ರಾಮಜನ್ಮಭೂಮಿ ಸ್ಥಳಕ್ಕೆ ಬೇಟಿ ನೀಡುವ ಮೊದಲ ಪ್ರಧಾನಿ ನಮೋ

ಅಯೋಧ್ಯೆ: ಅಯೋಧ್ಯೆಗೆ ಕಳೆದ 50 ವರ್ಷಗಳ ಅವಧಿಯಲ್ಲಿ ಪ್ರಧಾನಮಂತ್ರಿಗಳು ಭೇಟಿ ನೀಡಿದ್ದಾರಾದರೂ, ಅವರೆಲ್ಲರೂ ರಾಮಜನ್ಮಭೂಮಿಸ್ಥಳಕ್ಕೆ ಭೇಟಿ ನೀಡಿಲ್ಲ. ರಾಮಜನ್ಮಭೂಮಿ ಸ್ಥಳಕ್ಕೆ ಭೇಟಿ ನೀಡುತ್ತಿರುವ  ಮೊದಲ ಪ್ರಧಾನಿ ನರೇಂದ್ರ ಮೋದಿ. ಅದರೊಂದಿಗೆ ಶ್ರೀರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮದಲ್ಲೂ ಅವರು ಭಾಗಿಯಾಗ್ತಾ ಇರುವುದು ವಿಶೇಷ.

ಆಂಜನೇಯನ ಜನ್ಮಸ್ಥಳ ಬೇರೆ ಕಡೆಯಾದರೂ, ಅಯೋಧ್ಯೆಯೊಂದಿಗಿನ ಹನುಮಾನ್​ ಭಗವಾನ್​ ನಂಟು ಇಂದಿನ ದಿನವನ್ನೂ ಇನ್ನೂ ವಿಶೇಷವಾಗಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನ್ಮಭೂಮಿಗೆ ತೆರಳುವ ಮುನ್ನ ಹನುಮಾನ್ ಗುಡಿಗೂ ತೆರಳಿ ಪೂಜೆ ಸಲ್ಲಿಸುತ್ತಿರುವುದು ಗಮನಾರ್ಹ.  ಪ್ರಧಾನಿ ನಮೋ ಭೇಟಿ ಕೂಡ ಐತಿಹಾಸಿಕ ಕಾರ್ಯಕ್ರಮದಲ್ಲಿ ಇತಿಹಾಸವನ್ನು ಬರೆಯಲು ಸಜ್ಜಾಗಿದೆ.

 
 
 
 
 
 
 
 
 

Leave a Reply