Janardhan Kodavoor/ Team KaravaliXpress
24.6 C
Udupi
Tuesday, July 5, 2022
Sathyanatha Stores Brahmavara

ಜೂನ್ 7 ರ ಬಳಿಕ ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ಅಗತ್ಯವಿಲ್ಲ~ ಉಡುಪಿ ಶಾಸಕ ರಘುಪತಿ ಭಟ್ . 

ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಕಡಿಮೆಯಾಗಿದ್ದು, ಸಂಪೂರ್ಣ ಲಾಕ್ ಡೌನ್ ಬದಲು ಸಾರ್ವಜನಿಕ ಸಭೆ ಸಮಾರಂಭ, ಒಡಾಟ  ಕಾರ್ಯ ಕ್ರಮಗಳಿಗೆ ನಿರ್ಬಂಧ , ಹಾಕುವುದು ಒಳ್ಳೆಯದು. ಈಗಾಗಲೇ ಜಿಲ್ಲೆಯಲ್ಲಿ ಜನರ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ಬಿದ್ದಿದೆ. 

ಕೋವಿಡ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿದ್ದು,  ಮುಂದಿನ ಮೂರು ತಿಂಗಳೂ ಎಲ್ಲಾ ಸಭೆ, ಸಮಾರಂಭಗಳಿಗೆ ನಿರ್ಬಂಧ ಹಾಕಬೇಕು ಎಂದು ಅವರು ಅಭಿಪ್ರಾಯ ಪಟ್ಟರು. ಲಾಕ್ ಡೌನ್ ಮುಂದುವರೆಸಿದರೆ ಯಾವುದೇ ಪ್ರಯೋಜನವಿಲ್ಲ. ಪಾಸಿಟಿವಿಟಿ ರೇಟ್ ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದೆವರೆಸ ಬಹುದು. 

ಜಿಲ್ಲೆಯಲ್ಲಿಕೋರೋನಾ ನಿಯಂತ್ರಣಕ್ಕೆ ಬರುತ್ತಿರುವುದು ಕೇವಲ ನಮ್ಮ ಪ್ರಯತ್ನದಿಂದ ಅಲ್ಲ. ಈ ಸಾಂಕ್ರಾಮಿಕ ರೋಗ  ಒಂದು ಬಾರಿ ಎಲ್ಲಾ ಕಡೆ ವ್ಯಾಪಿಸಿದೆ. ಸ್ಟ್ರಾಂಗ್ಇ ಮ್ಯೂನಿಟಿಯಿಂದಾಗಿ ತನ್ನಿಂದ ತಾನೇ ನಿಯಂತ್ರಣಕ್ಕೆ ಬಂದಿದೆ. 

ಆದರೆ ಜನರು ಲಾಕ್ ಡೌನ್ ಮುಗಿಯಿತು ಎಂದು ಮೈ ಮರೆಯಬಾರದು. ಶೇಕಡಾ 70 ರಷ್ಟು ಲಸಿಕೆ ಆಗುವವರೆಗೆ ಜನ ಬಹಳ ಜಾಗ್ರತೆವಹಿಸಬೇಕು ಎಂದು ಅವರು ಜನತೆಯಲ್ಲಿ ಮನವಿ ಮಾಡಿದ್ದಾರೆ.  

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!