ಮದ್ಯಪಾನರಹಿತ ಯಕೃತ್ತಿನ ರೋಗಗಳ ಕುರಿತು ಸರ್ಕಾರಿ ವೈದ್ಯರಿಗೆ ಕಾರ್ಯಾಗಾರ ಮತ್ತು ತರಬೇತಿ ಕಾರ್ಯಕ್ರಮ

ಮಣಿಪಾಲ, 12ನೇ ಜೂನ್ 2022: ಪ್ರತಿ ವರ್ಷ ಜೂನ್ ತಿಂಗಳ ಎರಡನೇ ಗುರುವಾರವನ್ನು ಅಂತರಾಷ್ಟ್ರೀಯ ನಾನ್-ಆಲ್ಕೊಹಾಲಿಕ್ ಸ್ಟೀಟೋಹೆಪಟೈಟಿಸ್ (NASH) ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಮದ್ಯಪಾನರಹಿತ ಸ್ಟೀಟೋಹೆಪಟೈಟಿಸ್, ಅಥವಾ ನ್ಯಾಶ್ ಬಗ್ಗೆ ಜಾಗೃತಿಯನ್ನು ಹೆಚ್ಚಿಸಲು ಸಮರ್ಪಿಸಲಾಗಿದೆ. ಮುಖ್ಯವಾಗಿ ಸಾರ್ವಜನಿಕರು, ಅಪಾಯದಲ್ಲಿರುವ ರೋಗಿಗಳು, ವೈದ್ಯಕೀಯ ಸಮುದಾಯ, ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಮತ್ತು ಮಾಧ್ಯಮಗಳಿಗೆ. ಇದರ ಅಂಗವಾಗಿ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಮತ್ತು ಸಮುದಾಯ ವೈದ್ಯಕೀಯ ವಿಭಾಗವು ಜಂಟಿಯಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ಜಿಲ್ಲೆಯ ಸಹಯೋಗದಲ್ಲಿ ಮದ್ಯಪಾನರಹಿತ ಯಕೃತ್ತಿನ ರೋಗಗಳ ಕುರಿತು ಸರ್ಕಾರಿ ವೈದ್ಯರಿಗೆ ಕಾರ್ಯಾಗಾರ ಮತ್ತು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಕೆಎಂಸಿ ಡೀನ್ ಡಾ.ಶರತ್ ಕೆ.ರಾವ್ ಅವರು, ಮದ್ಯಪಾನರಹಿತ ಯಕೃತ್ತ ನ ಕಾಯಿಲೆಗೆ ಜೀವನಶೈಲಿ ಪ್ರಮುಖ ಕಾರಣವಾಗಿದೆ. ಸ್ಥೂಲಕಾಯತೆ, ಮತ್ತು ಜಂಕ್ ಫುಡ್ ಇದರಲ್ಲಿ ಮುಖ್ಯವಾದುದು. ಸುಲಭವಾಗಿ ತಡೆಗಟ್ಟಬಹುದಾದ ರೋಗ. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಸಮುದಾಯದೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವ ಕಾರಣ ಈ ರೋಗದ ಬಗ್ಗೆ ಅವರಿಗೆ ತಿಳುವಳಿಕೆ ಮತ್ತು ತರಬೇತಿ ನೀಡಲು ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಡಾ. ರಾಬರ್ಟ್ ರೆಬೆಲ್ಲೋ, ಆಡಳಿತ ಶಸ್ತ್ರಚಿಕಿತ್ಸಕರು , ಸರಕಾರಿ ಆಸ್ಪತ್ರೆ ,ಕುಂದಾಪುರ ಮತ್ತು ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರದ ಅರಿವಳಿಕೆ ತಜ್ಞ ಡಾ. ಅಜಿತ್‌ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. .

ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಶಿರನ್ ಶೆಟ್ಟಿ ಮತ್ತು ಸಮುದಾಯ ವೈದ್ಯಶಾಸ್ತ್ರದ ಸಹ ಪ್ರಾಧ್ಯಾಪಕ ಡಾ.ಮುರಳೀಧರ ಕುಲಕರ್ಣಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಸ್ವಾಗತಿಸಿ, ಸಮುದಾಯ ವೈದ್ಯ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ಅಶ್ವಿನಿಕುಮಾರ್ ವಂದಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಕಚೇರಿಯ 100ಕ್ಕೂ ಹೆಚ್ಚು ವೈದ್ಯರು ಭಾಗವಹಿಸಿದ್ದರು .

 
 
 
 
 
 
 
 
 
 
 

Leave a Reply