ಪಂಜಾಬ್ ನ ರಾವಣನಿಗೆ ಮೋದಿ ಪೋಟೋ ಅಂಟಿಸಿ ದಹನ

ನವದೆಹಲಿ: ನವರಾತ್ರಿ ಹಬ್ಬದ ಆಚರಣೆಯನ್ನು ಪಂಜಾಬಿನಲ್ಲಿ ಇದೀಗ ರಾಜಕೀಯವಾಗಿ ಬಳಸಿಕೊಳ್ಳಲಾಗಿದೆ. ದಸರಾ ಸಂದರ್ಭದಲ್ಲಿ ನಡೆಯುವ ಸಂಪ್ರದಾಯವೊಂದಕ್ಕೆ ಪ್ರತಿಭಟನಾ ರೂಪ ನೀಡಿದ್ದು, ಅದಕ್ಕೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತ ವಾಗುತ್ತಿದೆ.

ಭಾನುವಾರದಂದು ಪಂಜಾಬ್ ನಲ್ಲಿ ರಾವಣನ ಪ್ರತಿಕೃತಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಅಂಟಿಸಿ ದಹಿಸಿ ದ್ದಾರೆ. ಕಾಂಗ್ರೆಸ್​ ಕಾರ್ಯಕರ್ತರ ಈ ಕೃತ್ಯದ ವಿರುದ್ಧ ಬಿಜೆಪಿ ತೀವ್ರ ಆಕ್ರೋಶಗೊಂಡಿದೆ. ಪಂಜಾಬ್​ನಲ್ಲಿ ವಿವಿಧೆಡೆ ಕಾಂಗ್ರೆಸ್​ ಕಾರ್ಯಕರ್ತರು ಹಾಗೂ ಪ್ರತಿಭಟನಾ ನಿರತ ಕೆಲ ರೈತಸಂಘಟನೆಗಳು ದಸರಾ ಸಂದರ್ಭದಲ್ಲಿ ನಡೆಯುವ ರಾವಣ ದಹನ ಸಂಪ್ರದಾಯವನ್ನು ಮೋದಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಲು ಬಳಸಿಕೊಂಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಪಂಜಾಬ್ನಲ್ಲಿ ರಾವಣನ ಪ್ರತಿಕೃತಿಗೆ ಮೋದಿಯ ಫೋಟೋ ಅಂಟಿಸಿ ದಹಿಸಿದ್ದು ನಾಚಿಕೆಗೇಡಿನ ಕೆಲಸ. ಇದು ರಾಹುಲ್​ ಗಾಂಧಿ ಆಡಿಸಿದ ನಾಟಕ. ನೆಹರು ಮತ್ತು ಗಾಂಧಿ ವಂಶ ಪ್ರಧಾನಿಯವರ ಕಚೇರಿಗೆ ಎಂದೂ ಗೌರವ ಕೊಟ್ಟಿಲ್ಲ ಎಂದಿದ್ದಾರೆ.

ಇನ್ನು ಇದರ ಕುರಿತು ಮಾತನಾಡಿದ ಕಾಂಗ್ರೆಸ್ ನಾಯಕ  ರಾಹುಲ್ ಗಾಂಧಿ, ಇದನ್ನು ರಾಜಕೀಯವಾಗಿ ಬಳಸಿ ಕೊಂಡಿದ್ದಾರೆ. ಪಂಜಾಬ್​ನಲ್ಲಿ ಪ್ರಧಾನಿ ವಿರುದ್ಧ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗಿದ್ದು,ಇದು ಅಪಾಯಕಾರಿ ಬೆಳವಣಿಗೆ ಮತ್ತು ಹೀಗಾದರೆ ದೇಶಕ್ಕೆ ಒಳ್ಳೆಯದಾಗುವುದಿಲ್ಲ. ಆದ್ದರಿಂದ ಪ್ರಧಾನಿ ತಕ್ಷಣ ಪಂಜಾಬ್ ನ ಜನರಿಗೆ ಸ್ಪಂದಿಸಬೇಕು ಎಂದು ಕಿಡಿಕಾರಿದ್ದಾರೆ.

 
 
 
 
 
 
 
 
 
 
 

Leave a Reply