ಸಮುದಾಯದ ಆರೋಗ್ಯ ಮತ್ತು ಪೌಷ್ಟಿಕತೆಯ ಸವಾಲುಗಳು ಹಾಗೂ ನಿವಾರಣೆ ‘

ಮಣಿಪಾಲದ ಮುನಿಯಾಲು ಆಯುರ್ವೇದ ಕಾಲೇಜಿನ ಎನ್. ಎಸ್. ಎಸ್. ಘಟಕ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಬೆಂಗಳೂರು, ಯುನಿಸೆಫ್ ಸಹಭಾಗಿತ್ವದಲ್ಲಿ ‘ಆರೋಗ್ಯ ಮತ್ತು ಪೌಷ್ಟಿಕ ಸೇವೆಗಳನ್ನು ಪಡೆಯಲು ಸಮುದಾಯಗಳಲ್ಲಿ ಸಾಮಾಜಿಕ ಮತ್ತು ನಡವಳಿಕೆಯ ಬದಲಾವಣೆಗಾಗಿ ಎನ್. ಎಸ್. ಎಸ್. ಸ್ವಯಂ ಸೇವಕರ ತೊಡಗಿಸಿಕೊಳ್ಳುವಿಕೆ ಯೋಜನೆ‘ ಕಾರ‍್ಯಕ್ರಮವು ಶಿಬಿರಗೀತೆಯಿಂದ ಪ್ರಾರಂಭಗೊಂಡಿತು .

ಕಾಲೇಜಿನ ಎನ್. ಎಸ್. ಎಸ್ ಅಧಿಕಾರಿ ಡಾ| ಸುದೀಪ ಎನ್. ಎಸ್. ಎಸ್. ಮಹತ್ವ ಮತ್ತು ಯೋಜನೆಯ ಬಗ್ಗೆ ಪ್ರಾಸ್ತಾವಿಕವಾಗಿ ವಿವರಿಸಿದರು. ಕಾರ‍್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಣಿಪಾಲದ ನಗರಸಭೆ ಸದಸ್ಯೆ ಶ್ರೀಮತಿ ಕಲ್ಪನಾ ಸುಧಾಮ ಇವರು ಆಗಮಿಸಿ ಸೇವೆಯ ಮಹತ್ವವನ್ನು ತಿಳಿಸಿದರು. ಡಾ| ನವ್ಯ ವ್ಯಾಸ್ , ಸಹಪ್ರಾಧ್ಯಾಪಕಿ- ಸೀನಿಯರ್ ಸ್ಕೇಲ್ , ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ,ಮಾಹೆ, ಮಣಿಪಾಲ ಇವರು ‘ಸಮುದಾಯದ ಆರೋಗ್ಯ ಮತ್ತು ಪೌಷ್ಟಿಕತೆಯ ಸವಾಲುಗಳು ಹಾಗೂ ನಿವಾರಣೆ ‘ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿದರು. ವೇದಿಕೆಯಲ್ಲಿ ಮುನಿಯಾಲು ಆಯುರ್ವೆದ ಕಾಲೇಜಿನ ಪ್ರಾಂಶುಪಾಲ ಡಾ| ಸತ್ಯನಾರಯಣ ಬಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಬಾಲರೋಗ ವಿಭಾಗದ ಸಹಪ್ರಾಧ್ಯಪಕಿಯಾದ ಡಾ| ನಿವೇದಿತಾ ಹೆಬ್ಬಾರ್ ‘ಪ್ರತಿರಕ್ಷಣೆ’ ವಿಷಯ ಹಾಗೂ ಸ್ವಸ್ಥವ್ರುತ್ತ ವಿಭಾಗದ ಸಹಪ್ರಾಧ್ಯಾಪಕಿ ಡಾ| ಆಶಿತ ‘ರಕ್ತಹೀನತೆ‘ ವಿಷಯದ ಕುರಿತು ಮಾಹಿತಿ ನೀಡಿದರು. ಸಂಸ್ಥೆಯ ಆಡಳಿತಾಧಿಕಾರಿ ಶ್ರೀಯುತ ಯೋಗೀಶ್ ಶೆಟ್ಟಿ , ಕಾಯ ಚಿಕಿತ್ಸಾ ವಿಭಾಗದ ಮುಖ್ಯ ಪ್ರಾಧ್ಯಾಪಕ ಡಾ| ಶ್ರೀಪತಿ ಆಚಾರ‍್ಯ , ದ್ರವ್ಯ ಗುಣ ವಿಭಾಗದ ಮುಖ್ಯ ಪ್ರಾಧ್ಯಾಪಕ ಡಾ| ಚಂದ್ರಕಾಂತ್ ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು .

ಎನ್. ಎಸ್. ಎಸ್ ವಿದ್ಯಾರ್ಥಿಗಳಾದ ಮನೋಹರ್ ಮತ್ತು ಅನ್ನಪೂರ್ಣ ನಿರೂಪಿಸಿದರು. ವಾರುಣಿ ಸ್ವಾಗತಿಸಿ, ವಿಶ್ವೇಶ್ ಧನ್ಯವಾದ ನೀಡಿದರು . ೧೨೦ ಎನ್. ಎಸ್. ಎಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು .

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply