Janardhan Kodavoor/ Team KaravaliXpress
27.6 C
Udupi
Wednesday, August 17, 2022
Sathyanatha Stores Brahmavara

ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ ನೈಸರ್ಗಿಕ ಅಡುಗೆ ಅನಿಲ ಪೈಪ್‌ಲೈನ್ ಯೋಜನೆ

ಕಾಸರಗೋಡು: ಕೇರಳ ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗ್ಯಾಸ್ ಅಥೋರಿಟಿ ಆಫ್ ಇಂಡಿಯಾ ಸಂಸ್ಥೆಯ ನೇತೃತ್ವದ ನಳಿಗೆ ಮೂಲಕ ನೈಸರ್ಗಿಕ ಅಡುಗೆ ಅನಿಲ (ಎಲ್‌ಎನ್‌ಜಿ) ಪೈಪ್‌ಲೈನ್ ಯೋಜನೆಯನ್ನು ಜನವರಿ 5ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆನ್‌ಲೈನ್ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ವಿವಿಧ ವಲಯಗಳ ಹಲವಾರು ಮಂದಿ ಗಣ್ಯರು ಭಾಗವಹಿಸಲಿದ್ದಾರೆ. 444 ಕಿಲೋಮೀಟರ್ ಉದ್ದದ ಈ ಅನಿಲ ಕೊಳವೆ ಮಾರ್ಗವನ್ನು 2915 ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಳಿಸಲು ಮೊದಲಿಗೆ ನಿರ್ಧರಿಸಲಾಗಿತ್ತು.

ಅನಿವಾರ್ಯ ಕಾರಣಗಳಿಂದಾಗಿ ಬಳಿಕ ಈ ಮೊತ್ತವನ್ನು 5750 ಕೋಟಿ ರೂಪಾಯಿಗೆ ಏರಿಸಲಾಗಿದೆ ಎಂದು ತಿಳಿದು ಬಂದಿದೆ. ಕೊಚ್ಚಿ – ಕುಟ್ಟನಾಡ್‌ನಿಂದ ಕಾಸರಗೋಡು ಮೂಲಕ ಮಂಗಳೂರು ತನಕ ನೈಸರ್ಗಿಕ ಅಡುಗೆ ಅನಿಲ ಪೂರೈಸುವ ಯೋಜನೆ ಇದಾಗಿದ್ದು ಇದಕ್ಕಾಗಿ ಮಣ್ಣಿನಡಿ ಕೊಳವೆಗಳನ್ನು ಅಳವಡಿಸುವ ಕಾಮಗಾರಿಗೆ 2009ರಲ್ಲಿಯೆ ಚಾಲನೆ ನೀಡಲಾಗಿತ್ತು.

2014ರಲ್ಲಿ ಈ ಯೋಜನೆಯು ಪೂರ್ಣಗೊಳ್ಳಬೇಕಿತ್ತು. ಆದರೆ ಸುರಕ್ಷಾ ಕ್ರಮಗಳು, ಸ್ವಾಧೀನಪಡಿಸಿಕೊಂಡ ಭೂಮಿ ಬೆಲೆಯಲ್ಲಿ ಹೆಚ್ಚಳ ಮೊದಲಾದ ಅಡ್ಡಿ ಆತಂಕಗಳಿಂದಾಗಿ ಯೋಜನೆಯು ಆಮೆ ಗತಿಯಲ್ಲಿ ಸಾಗಿತ್ತು. ಅದರಂತೆ ಕೊಚ್ಚಿ – ಕುಟ್ಟನಾಡ್‌ನಿಂದ ಕಾಸರಗೋಡು ಮೂಲಕ ಮಂಗಳೂರು ತನಕ ಕೊಳವೆಗಳನ್ನು ಅಳವಡಿಸುವ ಕೆಲಸ ಆರಂಭಿಸಲಾಯಿತು.

ಇದೀಗ ಕೊಳವೆ ಅಳವಡಿಸುವ ಕೆಲಸವು ಪೂರ್ಣಗೊಂಡಿದೆ.ಅದರ ಮೂಲಕ ನೈಸರ್ಗಿಕ ಅನಿಲವನ್ನು ಪೂರೈಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, ಮನೆಗಳು ಮತ್ತು ಉದ್ದಿಮೆ ಘಟಕಗಳಿಗೆ ನಳ್ಳಿ ಮೂಲಕ ಅನಿಲ ಪೂರೈಸುವ ಮಹತ್ತರ ಯೋಜನೆ ಇದು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!