ಬಿಜೆಪಿ ನಾಯಕರಾದ ಎಲ್.ಕೆ. ಅಡ್ವಾಣಿ , ಮುರುಳಿ ಮನೋಹರ್ ಜೋಷಿ, ಮಾಜಿ ಸಚಿವರಾದ ಉಮಾ ಭಾರತಿ, ಕಲ್ಯಾಣ್ ಸಿಂಗ್ ಸೇರಿದಂತೆ ಎಲ್ಲರೂ ನಿರ್ದೋಷಿಗಳು ಎಂದು ನ್ಯಾಯಾಲಯ ಅಂತಿಮ ತೀರ್ಪು ನೀಡಿದೆ. ಲಕ್ನೋದ ಸಿಸಿಬಿ ವಿಶೇಷ ಕೋರ್ಟ್ ನ್ಯಾಯಾಧೀಶ ಎಸ್.ಕೆ. ಯಾದವ್ ನೇತೃತ್ವದ ನ್ಯಾಯಾಪಿಠವು ತೀರ್ಪು ಪ್ರಕಟಿಸಿದ್ದು, ಬಾಬರಿ ಕಟ್ಟಡ ಧ್ವಂಸ ಪೂರ್ವನಿಯೋಜಿತ ಕೃತ್ಯವಲ್ಲ, ಆಕಸ್ಮಿಕ ಘಟನೆ ಎಂದಿದ್ದಾರೆ. ಆರೋಪ ಸಾಬೀತುಪಡಿಸಲು ಪ್ರಬಲ ಸಾಕ್ಷಿಗಳು ಇಲ್ಲ. ಎಲ್ಲಾ32 ಆರೋಪಿಗಳು ನಿರ್ದೋಷಿಗಳು ಎಂಬ ತೀರ್ಪು ಪ್ರಕಟಿಸಲಾಗಿದೆ.
ಐತಿಹಾಸಿಕ ತೀರ್ಪು: ಬಾಬರಿ ಕಟ್ಟಡ ಧ್ವಂಸ ಪ್ರಕರಣದ ಎಲ್ಲಾ 32 ಆರೋಪಿಗಳು ನಿರ್ದೋಷಿಗಳು

ಬಾಬರಿ ಕಟ್ಟಡ ಧ್ವಂಸ ಪ್ರಕರಣದ ಎಲ್ಲಾ 32 ಆರೋಪಿಗಳು ನಿರ್ದೋಷಿಗಳು ದೇಶವೇ ಕುತೂಹಲ ದಿಂದ ಎದುರು ನೋಡುತ್ತಿದ್ದ ಐತಿಹಾಸಿಕ ತೀರ್ಪು ಪ್ರಕಟವಾಗಿದೆ. 1992 ರಲ್ಲಿ ನಡೆದ ಬಾಬರಿ ಕಟ್ಟಡ ಧ್ವಂಸ ಪ್ರಕರಣದ ತೀರ್ಪು ಹೊರಬಿದ್ದಿದ್ದು, ಧ್ವಂಸ ಪ್ರಕರಣದ ಎಲ್ಲಾ ಆರೋಪಿಗಳು ನಿರ್ದೋಷಿ ಗಳು ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
- Advertisement -