Janardhan Kodavoor/ Team KaravaliXpress
27.6 C
Udupi
Saturday, July 2, 2022
Sathyanatha Stores Brahmavara

ಮಣೂರು- ಮಳಲುತಾಯಿ ದೇವಳದ ನೂತನ ದೇವಾಲಯದ ಧಾರ್ಮಿಕ ಕಾರ್ಯಕ್ರಮ

ಕೋಟ: ಕಾರಣಿಕ ಕ್ಷೇತ್ರ ಮಣೂರು ಶ್ರೀ ಮಳಲುತಾಯಿ ದುರ್ಗಾಪರಮೇಶ್ವರಿ ದೇವಸ್ಥಾನ ಇದರ ನೂತನ ದೇಗುಲ ಲೋಕಾರ್ಪಣೆ ಅಷ್ಟಬಂಧ ಪುನಃ ಪ್ರತಿಷ್ಠೆ,ಸಹಸ್ರ ಪರಿಕಲಶ ಸಹಿತ ಬ್ರಹ್ಮಕಲಶೋತ್ಸವ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮ ಬುಧವಾರ ಆರಂಭಗೊAಡಿತು.
ಶ್ರೀದೇವಳ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉದ್ಯಮಿ ಎಂ.ಆರ್ ಶೆಟ್ಟಿ ನೇತ್ರತ್ವದಲ್ಲಿ ಶ್ರೀ ದೇವಳದ ನವೀಕರಣ ಕಾರ್ಯಗಳು ಆರಂಭಗೊAಡು ಇದೀಗ ಸುಂದರ ದೇಗುಲದ ಧಾರ್ಮಿಕ ಕಾರ್ಯದ ನಿಮಿತ್ತ ವೇ.ಮೂ.ಪಡುಕೋಣೆ ರಾಜೇಶ್ ಹೆಬ್ಬಾರ್ ನೇತ್ರತ್ವದಲ್ಲಿ ವೇ .ಮೂ ನಿಲಾವರ ಕೃಷ್ಣ ಅಡಿಗ ಇವರ ಆಚಾರ್ಯತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳಾದ ಫಲಾನ್ಯಾಸ ಪೂರ್ವಕ ಗಣಪತಿ ಪೂಜೆ,ಷಣ್ ನಾಳಿಕೇರ ಗಣಯಾಗ,ಮಂಟಪ ಸಂಸ್ಕಾರ,ಸAಜೆ ನಾಗ ಯಕ್ಷಿ ಪರಿವಾರ ದೇವರಿಗೆ ಪೂಜಾ ಕಾರ್ಯ,ರಾಕ್ಷೋಘ್ನ ಹೋಮ,ವಾಸ್ತು ಪೂಜೆ,ಬಲಿ, ಬಿಂಬ ಶುದ್ಧಿ, ಇತರ ಪೂಜಾ ಹೋಮಾದಿಗಳು ನೆರವೆರಿತು.
ದೇಳದ ಪೂಜಾ ಕೈಂಕರ್ಯದಲ್ಲಿ ಕಂಬಳಗದ್ದೆ ಮನೆತನದ ಡಾ.ಜಿತೇಂದ್ರ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ,ಪ್ರಶಾಂತ್ ಶೆಟ್ಟಿ,ಸ್ಥಳೀಯರಾದ ಎಂ.ಎಸ್ ಸಂಜೀವ,ಶಿವರಾಮ್ ಶೆಟ್ಟಿ,ಮಹೇಶ್ ಶೆಟ್ಟಿ ,ಶಿರಿಯಾರ ನರಸಿಂಹ ಪೂಜಾರಿ,ಒಡಗಿನ ನಂದಿಕೇಶ್ಚರ ದೇವಳ ಪಾತ್ರಿ ಪ್ರಕಾಶ್ ಶೆಟ್ಟಿ, ರಾಜೇಶ್ ಕಂಬಳಗದ್ದೆ ಇತತರು ಉಪಸ್ಥಿತರಿದ್ದರು.

ಕಾರಣಿಕ ಕ್ಷೇತ್ರ ಮಣೂರು ಶ್ರೀ ಮಳಲುತಾಯಿ ದುರ್ಗಾಪರಮೇಶ್ವರಿ ದೇವಸ್ಥಾನ ಇದರ ನೂತನ ದೇಗುಲ ಲೋಕಾರ್ಪಣೆ ಅಷ್ಟಬಂಧ ಪುನಃ ಪ್ರತಿಷ್ಠೆ,ಸಹಸ್ರ ಪರಿಕಲಶ ಸಹಿತ ಬ್ರಹ್ಮಕಲಶೋತ್ಸವ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮ ಬುಧವಾರ ಆರಂಭಗೊAಡಿತು. ಶ್ರೀದೇವಳ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉದ್ಯಮಿ ಎಂ.ಆರ್ ಶೆಟ್ಟಿ, ಕಂಬಳಗದ್ದೆ ಮನೆತನದ ಡಾ.ಜಿತೇಂದ್ರ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ,ಪ್ರಶಾಂತ್ ಶೆಟ್ಟಿ ಮತ್ತಿತತರು ಉಪಸ್ಥಿತರಿದ್ದರು

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!