕಾರ್ಯನಿರ್ವಹಿಸಬೇಕಿದ್ದು, ತರಬೇತಿಯನ್ನೂ ಪಡೆಯುವಂತೆ ಸೂಚನೆ ನೀಡಲಾಗಿದೆ.

ಬಂಡೋಪಾಧ್ಯಾಯ 1987 ನೇ ಕೇಡರ್ ನ ಐಎಎಸ್ ಅಧಿಕಾರಿ, ಪಶ್ಚಿಮ‌ ಬಂಗಾಳ ಸಿಎಂ‌ ಮಮತಾ ಬ್ಯಾನರ್ಜಿಯವರ ಆಪ್ತರಾಗಿದ್ದಾರೆ. ಪಶ್ಚಿಮ‌ ಬಂಗಾಳ ಸರ್ಕಾರದ ಕೋರಿಕೆ ಮೇರೆಗೆ ಬಂಡೋಪಾಧ್ಯಾಯ ಅವರ ಸೇವೆಯನ್ನು ಮೂರು ತಿಂಗಳ ಅವಧಿಗೆ ಕೇಂದ್ರ ಸರ್ಕಾರ ವಿಸ್ತರಿಸಿತ್ತು. ಆದರೆ, ಶುಕ್ರವಾರ ಪ್ರಧಾನಿ ಮೋದಿ ಭೇಟಿ ವೇಳೆ ಶಿಷ್ಟಾಚಾರ ಪಾಲಿಸಿಲ್ಲವೆಂಬ ಆರೋಪದ‌ ಮೇರೆಗೆ ಬಂಡೋಪಾಧ್ಯಾಯ ಅವರನ್ನು ಎತ್ತಂಗಡಿ ಮಾಡಲಾಗಿದೆ.

 
 
 
 
 
 
 
 
 
 
 

Leave a Reply