Janardhan Kodavoor/ Team KaravaliXpress
23.4 C
Udupi
Saturday, February 4, 2023
Sathyanatha Stores Brahmavara

ಹಿರಿಯ ತಬಲಾ ವಾದಕ ಕೆ.ಮಂಜಪ್ಪ ಸುವರ್ಣ ಅಂಬಲಪಾಡಿ ಇವರಿಗೆ ಗೌರವ ಸನ್ಮಾನ

ಹಿರಿಯ ತಬಲಾ ವಾದಕ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಮಂಜಪ್ಪ ಸುವರ್ಣ ಅಂಬಲಪಾಡಿ ಇವರನ್ನು ಶ್ರೀ ಬಬ್ಬು ಸ್ವಾಮಿ ದೇವಸ್ಥಾನ (ಪಡುಪಾಲು) ಅಂಬಲಪಾಡಿ ಇದರ ಆಡಳಿತ ಸಮಿತಿ, ಹತ್ತು ಸಮಸ್ತರು ಮತ್ತು ಗ್ರಾಮಸ್ಥರ ಪರವಾಗಿ ಕೊಡಿ ತಿಂಗಳ ಹರಕೆ ಸೇವೆಯ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಪಠೇಲರ ಮನೆ ಎ.ಜಯಕರ ಶೆಟ್ಟಿಯವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಕೋಶಾಧಿಕಾರಿ ಭರತ್ ರಾಜ್ ಕೆ.ಎನ್., ಹತ್ತು ಸಮಸ್ತರ ಗುರಿಕಾರ ದೇವದಾಸ್, ಸಮಿತಿಯ ಜತೆ ಕಾರ್ಯದರ್ಶಿಗಳಾದ ಯೋಗೀಶ್ ಶೆಟ್ಟಿ, ಲಕ್ಷ್ಮಣ ಪೂಜಾರಿ, ಸುನಿಲ್ ಕುಮಾರ್, ಜತೆ ಕೋಶಾಧಿಕಾರಿಗಳಾದ ಪಠೇಲರ ಮನೆ ಶರತ್ ಶೆಟ್ಟಿ, ಕೃಷ್ಣ ಅಂಬಲಪಾಡಿ, ಪ್ರಮುಖರಾದ ಪಠೇಲರ ಮನೆ ಮೋಹನ್ ಶೆಟ್ಟಿ ಮತ್ತು ಭರತ್ ಶೆಟ್ಟಿ, ಜಯರಾಮ ಶೆಟ್ಟಿ, ಸುಧಾಕರ ಎ., ರಮೇಶ್ ಕೋಟ್ಯಾನ್, ಶಿವಾಜಿ ಸನಿಲ್, ರಾಜಗೋಪಾಲ್, ಸುಂದರ ಮಾಸ್ತರ್, ಹೊನ್ನಯ್ಯ, ವಿಠ್ಠಲ, ಶಿವಾನಂದ, ಶ್ರೀಧರ, ಶ್ವೇತರಾಜ್, ಅನಿಲ್ ರಾಜ್ ಹಾಗೂ ಸಮಿತಿ ಸದಸ್ಯರು, ಹತ್ತು ಸಮಸ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!