ಮಿಲಾಗ್ರಿಸ್ ಕಾಲೇಜಿನಲ್ಲಿ ರಕ್ತದಾನ ಶಿಬಿರವು

ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ರಾಷ್ಟ್ರೀಯ ಸೇವಾ ಯೊಜನೆ,  ಕಾಲೇಜಿನ ಯೂತ್ ರೆಡ್ ಕ್ರಾಸ್,  ಅಭಯ ಹಸ್ತ ಹೆಲ್ಪ್ ಲೈನ್ ರೋಟರಿ ಕ್ಲಬ್ ಉಡುಪಿ,  ಲಯನ್ಸ್ ಕ್ಲಬ್ ಕಲ್ಯಾಣಪುರ,  ಮಿಲಾಗ್ರಿಸ್ ಕಾಲೇಜು ಹಳೆ ವಿದ್ಯಾರ್ಥಿ ಸಂಘ   ಹಾಗೂ ಬ್ಲಡ್ ಬ್ಯಾಂಕ್   ಕೆ ಎಮ್ ಸಿ ಮಣಿಪಾಲ ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರವು ದಿನಾಂಕ 26/07/2022 ರಂದು  ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರದಲ್ಲಿ  ನಡೆಯಿತು. 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿರುವ  ಕಾಲೇಜಿನ ಪ್ರಾಂಶುಪಾಲರಾದ  ಡಾ. ವಿನ್ಸೆಂಟ್ ಆಳ್ವರವರು ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಶ್ರೇಷ್ಠ ದಾನದಲ್ಲಿ  ಒಂದಾದ  ರಕ್ತದಾನ ವಿದ್ಯಾರ್ಥಿಗಳು ರಕ್ತದಾನ ಮಾಡಿ ಜೀವ ಉಳಿಸುವ ಶ್ರೇಷ್ಠ  ಸೇವಾ ಮನೋಭಾವವನ್ನು  ಬೆಳೆಸಬೇಕು ಎಂದು ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಅನ್ನಿ ಓರ್ವನ ರಕ್ತದಾನ ನಾಲ್ಕು ಜೀವಗಳಿಗೆ ಜೀವದಾನ,  ಪ್ರತಿಯೊಬ್ಬ ವ್ಯಕ್ತಿಯು  ಈ ಶ್ರೇಷ್ಠದಾನ ಮಾಡಬೇಕೆಂದು ತಿಳಿಸಿದರು. ಯಾವುದೇ ಸಮಯದಲ್ಲಿ ರೋಗಿಗಳಿಗೆ ರಕ್ತ ಅವಶ್ಯಕತೆಯನ್ನು ಪೂರೈಸಲು ಶ್ರಮಿಸುವ ಅಭಯ ಹಸ್ತ ಹೆಲ್ಪ್ ಲೈನ ಸಂ ಸಂಸ್ಥಾಪಕರಾದ  ಶ್ರೀ ಸತೀಶ್ ಸಾಲ್ಯಾನ್ ರವರು  ವಿದ್ಯಾರ್ಥಿಗಳಿಗೆ ರಕ್ತದಾನದ ಮಹತ್ವ ತಿಳಿಸಿ  ರಕ್ತದಾನ ಶಿಬಿರ ಆಯೋಜಿಸಿದ ಹಾಗೂ ರಕ್ತದಾನ  ದಲ್ಲಿ ಸದಾ ಸಕ್ರಿಯವಾಗಿರುವ ಮಿಲಾಗ್ರಿಸ್ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಗಳನ್ನು ಶ್ಲಾಘಿಸಿದರು.
 
ರೊಟೇರಿಯನ್  ಪಿ. ಎಚ್. ಎಫ್  ರಾಮಚಂದ್ರ ಉಪಾಧ್ಯಾಯರವರು ಸೇವಾ ಮನೋಭಾವವಿದ್ದರೆ ಸರ್ವವೂ ಶ್ರೇಷ್ಠವಾಗುವುದು ಎಲ್ಲರೂ ರಕ್ತದಾನದೆಡೆಗೆ  ಒಲವು ತೋರಿಸಬೇಕೆಂದು ಮನಗಂಡರು.   ಜೀವ ಉಳಿಸುವ ದಾನ ರಕ್ತದಾನ ಈ  ಕಾರ್ಯಕ್ರಮವನ್ನು ಆಯೋಜಿಸಿರುವ ಆಯೋಜಕರಿಗೆ  ರೋಟರಿ ಕ್ಲಬ್  ಉಡುಪಿಯ  ಅಧ್ಯಕ್ಷರಾದ ರೊಟೇರಿಯನ್  ಪಿ. ಎಚ್. ಎಫ್  ಸುಬ್ರಮಣ್ಯರವರು  ಅಭಿನಂದನೆಯನ್ನು  ವ್ಯಕ್ತಪಡಿಸಿದರು.      
ಈ ಕಾರ್ಯಕ್ರಮದಲ್ಲಿ  ಕಲ್ಯಾಣಪುರ   ಲಯನ್ಸ್ ಕ್ಲಬಿನ  ಅಧ್ಯಕ್ಷರಾದ  ಶ್ರೀ ಜಾರ್ಜ್ ಡಿಸೋಜ, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ  ಜೋಯ್ಸ್ ಪಿಕಾರ್ಡೊ, ಐ. ಕ್ಯೂ. ಎ. ಸಿ  ಸಂಯೋಜಕರಾದ ಡಾ ಜಯರಾಮ್ ಶೆಟ್ಟಿಗಾರ್,  ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ರೀಮತಿ ಅನುಪಮಾ ಜೋಗಿ ಮತ್ತು ನೆಲ್ಸನ್ ಡಿಸೋಜಾ,ಯೂತ್ ರೆಡ್ ಕ್ರಾಸ್ ಸಂಯೋಜಕಿ ಶ್ರೀಮತಿ ಕ್ಲಾರಾ ಮಿನೇಜಸ್ ಉಪಸ್ಥಿತರಿದ್ದರು.  ದ್ವಿತೀಯ ಬಿಕಾಂ  ವಿದ್ಯಾರ್ಥಿನಿ   ಶರಣ್ಯ  ಸ್ವಾಗತಿಸಿ,  ನಿಖಿತಾ ವಂದಿಸಿ,  ಮೇಲಿಶಾರವರು ಕಾರ್ಯಕ್ರಮವನ್ನು ನಿರೂಪಿದರು.  85 ರಕ್ತದಾನಿಗಳು ರಕ್ತದಾನ ಮಾಡುವುದರ ಮೂಲಕ ಶಿಬಿರದ ಯಶಸ್ವಿಗೆ ಸಾಕ್ಷಿಯಾದರು .
 
 
 
 
 
 
 
 
 

Leave a Reply