ಮುಸ್ಲಿಂ ಸಮುದಾಯದಲ್ಲಿರುವ ಬಹು ಪತ್ನಿತ್ವ ವ್ಯವಸ್ಥೆಗೆ ನಿಷೇಧ ತನ್ನಿ

ಉಡುಪಿ: ಮುಸ್ಲಿಂ ಸಮುದಾಯದಲ್ಲಿರುವ ಬಹು ಪತ್ನಿತ್ವ ವ್ಯವಸ್ಥೆಯನ್ನು ನಿಷೇಧ ಮಾಡಬೇಕೆಂಬ ಕೂಗು ಮತ್ತೇ ಜೀವ ಪಡೆದಿದ್ದು, ಪಡುಬಿದ್ರೆಯ ಮುಸ್ಲಿಂ ಕುಟುಂಬವೊಂದು ಉಡುಪಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಪ್ರಧಾನಿ ಮೋದಿಯವರ ಸರಕಾರ ಮುಸ್ಲಿಂ ಸಮಾಜದಲ್ಲಿದ್ದ ಅನಿಷ್ಟ ಪದ್ದತಿಯಾದ ತ್ರಿವಳಿ ತಲಾಖ್ ಅನ್ನು ನಿಷೇಧಿಸಿರುವಂತೆ ಬಹುಪತ್ನಿತ್ವವನ್ನು ನಿಷೇಧ ಮಾಡಬೇಕೆಂದು ಮನವಿ ಮಾಡಿದ್ದಾರೆ.

ವೃತ್ತಿಯಲ್ಲಿ ಡ್ರೈವರ್ ಆಗಿರುವ ಪಡುಬಿದ್ರೆಯ ಮಹಮ್ಮದ್ ಇಲಿಯಾಸ್ ಮತ್ತು ಅವರ ಅಕ್ಕಾ ಪತ್ರಿಕಾಗೋಷ್ಟಿ ನಡೆಸಿ ತಮಗಾದ ಅನ್ಯಾಯ ಬಗ್ಗೆ ಅಳಲನ್ನು ತೋಡಿ ಕೊಂಡಿದ್ದಾರೆ. ಮಹಮ್ಮದ್ ಇಲಿಯಾಸ್ ವೃತ್ತಿಯಲ್ಲಿ ಡ್ರೈವರ್ ಆಗಿರುವ ಈತ ತಾನು ಏಳು ವರ್ಷ ಪ್ರೀತಿಸಿದ ಯುವತಿಯನ್ನು ನಾಲ್ಕು ವರ್ಷದ ಹಿಂದೆ ಮದುವೆಯಾಗಿ ಒಂದು ಗಂಡು ಮಗುವಿನ ಜೊತೆ ಸುಖ ಸಂಸಾರವನ್ನು ನಡೆಸುತ್ತಿದ್ದರು.

ಆದರೆ ಈಗ ಈತನ ಪತ್ನಿ ಈತನನ್ನು ತೊರೆದು, ಮದುವೆಯಾಗಿ ಮೂರು ಮಕ್ಕಳಿರುವ ಶಾಫಿ ಕಲಂದರ್ ಎಂಬಾತನ ಜೊತೆ ಹೋಗಿದ್ದಾಳೆ ಎಂದು ಇಲಿಯಾಸ್ ಆರೋಪಿಸಿದ್ದಾರೆ. ಈ ಶಾಫಿ ಕಲಂದರ್ ಪಡುಬಿದ್ರಿ ಪರಿಸರದಲ್ಲಿ ಕಾಂಗ್ರೆಸ್ ಬೆಂಬಲಿತ ಪಂಚಾಯತ್ ಸದಸ್ಯನಾಗಿದ್ದು, ಕೆಲವೊಂದು ಅಕ್ರಮ ಚಟುವಟಿಕೆಗಳಲ್ಲೂ ಈತನ ಹೆಸರು ಈ ಹಿಂದೆಯೂ ಕೇಳಿ ಬಂದಿತ್ತು ಎಂದು ಮಾಧ್ಯಮಗಳಿಗೆ ಇಲಿಯಾಸ್ ಮಾಹಿತಿ ನೀಡಿದ್ದಾರೆ.

ಶಾಫಿ, ಇಲಿಯಾಸ್ ಗೆ ಕರೆ ಮಾಡಿ ನೀನು ಜೀನತ್ ಗೆ ತಲಾಕ್ ನೀಡದೆ ಇದ್ದರೆ ನಿನ್ನ ಮಗುವನ್ನು ನಿಧಾನ ವಿಷ ( slow poison ) ಕೊಟ್ಟು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ದೂರು ನೀಡಿದರೂ ಪೊಲೀಸರು ಕೂಡ ಶಾಫಿ ಪರ ನಿಂತಿದ್ದಾರೆ ಎಂದು ಇಲಿಯಾಸ್ ಮಾಧ್ಯಮದ ಮುಂದೆ ತನ್ನ ಅಳಲನ್ನು ತೋಡಿಕೊಂಡಿದ್ದಾರೆ

ಶಾಫಿ ಕಲಂದರ್ ಮೊದಲ ಮಗಳಿಗೆ 18 ವರ್ಷ ವಯಸ್ಸು. ಈಗ ಆತ ಕರೆದುಕೊಂಡು ಹೋಗಿರುವ ಜೀನತ್ 22 ವರ್ಷದವಳು. ತನ್ನ ಮಗಳ ವಯಸ್ಸಿನ ಯುವತಿಯ ಜೊತೆ ಮದುವೆಯಾಗಲು ಮುಂದಾಗಿರುವ ಶಾಫಿ ಕಲಂದರ್ ಗೆ ಕಾನೂನಿನ ಬೆಂಬಲವೂ ಇದೆ. ಮುಸ್ಲಿಂ ಸಮುದಾಯದಲ್ಲಿ ಒಂದಕ್ಕಿಂತ ಹೆಚ್ಚು ಮದುವೆಯಾಗಲು ಅವಕಾಶ ಇರುವುದರಿಂದ ಆತನ ಮೊದಲ ಪತ್ನಿ ಮತ್ತು ಇತ್ತ ಕಡೆ ಹೆಂಡತಿಯನ್ನು ಕಳೆದುಕೊಂಡ ಇಲಿಯಾಸ್ ಇಬ್ಬರು  ಅಸಹಾಯಕರಾಗಿದ್ದಾರೆ.

ಈ ಕೌಟುಂಬಿಕ ಕಲಹದ ಆರೋಪ ಕೇಳಿ ಬರುತ್ತಿದ್ದಂತೆ ಜೀನತ್ ತನ್ನ ಪತಿ ಇಲಿಯಾಸ್ ಮತ್ತು ಆತನ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ಸೇರಿದಂತೆ ಕೌಟುಂಬಿಕ ಹಿಂಸೆ ಹಲ್ಲೆ ಇತ್ಯಾದಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ಪತಿ ಮತ್ತು ನಾದಿನಿಯರು ಭಾವಂದಿರು ಅತ್ತೆ ನಾನಾ ರೀತಿಯಲ್ಲಿ ಕಿರುಕುಳ ನೀಡಿರುವುದಾಗಿ ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಸ್ಲಿಂ ಸಮುದಾಯದ ಬಹುಪತ್ನಿತ್ವ ಪದ್ದತಿಯಿಂದಲೇ ಈ ರೀತಿ ನಡೆಯಬಾರದ್ದು ನಡೆಯುತ್ತಿದೆ. ಹೀಗಾಗಿ ತಲಾಖ್ ನಿಷೇಧದಂತೆ ಬಹುಪತ್ನಿತ್ವ ಪದ್ಧತಿಯನ್ನು ನಿಷೇಧ ಮಾಡಿ ಎಂದು ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದಾರೆ
ಆಯೇಷಾ, ಇಲಿಯಾಸ್ ಅಕ್ಕಾ

 
 
 
 
 
 
 
 
 
 
 

Leave a Reply