ಉಡುಪಿಯ 6 ವಿದ್ಯಾರ್ಥಿಗಳ ಹಿಂದೆ ಕಾಣದ ಶಕ್ತಿ ಇದೆ: ಸಚಿವ ನಾಗೇಶ್​

ಚಿಕ್ಕಮಗಳೂರು: ಉಡುಪಿಯಲ್ಲಿ ಯಾರಿಂದಲೋ ಪ್ರೇರಿತವಾಗಿರುವ ಆರು ವಿದ್ಯಾರ್ಥಿನಿಯರ ಹಿಂದೆ ಕಾಣದ ಶಕ್ತಿ ಇದ್ದು, ಅವರ ಕೈಯಿಂದ ವಿದ್ಯಾರ್ಥಿಗಳನ್ನು ಬಿಡಿಸಲು ಬಹಳಷ್ಟು ಸಮಯ ಬೇಕಾಗುತ್ತೆ. ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಬನ್ನಿ ಎಂದು ಕರೆಯಬಹುದು.

ಆದರೆ ಪರೀಕ್ಷಾ ಕೇಂದ್ರಕ್ಕೆ ಎಳೆದುಕೊಂಡು ಬಂದು ವಿದ್ಯಾರ್ಥಿಗಳನ್ನು ಕೂರಿಸಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಹೇಳಿದರು

.ದ್ವಿತೀಯ ಪಿಯು ಪರೀಕ್ಷೆ ಆರಂಭವಾದ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ಸರ್ಕಾರಿ ಜೂನಿಯರ್​ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಶುಭ ಕೋರಿದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಶೇ.99 ವಿದ್ಯಾರ್ಥಿನಿಯರು ಹಿಜಾಬ್​ ತೆರೆದು ತರಗತಿಗಳಿಗೆ ಹಾಜರಾಗಿದ್ದಾರೆ. ಹಿಜಾಬ್​ಗಿಂತ ಶಿಕ್ಷಣವೇ ಮುಖ್ಯ ಎಂದು ಪರೀಕ್ಷೆಗಳನ್ನು ಬರೆದಿದ್ದಾರೆ. 6 ಲಕ್ಷ ವಿದ್ಯಾರ್ಥಿಗಳು ಮುಖ್ಯವೇ ಹೊರತು 6 ವಿದ್ಯಾರ್ಥಿಗಳಲ್ಲ. ಗೈರಾದ ಬಗ್ಗೆ ಶಿಕ್ಷಣ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳುತ್ತದೆ. ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಬನ್ನಿ ಎಂದು ಕರೆಯಬಹುದು. ಆದರೆ ಪರೀಕ್ಷಾ ಕೇಂದ್ರಕ್ಕೆ ಎಳೆದುಕೊಂಡು ಬಂದು ವಿದ್ಯಾರ್ಥಿಗಳನ್ನು ಕೂರಿಸಲು ಸಾಧ್ಯವಿಲ್ಲ. ಇದು ಪ್ರಜಾಪ್ರಭುತ್ವ ರಾಷ್ಟ್ರ. ಎಲ್ಲರಿಗೂ ಸ್ವಾತಂತ್ರವಿದೆ. ಯಾರನ್ನೂ ಬಲವಂತ ಮಾಡಲಾಗುವುದಿಲ್ಲ. ಸರ್ಕಾರಿ ಜೂನಿಯರ್​ ಕಾಲೇಜು ಪರೀಕ್ಷಾ ಕೇಂದ್ರಕ್ಕೂ ಬಹಳಷ್ಟು ವಿದ್ಯಾರ್ಥಿನಿಯರು ಬಂದಿದ್ದಾರೆ ಎಂದರು.

 
 
 
 
 
 
 
 
 

Leave a Reply