ಮಣಿಪಾಲ : ವನ ಚೇತನ ಕಾರ್ಯಯಕ್ರಮ

ಮಣಿಪಾಲ: – ಅರಣ್ಯ ಇಂದು ಉತ್ತಮವಾಗಿ ಉಳಿಯಲು ಅಲ್ಲಿ ವಾಸ ಮಾಡುವ ಬುಡಕಟ್ಟು ಜನಾಂಗದವರು ಪ್ರಮುಖ ಕಾರಣ ಸರ್ಕಾರ ಈ ಜನಾಂಗದವರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗಿದೆ ಎಂದು ಖ್ಯಾತ ಕಲಾವಿದ, ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಹೇಳಿದರು.

ಮಂಗಳವಾರದಂದು ಮತ್ತು ರೋಟರಿ ಮಣಿಪಾಲ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಆಶ್ರಯದಲ್ಲಿ ಮಣಿಪಾಲದ ರೋಟರಿ ಭವನದಲ್ಲಿ ನಡೆದ ವನ ಚೇತನ ಕಾರ್ಯಯಕ್ರಮದಲ್ಲಿ ಮಾತನಾಡಿದರು.

ಉ.ಕ ಭಾಗದ ಅರಣ್ಯ ಪರಿಸರದಲ್ಲಿ ವಾಸ ಮಾಡುವ ಸಿದ್ಧಿ, ಹಾಲಕ್ಕಿ, ಕುಡುಬಿ ಮುಂತಾದ ಬುಡಕಟ್ಟು ಜನಾಂಗದವರ ಪರಿಸರ ಕುರಿತ ಕಾಳಜಿಯನ್ನು ವಿವರಿಸಿದರು.ಸಕಾ೯ರ ಅವರ ಅಭಿವೃದ್ಧಿಗೆ ಹಲವಾರು ಕೋಟಿ ರೂ ಖಚು೯ ಮಾಡಿದರೂ, ಆ ಹಣ ಸರಿಯಾಗಿ ತಲುಪದೆ ಅಭಿವೃದ್ಧಿ ಯು ಗಗನ ಕುಸುಮವಾಗಿದೆ. ಕರೋನಾ ಸಮಯದಲ್ಲಿ ಅಲ್ಲಿನ ಬುಡಕಟ್ಟು ಜನಾಂಗದ ಮಕ್ಕಳಿಗೆ ನಡೆಸಲಾದ ವನ ಚೇತನ ಮತ್ತು ವನ ಬೆಳಕು ಯೋಜನೆಯ ಮೂಲಕ ಮಾಡಿದ ಕಾಯ೯ಕ್ರಮಗಳ ಬಗ್ಗೆ ತಿಳಿಸಿದರು.

ಅವರಿಗೆ ಸರಿಯಾದ ಅವಕಾಶಗಳು ಸಿಕ್ಕಿದ್ದಲ್ಲಿ ಮುಂದೆ ಅವರೆಲ್ಲರೂ ಸಮಾಜದಲ್ಲಿ ಉತ್ತಮ ಜೀವನ ಸಾಗಿಸಬಹುದೆಂದು ಅಭಿಪ್ರಾಯ ಪಟ್ಟರು. ಈ ಸಂದಭ೯ದಲ್ಲಿ ಅವರಿಗೆ ರೂ 10 ಸಾವಿರ ನಗದಿನೊಂದಿಗೆ ಸನ್ಮಾನ ನಡೆಸಲಾಯಿತು. ಅಲ್ಲದೆ ಈ ಸಂದಭ೯ ಗೃಹ ನಿರ್ಮಾಣಕ್ಕಾಗಿ ವಿಜಯಲಕ್ಷ್ಮಿ ಕುಟುಂಬಕ್ಕೆ 50000 ಮೊತ್ತ ವನ್ನು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ವಿಶ್ವನಾಥ ಶೆಣೈ ನೀಡಿದರು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಮಣಿಪಾಲದ ಅಧ್ಯಕ್ಷ ಡಾ. ವಿರೂಪಾಕ್ಷ ದೇವರಮನೆ ವಹಿಸಿ ಶುಭ ಹಾರೈಸಿದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಪ್ರೋ. ಶಂಕರ್, ರೋಟರಿ ಕ್ಲಬ್ ಮಣಿಪಾಲದ ನಿಯೋಜಿತ ಅಧ್ಯಕ್ಷೆ ರೇಣು ಜಯರಾಮ್, ಮುಂತಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply