ಮಾಜಿ ರಾಷ್ಟ್ರಪತಿಯ ಕರವಸ್ರ ಹೆಕ್ಕಿ ಕೊಟ್ಟ ನಮೋ:

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಯೋವೃದ್ಧರ ಕುರಿತಾಗಿ, ಬಡವರ ಕುರಿತಾಗಿ ಅವರು ಸಹಾನುಭೂತಿ ತೋರಿಸಿದ ಸಾಕಷ್ಟು ಚಿತ್ರಗಳಿವೆ. ಆದರೆ, ಸೋಮವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ ಅವರ ಕರವಸ್ತ್ರ ನೆಲಕ್ಕೆ ಬಿದ್ದಿತ್ತು.

ಇದನ್ನು ನರೇಂದ್ರ ಮೋದಿ ಎತ್ತಿಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. ಅನಾರೋಗ್ಯದ ಕಾರಣ, ಪ್ರತಿಭಾ ಪಾಟೀಲ್‌ ಅವರಿಗೆ ಕರವಸ್ತ್ರವನ್ನು ಎತ್ತಿಕೊಳ್ಳಲು ಸಾಧ್ಯವಾಗಲಿಲ್ಲ.

ಈ ವೇಳೆ ಪ್ರಧಾನಿ ಮೋದಿ ಅವರು ಸಹಾಯಕ್ಕೆ ಬಂದರು. ಜುಲೈ 25 ರಂದು, ಬಡಕಟ್ಟಿ ಜನಾಂಗದ ಮಹಿಳೆ ಭಾರತದ ಅತಿದೊಡ್ಡ ಸಾಂವಿಧಾನಿಕ ಹುದ್ದೆಗೆ ಅಧಿಕೃತವಾಗಿ ಪದಗ್ರಹಣ ಮಾಡಿದರು.

ಇದರ ಸಂಪೂರ್ಣ ಸಮಾರಂಭ ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ನಡೆಯಿತು. ದ್ರೌಪದಿ ಮುರ್ಮು ಅವರಿಗೆ  ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಪ್ರಮಾಣವಚನ ಬೋಧನೆ ಮಾಡಿದರು. ಮುರ್ಮು, ಭಾರತದ ಅತ್ಯಂತ ಕಿರಿಯ ರಾಷ್ಟ್ರಪತಿ ಮತ್ತು ಸ್ವಾತಂತ್ರ್ಯದ ನಂತರ ಜನಿಸಿದ ಭಾರತದ ಮೊದಲ ರಾಷ್ಟ್ರಪತಿ ಎನಿಸಿದ್ದಾರೆ.

ದೇಶದ ಬುಡಕಟ್ಟು ಜನಾಂಗದ ಮಹಿಳೆಯೊಬ್ಬಳು ಈ ಪದವಿಗೆ ಏರಿದ್ದು ಇದು ಮೊದಲ ಬಾರಿ, ಒಟ್ಟಾರೆಯಾಗಿ ರಾಷ್ಟ್ರಪತಿಯಾದ 2ನೇ ಮಹಿಳೆ ಇವರಾಗಿದ್ದಾರೆ.

 
 
 
 
 
 
 
 
 
 
 

Leave a Reply