2120 ಪಾಕಿಸ್ತಾನಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಿದ ಮೋದಿ ಸರಕಾರ

 ಕಳೆದೆಹಲಿ: ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.


2017ರಿಂದ ಈ ವರ್ಷದ ಸೆಪ್ಟೆಂಬರ್ 17ರ ವರೆಗೆ 44 ದೇಶಗಳ 2,729 ವಿದೇಶಿಗರಿಗೆ ದೇಶದ ಪೌರತ್ವ ನೀಡಲಾಗಿದೆ ಎಂದು ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್‌ ತಿಳಿಸಿದರು.


ಭಾರತದ ಪೌರತ್ವ ಪಡೆದು ಕೊಂಡವರಲ್ಲಿ ಅಮೆರಿಕದ 60, ಶ್ರೀಲಂಕಾದ 58, ಬ್ರಿಟನ್‌ನ‌ 20, ನೇಪಾಳದ 31, ಮಲೇಷ್ಯಾದ 19, ಕೆನಡಾದ 14 ಮತ್ತು ಸಿಂಗಾಪುರದ 13 ಜನ ಒಳಗೊಂಡಿದ್ದಾರೆ.

Leave a Reply