ತಾಯಿಯ ಕರುಳಿನ ಕುಡಿ, ತಂದೆಯ ಹೃದಯದ ನುಡಿ~ ಡಾ. ಶಶಿಕಿರಣ್ ಶೆಟ್ಟಿ

​​ಕೋವಿಡ್ ನಿಂದಾಗಿ ಗಂಡ ಹೆಂಡತಿಗೆ ಕೆಲಸವಿರಲಿಲ್ಲ ಜೋಪಡಿಯಲ್ಲಿ ಒಳಗೇ ಇದ್ದರು 3 ಮಕ್ಕಳೊಂದಿಗೆ. ದಿನಕೂಲಿ ಬಿಡಿ ಮನೆಯಿಂದ ಹೊರ ಬಂದರೆ ಬಡಿಯುತ್ತಿದ್ದರು ಪೊಲೀಸ್ ರು. 
ಮನೆಯೊಳಗೆ ಉಳಿದಿದ್ದ ಎಲ್ಲಾ ಅಕ್ಕಿ ಸಂಗ್ರಹಿಸಿ ಒಂದಿಷ್ಟು ಅನ್ನ ಮಾಡಿ ಮಕ್ಕಳಿಗೆ ಬಡಿಸಿ ಒಂದಿಷ್ಟು ಇಟ್ಟಿದ್ದಳು ಗಂಡನಿಗೆ.. ಗಂಡ ಹಸಿದಿದ್ದ ಊಟಕ್ಕೆ ತಯಾರಾಗುತಿದ್ದ.  ತನ್ನ ತಟ್ಟೆಯಲ್ಲಿ ಅನ್ನ ಕಾಲಿಯಾದಾಗ ಆ ಸಣ್ಣ ಮಗು ಅಲ್ಲೇ ಪಕ್ಕದಲ್ಲಿ ಎತ್ತಿಟ್ಟಿದ್ದ.. ಅನ್ನತಿನ್ನ ತೊಡಗಿತ್ತು.. ತಾಯಿಗೆ ತಡೆಯಲು ಮನಸ್ಸಾಗಲಿಲ್ಲ.
 “ರೀ ನನಗೆ ಹೊಟ್ಟೆ ಹಸಿವಿಲ್ಲ, ಯಾಕೋ ಹೊಟ್ಟೆ ತುಂಬಿದೆ ನಿಮಗೆ ಊಟ ಬೇಕಾ?.. ” ಕೇಳಿದಳು. ಹೆಂಡತಿಯ ಈ ಪ್ರಶ್ನೆ ಹಸಿದಿದ್ದ ಗಂಡನಿಗೆ ಅಡುಗೆ ಮನೆಯತ್ತ ನೋಡುವಂತೆ ಮಾಡಿತು. ಅಲ್ಲಿ ಮಗು ತನಗೆಂದು ಎತ್ತಿಟ್ಟಿದ್ದ ಬಟ್ಟಲಿನಲ್ಲಿದ್ದ ಅನ್ನ ತಿನ್ನುತಿದ್ದರೆ, ಹೆಂಡತಿ ಒದ್ದೆ ಬಟ್ಟೆಯನ್ನು ಹೊಟ್ಟೆಗೆ ಗಟ್ಟಿಯಾಗಿ ಕಟ್ಟಿ ಮಲಗಿದ್ದಳು.
ಗಂಡ ಕೂಗಿ ಹೇಳಿದ “ನನಗೂ ಹಸಿವಿಲ್ಲ ಕಣೇ, ಯಾಕೋ ಹೊಟ್ಟೆ ತುಂಬಿದಂತಿದೆ ಎನ್ನುತ್ತಾ, ಚುರು ಗುಟ್ಟುವ ಹೊಟ್ಟೆಯನ್ನು ಲೆಕ್ಕಿಸದೆ ಅಲ್ಲೇ ಮಲಗಿದ. ಕಣ್ಣು ಮುಚ್ಚಿ, ಇಲ್ಲಿ ಮಕ್ಕಳಿಗಾಗಿ ದಂಪತಿಗಳು ತಮ್ಮ ಹಸಿವನ್ನು ಮರೆತಿದ್ದರು.ಇಂತಹ ಅದೆಷ್ಟೋ ತಂದೆ ತಾಯಿ ಗಳು ನಮ್ಮ ಸಮಾಜದಲ್ಲಿದ್ದಾರೆ.. ಈ ತಾಯಿಯ ಕರುಳಿನ ಕುಡಿ, ಹಾಗೇ ತಂದೆಯ ಹೃದಯದ ನುಡಿಯನ್ನು ಅರ್ಥ ಮಾಡಿ ಕೊಳ್ಳುವ ಮಕ್ಕಳು ಅದೆಸ್ಟು ಇದ್ದಾರೆ ಹೇಳಿ..?

 
 
 
 
 
 
 
 
 
 
 

Leave a Reply