ಬ್ರಹ್ಮಾವರ: ಯುವತಿ ನಾಪತ್ತೆ

 ಲ್ಯಾಬ್ ಟೆಕ್ನಿಷಿಯನ್ ಕಲಿತಿದ್ದ 23 ವರ್ಷದ ಯುವತಿ ನಾಪತ್ತೆಯಾದ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 
ತೀರ್ಥಹಳ್ಳಿ ಮೂಲದ 23 ವರ್ಷದ ರಂಜಿತಾ ನಾಪತ್ತೆಯಾದ ಯುವತಿ. ರಂಜಿತಾ ಹೆಬ್ರಿ ಶಿವಪುರದ ಅಜ್ಜಿ ಮನೆಯಲ್ಲಿ ವಾಸವಿದ್ದು ಉಡುಪಿಯಲ್ಲಿ ಲ್ಯಾಬ್ ಟೆಕ್ನಿಷಿಯನ್ ವ್ಯಾಸಂಗ ಮಾಡಿದ್ದರು. ಬಳಿಕ ತೀರ್ಥಹಳ್ಳಿಯಲ್ಲಿ ಒಂದು ವರ್ಷ ಇದ್ದು ಉಡುಪಿಯಲ್ಲಿ ಉದ್ಯೋಗ ಹುಡುಕುವ ಉದ್ದೇಶದಿಂದ ಎರಡು ವಾರಗಳ ಹಿಂದೆ ಅವರ ತಮ್ಮನಾದ ಸುದೀಪ್ ಎಂಬವರೊಂದಿಗೆ ಬಂದು ಬ್ರಹ್ಮಾವರ ಆರೂರು ಗ್ರಾಮದ ಮನೆಯಲ್ಲಿ ವಾಸವಿದ್ದರು. 
ಮೂರು ದಿವಸಗಳ ಹಿಂದೆ ಬ್ರಹ್ಮಾವರದ ಆಸ್ಪತ್ರೆಯಲ್ಲಿ ಕೆಲಸದ ಬಗ್ಗೆ ಮಾತನಾಡಿಕೊಂಡು ಡಿ. 11 ರಂದು ಕೆಲಸಕ್ಕೆ ಹೋಗುವುದಾಗಿ ತಿಳಿಸಿದ್ದರು. ಬಳಿಕ ಡಿ. 9 ರಂದು ತಾಯಿ ಮನೆಯಾದ ತೀರ್ಥಹಳ್ಳಿಗೆ ಹೋಗಿ ಬರುವುದಾಗಿ ತಿಳಿಸಿ ಮಧ್ಯಾಹ್ನ ಆರೂರು ಕ್ರಾಸ್ ಕುಂಜಾಲು ಬಳಿ ಬಸ್ ಹತ್ತಿ ಹೋದವರು ತೀರ್ಥಹಳ್ಳಿಗೂ ಹೋಗದೇ, ಫೋನ್ ಸಂಪರ್ಕಕ್ಕೂ ಸಿಗದೇ ಕಾಣೆಯಾಗಿದ್ದಾರೆ. 
ಈ ಬಗ್ಗೆ ನಾಪತ್ತೆಯಾಗಿರುವ ರಂಜಿತಾ ಅವರ ಸಂಬಂಧಿ ಭವಾನಿ ಎಂಬವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 
 
 
 
 
 
 
 
 
 
 

Leave a Reply