ಮಿಲಾಗ್ರಿಸ್ ಕಾಲೇಜ್ ಕಲ್ಯಾಣ್ಪುರ ವಿಶ್ವ ಏಡ್ಸ್ ದಿನಾಚರಣೆ ಮತ್ತು ಜಾಗೃತಿ ಕಾರ್ಯಕ್ರಮ

ವಿಶ್ವ ಏಡ್ಸ್ ದಿನಾಚರಣೆ ಮತ್ತು ಜಾಗೃತಿ ಕಾರ್ಯಕ್ರಮವು ದಿನಾಂಕ 1.12 .2022 ರಂದು ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿತ್ತು.

 ಶ್ರೀ ರೇಣುಕಾ ಮಾತೆ ತೊಗಲುಗೊಂಬೆ ಕಲಾತಂಡ ಚಿಕ್ಕಮಂಗಳೂರು ಇವರಿಂದ ವಿಶ್ವ ಏಡ್ಸ್ ದಿನ ಮತ್ತು ಜಾಗೃತಿಯ ಕುರಿತು ತೊಗಲುಗೊಂಬೆ ಪ್ರದರ್ಶನ ನಡೆಯಲ್ಪಟ್ಟಿತು .ಕಾರ್ಯಕ್ರಮದಲ್ಲಿ ಘನ ಅಧ್ಯಕ್ಷತೆ ಸ್ಥಾನವನ್ನು ವಹಿಸಿರುವವರು ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್ ಆಳ್ವಾ ಅವರು ವಿಶ್ವ ಏಡ್ಸ್ ದಿನಾಚರಣೆಯ ಜಾಗೃತಿಯ ಕುರಿತು ಸ್ವಯಂಸೇವಕರುಗಳಿಗೆ ಮಾಹಿತಿ ತಿಳಿಸಿದರು .ಅದೇ ರೀತಿ ಕಾರ್ಯಕ್ರಮದಲ್ಲಿ ಐಕ್ಯೂ ಎ ಸಿ ಸಂಯೋಜಕರಾದ ಡಾ. ಜಯರಾಮ್ ಶೆಟ್ಟಿಗಾರ್ ಎನ್ ಎಸ್ ಎಸ್ ನ ಯೋಜನಾಧಿಕಾರಿಗಳಾದ ಶ್ರೀಮತಿ ಅನುಪಮಾ ಎಂ. ಜೋಗಿ ಮತ್ತು ಡಾ. ಪ್ರಕಾಶ ಅನಿಲ್ , ಉಪನ್ಯಾಸಕ ವೃಂದದವರು ಮತ್ತು ಎಲ್ಲಾ ಸ್ವಯಂಸೇವಕರುಗಳು ಕಾರ್ಯಕ್ರಮದ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಸಮೀಕ್ಷಾ ದ್ವಿತೀಯ ಬಿಸಿಎ ಕಾರ್ಯಕ್ರಮವನ್ನು ನಿರೂಪಿಸಿ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply