ಮಟ್ಟಾರು -“ಅಮೃತಾಂಜಲಿ” -ಸ್ವಾತಂತ್ರ್ಯ ಹೋರಾಟಗಾರ ಧೀಮಂತ ಪತ್ರಕರ್ತ ಎಂ.ವಿ.ಹೆಗ್ಡೆ ಸಂಸ್ಮರಣೆ

ಶಿರ್ವ:-ಮಟ್ಟಾರು ವಿಠಲ ಹೆಗ್ಡೆಯವರು ಮಂಗಳೂರಿನ ನವ ಭಾರತ ಪ್ರತಿಕೆಯ ಸಂಪಾದಕೀಯ ವಿಭಾಗದಲ್ಲಿದ್ದು, ದಶಕಗಳ ಕಾಲ ಕರಾವಳಿಯಲ್ಲಿ ಪತ್ರಿಕೋದ್ಯಮಕ್ಕೆ ತನ್ನದೇ ಆದ ಕೊಡುಗೆ ನೀಡಿದವರು. ಕನ್ನಡ ತುಳು ಹೋರಾಟದಲ್ಲಿ ಅಪಾರವಾಗಿ ಶ್ರಮಿಸಿದವರು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಜೈಲು ಶಿಕ್ಷೆಯನ್ನು ಅನುಭವಿಸಿದವರು ಅಲ್ಲದೆ ಯಕ್ಷಗಾನ ಕ್ಷೇತ್ರಕ್ಕೂ ಕೊಡುಗೆ ನೀಡಿದ ಮಾದರಿ ಬಹುಮುಖ ವ್ಯಕ್ತಿತ್ವದ ಶಿಸ್ತಿನ ಸಿಪಾಯಿ ಎಂದು ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ನುಡಿದರು.

ಅವರು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಕಾಪು ತಾಲೂಕು ಘಟಕದ ವತಿಯಿಂದ ಮಟ್ಟಾರು ಬಬ್ಬರ್ಯ ದೈವಸ್ಥಾನದ ವಠಾರದಲ್ಲಿ ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮದಡಿಯಲ್ಲಿ ತಾಲೂಕಿನ ಸ್ವಾತಂತ್ರ್ಯ ಸೇನಾನಿಗಳ ಸಂಸ್ಮರಣೆಯ “ಅಮೃತಾಂಜಲಿ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ಸ್ವಾತಂತ್ರö್ಯ ಹೋರಾಟಗಾರ, ಧೀಮಂತ ಪತ್ರಕರ್ತ, ಕನ್ನಡ – ತುಳು ಸಾಹಿತಿ ಮಟ್ಟಾರು ವಿಠಲ ಹೆಗ್ಡೆರವರಿಗೆ ನುಡಿ ನಮನ ಸಲ್ಲಿಸಿ ಅವರ ಹೋರಾಟ ಮತ್ತು ಸಾಧನೆಗಳ ಮೇರುವ್ಯಕ್ತಿತ್ವದ ಬಗ್ಗೆ ಮಾಹಿತಿ ನೀಡಿದರು.

ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್ ಮೆಂಡನ್ ಕಸಾಪ ಕಾಪು ತಾಲೂಕು ಘಟಕದ ವತಿಯಿಂದ ತಾಲೂಕಿನ ಸೇನಾನಿಗಳ ಸ್ಮರಣೆಯಲ್ಲಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಇವರ ಸಂಪಾದಕತ್ವದಲ್ಲಿ ಸಂಗ್ರಹಿಸಿದ ಮಾಹಿತಿ ಕೈಪಿಡಿ “ಅಮೃಂತಾoಜಲಿ” ಬಿಡುಗಡೆಗೊಳಿಸಿ ಮಾತನಾಡುತ್ತಾ, ಕಾಪು ತಾಲೂಕು ಕಸಾಪ ಘಟಕ ದೇಶದ ಈ ಪರ್ವ ಘಟ್ಟದಲ್ಲಿ ತಾಲೂಕಿನ ಹೋರಾಟಗಾರರನ್ನು ಸ್ಮರಿಸಿ ಅವರು ಹುಟ್ಟಿದ ಊರಿನಲ್ಲಿಯೇ ಸಂಸ್ಮರಿಸುವ ಕಾರ್ಯ ಮಾಡುತ್ತಿರುವುದು ಅಭಿನಂದನೀಯ ಎಂದರು.

ಕಾರ್ಯಕ್ರಮದ ಸಮಗ್ರ ಸಂಯೋಜನೆಗೆ ಸ್ಪೂರ್ತಿ ನೀಡಿದ ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ ನಮ್ಮ ಕುಟುಂಬದ ಮಟ್ಟಾರು ವಿಠಲ ಹೆಗ್ಡೆಯವರ ಸಾಧನೆ ನಮಗೆಲ್ಲರಿಗೂ ಆದರ್ಶಪ್ರಾಯವಾಗಿದೆ. ಅವರ ಪುತ್ರ ಖ್ಯಾತ ವೈದ್ಯರಾದ ಡಾ.ಸನತ್ ಹೆಗ್ಡೆ,ಪುತ್ರಿ ಶೋಭಾ ಪಿ.ಶೆಟ್ಟಿ ಮತ್ತು ಪರಿವಾರದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಸಂತಸ ತಂದಿದೆ ಎಂದರು.

ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಶಿರ್ವ ಗ್ರಾಮ ಪಂ.ಅಧ್ಯಕ್ಷ ಕೆ.ಆರ್.ಪಾಟ್ಕರ್, ಗ್ರಾಮ ಲೆಕ್ಕಾಧಿಕಾರಿ ವಿಜಯ, ಎಂ.ವಿ.ಹೆಗ್ಡೆಯವರ ಪುತ್ರ ಡಾ. ಸನತ್ ಹೆಗ್ಡೆ, ಪುತ್ರಿ ನಿವೃತ್ತ ಬ್ಯಾಂಕ್ ಅಧಿಕಾರಿ ಶೋಭಾ ಪಿ.ಶೆಟ್ಟಿ, ದೇವದಾಸ್ ಹೆಬ್ಬಾರ್ ಕಟ್ಟಿಂಗೇರಿ, ಗ್ರಾ.ಪಂ.ಸದಸ್ಯರಾದ ದೇವದಾಸ್ ನಾಯಕ್, ಗೋಪಾಲ್ ನಾಯ್ಕ್, ನೆಕ್ಕರೆಕಂಬ್ಳ ಸುರೇಶ್ ನಾಯಕ್, ರಕ್ಷಿತ್ ಶೆಟ್ಟಿ ಅರಂತಡೆ, ವಕೀಲರಾದ ನಿತೇಶ್ ಶೆಟ್ಟಿ, ನಿತೀಶ್ ಮಟ್ಟಾರ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ಗೌರವ ಕಾರ್ಯದರ್ಶಿ ನೀಲಾನಂದ್ ನಾಯ್ಕ್ ಸ್ವಾಗತಿಸಿದರು. ಸದಸ್ಯ ರಾಕೇಶ್ ಕುಂಜೂರು ನಿರೂಪಿಸಿದರು. ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಧನ್ಯವಾದವಿತ್ತರು.
ಕಸಾಪ ಸಮಿತಿ ಸದಸ್ಯರಾದ ಅನಂತ ಮೂಡಿತ್ತಾಯ, ದೇವದಾಸ್ ಪಾಟ್ಕರ್, ಡೋಮಿಯನ್ ಆರ್ ನೊರೋನ್ಹಾ, ಎಸ್.ಎಸ್.ಪ್ರಸಾದ್, ಉಪಸ್ಥಿತರಿದ್ದರು.
“ಸ್ವರಾಜ್ಯ ವಿಜಯ” : ಗಾನವೈಭವ- ಖ್ಯಾತ ಯಕ್ಷಗಾನ ಭಾಗವತರಾದ “ಯಕ್ಷಧ್ರುವ” ಪಟ್ಲ ಸತೀಶ್ ಶೆಟ್ಟಿರವರ ನೇತೃತ್ವದಲ್ಲಿ ಎಮ್.ವಿ.ಹೆಗ್ಡೆ ವಿರಚಿತ ದೇಶಭಕ್ತಿಭಾವದ ಯಕ್ಷಗಾನ “ಸ್ವರಾಜ್ಯ ವಿಜಯ” ಪ್ರಸಂಗದ ಆಯ್ದ ಪದ್ಯಗಳ ಗಾನವೈಭವ ಕಾರ್ಯಕ್ರಮ ನಡೆಯಿತು. ಹಿಮ್ಮೇಳದಲ್ಲಿ ಗುರುಪ್ರಸಾದ್ ಬೊಳ್ಳಿಜಡ್ಕ, ಕೌಶಿಕ್ ರಾವ್ ಪುತ್ತಿಗೆ, ಪೂರ್ಣೇಶ್ ಆಚಾರ್ಯ ಸಹಕರಿಸಿದರು.

 
 
 
 
 
 
 
 
 
 
 

Leave a Reply