ಸಾಹಿತಿ. ನಿವೃತ್ತಪ್ರಾಂಶುಪಾಲ ಮೇಟಿ ಮುದಿಯಪ್ಪ ಅವರಿಗೆ ವಿವಿಧ ಸಂಸ್ಥೆಗಳಿಂದ ಶ್ರದ್ಧಾಂಜಲಿ.

ಹಿರಿಯ ಸಾಹಿತಿ, ನಿವೃತ್ತ ಪ್ರಾಂಶುಪಾಲ ಮೇಟಿ ಮುದಿಯಪ್ಪ ಅವರ ನಿಧನಕ್ಕೆ ಜಿಲ್ಲೆಯ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಶ್ರದ್ದಾಂಜಲಿ ಸಭೆ ಎಂಜಿಎಂ ಕಾಲೇಜಿನ ಗೀತಾಂಜಲಿಸಭಾಂಗಣದಲ್ಲಿ ನಡೆಯಿತು. ಮೇಟಿಯವರ ಮಾನವೀಯ ಮುಖ ಹಾಗೂ ಉಪಕಾರಪ್ರಜ್ಞೆ, ಸ್ನೇಹಪರ ನಡುವಳಿಕೆ ಬಗ್ಗೆ ಎಲ್ಲರೂ ನುಡಿನಮನದಲ್ಲಿ ಪ್ರಶಂಸಿಸಿದರು. ರಥಬೀದಿಗೆಳಯರು ಸಂಸ್ಥೆಯ ಮುರುಳಿಧರ ಉಪಾಧ್ಯ, ತುಳುಕೂಟದ ಇಂದ್ರಾಳಿ ಜಯಕರ ಶೆಟ್ಟಿ, ಮಾಹೆಯ ಕನಕದಾಸ ಪೀಠದ ಡಾ ಜಗದೀಶ ಶೆಟ್ಟಿ, ಯಕ್ಷಗಾನ ಕಲಾರಂಗದ ಮುರಳಿ ಕಡೇಕಾರ್, ವನಸುಮ ರಂಗಮಂಚದ ಬಾಲಕೃಷ್ಣ ಕೊಡವೂರು,ರಂಗಭೂಮಿ( ರಿ)ಪರವಾಗಿ ತಲ್ಲೂರು ಶಿವರಾಮ ಶೆಟ್ಟಿ, ಪ್ರದೀಪಚಂದ್ರ ಕುತ್ಪಾಡಿ, ಸುಮನಸಾ ಕೊಡವೂರಿನ ಎಂ ಎಸ್ ಭಟ್, ಲಯನ್ಸ್ ಜಿಲ್ಲೆ 317c ಯ ಗವರ್ನರ್ ವಿಶ್ವನಾಥ ಶೆಟ್ಟಿ, ಜಿಲ್ಹಾ ಕನಕದಾಸಸಮಾಜ ಸೇವಾ ಸಂಘದ ದ್ಯಾವಣ್ಣ ಪೂಜಾರಿ, ಸಿದ್ದರಾಜು, ರಂಗಸ್ಥಳ ಮತ್ತು ಸಾಂಸ್ಕೃತಿಕ ಸಂಶೋಧನ ಟ್ರಸ್ಟ್ ನ ಸುಬ್ರಮಣ್ಯ ಬಾಸ್ರಿ
ಪಿ. ಯು. ಉಪನ್ಯಾಸಕ ಸಂಘದ ಶ್ರೀಮತಿ ಸುಮಾ, ಹಾಗೂ ವರ್ಗಿಸ್ ಅವರು ಮೃತರ ಗುಣಗಾನ ಮಾಡಿ ಮಾತನಾಡಿದರು. ಮೇಟಿಯವ ಅಭಿಮಾನಿ ಸ್ನೇಹಿತರಾದ ಉದ್ಯಾವರ ನಾಗೇಶ್ ಕುಮಾರ್,ಎಸ್ ಎ ಕೃಷ್ಣಯ್ಯ, ಗಣನಾಥ ಎಕ್ಕಾರು, ನಾರಾಯಣ ಹೆಗಡೆ, ರಾಜಗೋಪಾಲ ಬಲ್ಲಾಳ, ರಮೇಶ್ ಅಡಿಗ, ಪ್ರಕಾಶ್ ಮರವಂತೆ ತಮ್ಮ ಒಡನಾಟವನ್ನು ಹಂಚಿಕೊಂಡರು. ಕಾರ್ಯಕ್ರಮವನ್ನು ಜಿ ಪಿ ಪ್ರಭಾಕರ ತುಮರಿ ಮತ್ತು ಪ್ರದೀಪಚಂದ್ರ ಕುತ್ಪಾಡಿ ನಿರ್ವಹಿಸಿದರು.

 
 
 
 
 
 
 
 
 

Leave a Reply