ಗರಿಕ ಸಮಿತಿ ಮಾರ್ಪಳ್ಳಿ ವತಿಯಿಂದ ರಸ್ತೆಗಳಿಗೆ‌ ಮಾರ್ಗಸೂಚಿ ನಾಮಫಲಕ ಅನಾವರಣ

ಉಡುಪಿ: ನಾಗರಿಕ ಸಮಿತಿ ಮಾರ್ಪಳ್ಳಿ ವತಿಯಿಂದ ಸ್ಥಳೀಯ ನಾಗರಿಕ ಸಹಕಾರದೊಂದಿಗೆ ರೂ.90 ಸಾವಿರ ವೆಚ್ಚದಲ್ಲಿ ಗ್ರಾಮದ 31 ರಸ್ತೆಗಳಿಗೆ‌ ಮಾರ್ಗಸೂಚಿ ನಾಮಫಲಕವನ್ನು ಶುಕ್ರವಾರ ಅಲೆವೂರು ಗ್ರಾಮ‌ಪಂಚಾಯತ್ ಅಧ್ಯಕ್ಷೆ ಪುಷ್ಪ ಅಂಚನ್ ಅನಾವರಣಗೊಳಿಸಿದರು.

ಈ ಸಂದರ್ಭ ನಾಗರಿಕ ಸಮಿತಿಯ ಗೌರವಾಧ್ಯಕ್ಷರಾದ ವೇದವ್ಯಾಸ ತಂತ್ರಿ, ಶಾಂತಪ್ರಿಯಾ, ಅಧ್ಯಕ್ಷ ಪ್ರವೀಣ್ ತಂತ್ರಿ, ಮಾರ್ಪಳ್ಳಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಹೇಮಂತ್ ಶೆಟ್ಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಧಾಕರ್ ಪೂಜಾರಿ, ಸ್ಥಳೀಯರಾದ ವೆಂಕಟಕೃಷ್ಣ ರಾವ್ , ವಿಜಯ್ ನಾಯಕ್, ಪಂಚಾಯತ್ ಸದಸ್ಯರಾದ ಶಾಂತ ನಾಯ್ಕ್, ಅವಿನಾಶ್ ಶೆಟ್ಟಿಗಾರ್, ಗೆಳೆಯರ ಬಳಗದ ಅಧ್ಯಕ್ಷ ರಾಜೀವ್ ನಾಯ್ಕ್, ಸಂಪತ್ ರಾವ್, ಮೋಹನ್ ದಾಸ್, ಹರಿದಾಸ್ ಪ್ರಭು ಉಪಸ್ಥಿತರಿದ್ದರು

Leave a Reply