ಎಂಜಿಎಂ ಕಾಲೇಜ್: ಸ್ವಾತಂತ್ರ್ಯದ ಅಮೃತ ಪುಟಗಳು ಪುಸ್ತಕ ಪ್ರದರ್ಶನ ಉದ್ಘಾಟನೆ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಎಂ.ಜಿ.ಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರವು ಕಾಲೇಜಿನ ಗ್ರಂಥಾಲಯದ ಸಹಯೋಗದೊಂದಿಗೆ ಆಯೋಜಿಸಿರುವ “ಸ್ವಾತಂತ್ರ್ಯದ ಅಮೃತ ಪುಟಗಳು” ಎಂಬ ಪುಸ್ತಕ ಪ್ರದರ್ಶನವನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ್ ಉದ್ಘಾಟಿಸಿದರು. ಸ್ವಾತಂತ್ರ್ಯ ಹೋರಾಟದ ಚರಿತ್ರೆಯ ಪುಟಗಳಿಂದ ಯುವಜನತೆ ಉತ್ತಮ ಪ್ರೇರಣೆ ಪಡೆಯುವಂತಾಗಲಿ ಎಂದು ಅವರು ಕರೆ ನೀಡಿದರು. ಪದವಿಪೂರ್ವ ಪ್ರಾಂಶುಪಾಲರಾದ ಶ್ರೀಮತಿ ಮಾಲತಿ ದೇವಿ, ಪದವಿ ಕಾಲೇಜಿನ ಐಕ್ಯೂಎಸಿ ಸಂಯೋಜಕ ಪ್ರೊ. ಅರುಣ್ ಕುಮಾರ್, ಗ್ರಂಥಪಾಲಕ ಕಿಶೋರ್ ಹೆಚ್.ವಿ ಉಪಸ್ಥಿತರಿದ್ದರು. ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ವಿನೀತ್ ರಾವ್ ಪ್ರಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿ, ವಂದಿಸಿದರು.

ಪ್ರದರ್ಶನದಲ್ಲಿ ಗಾಂಧಿ ಅಧ್ಯಯನ ಕೇಂದ್ರದ ಸಂಗ್ರಹದಲ್ಲಿರುವ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಅಪರೂಪದ ಪುಸ್ತಕಗಳು ಓದುಗರ ಪರಿಚಯಕ್ಕಾಗಿ ಪ್ರದರ್ಶನಗೊಂಡಿವೆ.

 
 
 
 
 
 
 
 
 
 
 

Leave a Reply