ಶ್ರೀಕೃಷ್ಣ ನಗರಿ ಉಡುಪಿಯ ನಗರಸಭೆಯಲ್ಲಿ ಮಹಿಳಾ ಪಾರುಪತ್ಯ‌..

ಉತ್ತರದ ತುತ್ತ ತುದಿಯ ಸುಮಿತ್ರಾ ನಾಯಕ್​ ಅಧ್ಯಕ್ಷ​ರು.. ಪಕ್ಷಿಮದ ತುತ್ತತುದಿಯ ಲಕ್ಷ್ಮೀ ಮೆಂಡನ್ ಉಪಾಧ್ಯಕ್ಷೆ 
ಉಡುಪಿ:​ ​ಉಡುಪಿ ನಗರಸಭೆಯ  ನೂತನ ಅಧ್ಯಕ್ಷರಾಗಿ ಪರ್ಕಳದ ಸುಮಿತ್ರಾ ನಾಯಕ್​ ಹಾಗು ​ ಉಪಾಧ್ಯಕ್ಷರಾಗಿ ಲಕ್ಷ್ಮೀ ಮೆಂಡನ್ ಅವಿರೋಧವಾಗಿ ಆಯ್ಕೆ​. 
ಚುನಾವಣಾಧಿಕಾರಿಯಾಗಿ ಕುಂದಾಪುರ ಉಪವಿಭಾಗಾಧಿಕಾರಿ ಕೆ ರಾಜು ಅವರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಯ ಆಯ್ಕೆ ಪ್ರಕ್ರಿಯೆಯನ್ನು ಗುರುವಾರ ನಡೆಸಿಕೊಟ್ಟರು. ಉಡುಪಿ ನಗರಸಭೆಯ 35 ವಾರ್ಡ್ ಗಳಲ್ಲಿ ಬಿಜೆಪಿ 31 ಮತ್ತು ಕಾಂಗ್ರೆಸ್ 4 ಸದಸ್ಯ​ ಬಲವನ್ನು ಹೊಂದಿದೆ .
ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಉಡುಪಿ ಶಾಸಕ ರಘುಪತಿ ಭಟ್ ಅವರು ಉಡುಪಿ ನಗರಸಭೆ ವಿ ಎಸ್ ಆಚಾರ್ಯ ಅವರ ಕಾಲದಿಂದಲೂ ರಾಷ್ಟ್ರಕ್ಕೆ ಮಾದರಿಯಾಗಿ ಹೆಸರು ಗಳಿಸಿದೆ. ದೇಶದಲ್ಲಿಯೇ ಮೊದಲ ಬಾರಿ ತಲೆಯ ಮೇಲೆ ಮಲ ಹೊರುವ ಪದ್ದತಿಯನ್ನು ನಿಷೇಧಿಸಿದ ಕೀರ್ತಿ ಉಡು​ಪಿ  ನಗರ​​ಸಭೆ​ಗೆ ಸಲ್ಲುತ್ತದೆ.  
ಉಡುಪಿ ನಗರಸಭೆ​ಯಲ್ಲಿ  ಹಲವಾರು ಗಣ್ಯರು ​ಆಡಳಿತ ನಡೆಸಿದ್ದು ​ಅವರ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ನೂತನ ಅಧ್ಯಕ್ಷ​ರಿಗಿದೆ  ಅವರಿಗೆ 35 ಮಂದಿ ಸದಸ್ಯರೂ ಕೂಡ ಸಾಥ್ ನೀಡಿ ಮಾದರಿ ನಗರಸಭೆಯಾಗಿ ಮಾಡು ವಂತೆ ಕರೆ ನೀಡಿದರು.
ವಿರೋಧ ಪಕ್ಷದ ಪರವಾಗಿ ಮಾತನಾಡಿದ ರಮೇಶ್ ಕಾಂಚನ್ ಅವರು ನೂತನ ಅಧ್ಯಕ್ಷರಿಗೆ ನಗರಸಭೆಯ ಬಗ್ಗೆ ಉತ್ತಮವಾದ ಅನುಭವವಿದ್ದು ಮೂರನೇ ಬಾರಿಗೆ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದು ಪ್ರಸ್ತುತ ಅಧ್ಯಕ್ಷರಾಗಿದ್ದಾರೆ. ನಗರಸಭೆಯಲ್ಲಿ ಮಾಡುವ ಉತ್ತಮ ​ಆಡಳಿತಾತ್ಮಕ ಕೆಲಸಗಳಿಗೆ ವಿರೋಧ ಪಕ್ಷವಾಗಿ ಕಾಂಗ್ರೆಸ್ ಸದಾ ಬೆಂಬಲ ನೀಡಲಿದ್ದು ಸಂಖ್ಯೆಯ ಅನುಗುಣ ದಲ್ಲಿ ಕಾಂಗ್ರೆಸ್ ಪಕ್ಷದಿಂದ ಕೇವಲ ನಾಲ್ಕು ಮಂದಿ ಇದ್ದರೂ ಕೂಡ ನಮ್ಮನ್ನು ಕಡೆಗಣಿಸು​ವುದು ಕಂಡು ಬಂದರೆ ಸದನದ ಒಳಗೂ ಹೊರಗೂ ಪ್ರತಿಭಟಿಸಲಾಗುವುದು ಎಂದರು.

ನೂತನ ಅಧ್ಯಕ್ಷೆ ಸುಮೀತ್ರಾ ನಾಯಕ್ ಮಾತನಾಡಿ ತನ್ನನ್ನು ಪಕ್ಷ ಉನ್ನತ ಹುದ್ದೆಗೆ ಆಯ್ಕೆ ಮಾಡಿರುವುದಕ್ಕೆ ಧನ್ಯವಾದ ಸಲ್ಲಿಸಿ ಅಧ್ಯಕ್ಷ ಸ್ಥಾನ ಎನ್ನುವುದು ಒಂದು ಹುದ್ದೆ ಎನ್ನುವುದನ್ನು ಮರೆತು ಅದೊಂದು ಜವಾಬ್ದಾರಿ ಎಂದು ತಿಳಿದು ಕೆಲಸ ನಿರ್ವಹಿಸುತ್ತೇನೆ. ಎಲ್ಲರ ಸಹಕಾರ ಮಾರ್ಗದರ್ಶನದಿಂದ ನಗರಸಭೆಯಲ್ಲಿ ಸ್ವಚ್ಚ ಆಡಳಿತ​ದೊಂದಿಗೆ ​ ಪ್ಲಾಸ್ಟಿಕ್ ಮುಕ್ತ ನಗರಸಭೆ ಮಾಡುವತ್ತ ​ವಿಶೇಷ ಗಮನ ಕೊಡುವುದಾಗಿ ​ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸದಸ್ಯರಾದ ಅಮೃತಾ ಕೃಷ್ಣಮೂರ್ತಿ​,  ​​ಪ್ರಭಾಕರ ಪೂಜಾರಿ, ಯೋಗಿಶ್ ಸಾಲಿಯಾನ್, ವಿಜಯ ಕೊಡವೂರು, ಕ್ರಷ್ಣರಾಜ್ ಕೊಡಂಚ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದರು.

 
 
 
 
 
 
 
 
 
 
 

Leave a Reply