Janardhan Kodavoor/ Team KaravaliXpress
25.6 C
Udupi
Sunday, July 3, 2022
Sathyanatha Stores Brahmavara

ನಿವೃತ್ತಿ ನಂತರ ಧೋನಿ ಸೇನೆ

ನವದೆಹಲಿ: ನಿವೃತ್ತಿ ನಂತರದಲ್ಲಿ ಧೋನಿ ಕೋಚ್ ಆಗುವರೇ, ಉದ್ಯಮದಲ್ಲಿ ಇನ್ನಷ್ಟು ಹೆಚ್ಚು ತೊಡಗಿಕೊಳ್ಳುವರೇ ಅಥವಾ ರಾಜಕೀಯದತ್ತ ಒಲವು ತೋರುವರೇ ಎಂಬ ಪ್ರಶ್ನೆಗಳು ಎದ್ದಿವೆ. ಇದಕ್ಕೆ ಉತ್ತರ ನೀಡಿರುವ ಧೋನಿ ಅವರ ಆತ್ಮೀಯ ಗೆಳೆಯ ಹಾಗೂ ಉದ್ಯಮ ಪಾಲುದಾರ ಅರುಣ್ ಪಾಂಡೆ, ಧೋನಿ ಭಾರತೀಯ ಸೇನೆಯೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸಿದ್ದಾರೆ ಎಂದಿದ್ದಾರೆ.

ಆರ್ಮಿಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿರುವ ಧೋನಿ, ಕಳೆದ ವರ್ಷ ವಿಶ್ವಕಪ್ ನಂತರದಲ್ಲಿ ಒಂದು ತಿಂಗಳ ಕಾಲ ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದರು. ನಿವೃತ್ತಿಯ ನಂತರದಲ್ಲಿ ಬ್ರಾಂಡ್ ಮೌಲ್ಯ ಕಡಿಮೆ ಯಾಗುವ ಬಗ್ಗೆ ಧೋನಿ ತಲೆಕೆಡಿಸಿಕೊಂಡಿಲ್ಲ ಎಂದು ಪಾಂಡೆ ತಿಳಿಸಿದ್ದಾರೆ. ಕಳೆದ ವರ್ಷ ವಿಶ್ವಕಪ್ ನಂತರದಲ್ಲಿ ಧೋನಿ 10 ಹೊಸ ಬ್ರಾಂಡ್‌ಗಳ ಪ್ರಚಾರಕ್ಕೆ ಒಪ್ಪಂದ ಮಾಡಿಕೊಂಡಿದ್ದರು. ಹೀಗಾಗಿ ಧೋನಿ ಕ್ರಿಕೆಟ್ ಆಡುತ್ತಿರಲಿ, ಆಡದೇ ಇರಲಿ ಅವರು ಯವಾಗಲೂ ಯುವಕರ ಐಕಾನ್ ಆಗಿರುತ್ತಾರೆ ಎಂದು ಅರುಣ್ ಪಾಂಡೆ ವಿವರಿಸಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!