Janardhan Kodavoor/ Team KaravaliXpress
24.6 C
Udupi
Thursday, June 30, 2022
Sathyanatha Stores Brahmavara

ಸಂಸ್ಕೃತಿ ಚಳುವಳಿ- 3ರಲ್ಲಿ ಮುನಿಯಾಲ್ ಆಯುರ್ವೇದ ಕಾಲೇಜ್ ವಿದ್ಯಾರ್ಥಿಗಳಿಗೆ ಬಹುಮಾನದ ಸುರಿಮಳೆ

ದಿನಾಂಕ 13.05.2022 ಮತ್ತು14.05.2022ರಂದು
ಮೈಸೂರಿನಲ್ಲಿ ಜರುಗಿದ ವಿದ್ಯಾರ್ಥಿ ಸಂಸ್ಕೃತಿ ಚಳುವಳಿ- ೩ರಲ್ಲಿ
ಮುನಿಯಾಲ್ ಆಯುರ್ವೇದ ಕಾಲೇಜ್ ಮಣಿಪಾಲ್‌ನ
ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ
ಭಾಗವಹಿಸಿ ಬಹುಮಾನಗಳನ್ನು ಪಡೆದಿರುತ್ತಾರೆ.

ಶಾಸ್ತ್ರೀಯ ಸಮೂಹ ಸ್ಪರ್ಧೆಯಲ್ಲಿ ಸಂಸ್ಥೆಯ ಚೈತನ್ಯಾ,
ಮಯೂರಿ, ಮೇಘನ, ಪ್ರಸಿದ್ಧಿ, ರಕ್ಷಿತಾ, ಸ್ಟೀವಾ, ಛಾಯ,
ಆರ್‌ಎಸ್ ಶಾಲಿನಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಏಕಾಂಕ ನಾಟಕ ಸ್ಪರ್ಧೆಯಲ್ಲಿ ಸಂಸ್ಥೆಯ ಆಮೋದ್,
ಮಯೂರಿ, ಚೈತನ್ಯಾ, ಪವನ್,ರಕ್ಷಿತ್, ಪ್ರಸಿದ್ಧಿ, ಛಾಯ,
ಚೈತ್ರ, ಹರ್ಷಿತ, ವೀಣಾ, ಶ್ರೀನಿಧಿ, ಶ್ರೇಯ, ಮನೋಹರ್
ಅವರು ತಾವೇ ರಚಿಸಿದ ದೂತವಾಕ್ಯ ನಾಟಕ ಪ್ರದರ್ಶಿಸಿದ್ದು
ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

ಉತ್ತಮ ನಟ
ಪ್ರಶಸ್ತಿಯನ್ನು ಕೃಷ್ಣ ಪಾತ್ರ ಮಾಡಿದ ಚೈತನ್ಯಾ
ತನ್ನದಾಗಿಸಿಕೊಂಡಿದ್ದು, ಶ್ರೀಪಾದ ಭಟ್ ಅವರು ಉತ್ತಮ
ನಿರ್ದೇಶಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಸ್ಪರ್ಧೆಯಲ್ಲಿ
ಭಾಗವಹಿಸಿದ ಮತ್ತು ಬಹುಮಾನವನ್ನು ಪಡೆದ
ವಿದ್ಯಾರ್ಥಿಗಳಿಗೆ ಸಂಸ್ಥೆಯಿ೦ದ ಅಭಿನಂದನೆ ಸಲ್ಲಿಸಿರುತ್ತಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!