ರಾಮ ಮಂದಿರ ಭೂಮಿಪೂಜೆ ಟಿವಿಯಲ್ಲೇ ವೀಕ್ಷಿಸಿ

ಅಯೋಧ್ಯಾ: ರಾಮನ ಭಕ್ತರು ಕಾಯುತ್ತಿದ್ದ ಘಳಿಗೆ ಸಮೀಪವಾಗಿದೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಎಲ್ ಸಿದ್ಧತೆ ನಡೆಯುತ್ತಿದ್ದು, ಆಗಸ್ಟ್​ 5ರಂದು ಭೂಮಿ ಪೂಜೆ ನಡೆಯಲಿದೆ.

ಕರೊನಾ ಸಾಂಕ್ರಾಮಿಕ ರೋಗ ಇರುವುದರಿಂದ ರಾಮಮಂದಿರ ನಿರ್ಮಾಣ ಭೂಮಿ ಪೂಜೆಯಲ್ಲಿ ಆಮಂತ್ರಿತರು, ಸಾರ್ವಜನಿಕರು ಸೇರಿ 250 ರಿಂದ 300 ಮಂದಿ ಅಷ್ಟೇ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ಹೇಳಿದೆ.
ಭೂಮಿಪೂಜೆಗೆ ಭಕ್ತರು ಆಗಮಿಸಬೇಡಿ. ನಿಮ್ಮ ಮನೆಯ ಟಿವಿಯಲ್ಲಿ ಸಮಾರಂಭವನ್ನು ನೋಡಿ ಎಂದು ಟ್ರಸ್ ಮನವಿ ಮಾಡಿದೆ.
ಅಂದು ಸಂಜೆ ನಿಮ್ಮ ಮನೆಯಲ್ಲಿ ದೀಪ ಬೆಳಗಿ ಪ್ರಾರ್ಥನೆ ಮಾಡಿ ಎಂದು ರಾಮಜನ್ಮಭೂಮಿ ಟ್ರಸ್ಟ್​ ಮನವಿಯಲ್ಲಿ ತಿಳಿಸಿದೆ.

 
 
 
 
 
 
 

Leave a Reply