Janardhan Kodavoor/ Team KaravaliXpress
23.6 C
Udupi
Friday, December 2, 2022
Sathyanatha Stores Brahmavara

ಮೈಸೂರಿನಲ್ಲಿ ಬ್ರಾಹ್ಮಣರ ಬೃಹತ್ ಪ್ರತಿಭಟನೆ

 ಮೈಸೂರು- ಬ್ರಾಹ್ಮಣರ ವಿರುದ್ಧ ಸಿದ್ದರಾಮಯ್ಯ ಪರಮಾಪ್ತ ಪ. ಮಲ್ಲೇಶ್ ಅವಹೇಳನಕಾರಿ ಹೇಳಿಕೆ ವಿರೋಧಿಸಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಬ್ರಾಹ್ಮಣ ಸಂಘಟನೆ ಯವರು ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಬ್ರಾಹ್ಮಣ ಸಮುದಾಯ ಜನ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೈಸೂರಿನ ಗನ್ ಗೌಸ್ ಬಳಿಯ ಶಂಕರ ಮಠದಿಂದ ಹೊರಟಿತು. ಚಾಮರಾಜ ಜೋಡಿ ರಸ್ತೆ, ಶಾಂತಲಾ ಚಿತ್ರಮಂದಿರ, ಡಿ ದೇವರಾಜ ಅರಸು ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು.

ಹಿಂದೆಂದೂ ಕಂಡರಿಯದ ಬ್ರಾಹ್ಮಣ ಸಮುದಾಯದ ಪ್ರತಿಭಟನಾ ಮೆರವಣಿಗೆ ಇಂದು ನಡೆಯಿತು. ಬ್ರಾಹ್ಮಣ ವಿರೋಧಿಗಳಿಗೆ ದಿಕ್ಕಾರ, ಪ ಮಲ್ಲೇಶ್ ಗೆ ದಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮೂಡಾ ಮಾಜಿ ಅಧ್ಯಕ್ಷ ರಾಜೀವ್, ಶಾಸಕ ರಾಮದಾಸ್ ಸೇರಿದಂತೆ ಸಹಸ್ರಾರು ಜನ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!