ಮಣಿಪಾಲ ರೋಟರಿ ಮಾದರಿ ಕಾಯ೯ಕ್ರಮ

ಮಣಿಪಾಲ: -ಮಣಿಪಾಲ ರೋಟರಿ ಕ್ಲಬ್ ,ಮಣಿಪಾಲ ರೋಟರಾಕ್ಟ್ ಕ್ಲಬ್ ಮಣಿಪಾಲ ಸೆಂಟ್ರಲ್ ವತಿಯಿಂದ ಕೆ.ಎಂ.ಸಿಯ ಮಕ್ಕಳ ಕ್ಯಾನ್ಸರ್ ವಿಭಾಗದ ಸಹಯೋಗದಲ್ಲಿ ಮಕ್ಕಳಿಗೆ ಅವರಿಷ್ಟದ ಆಟಿಕೆಗಳ ವಿತರಣಾ ಕಾರ್ಯಕ್ರಮ ಆಗಸ್ಟ್ 24ರಂದು ನಡೆಯಿತು.

ಕ್ಯಾನ್ಸರ್ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಮಾರು 30 ಮಕ್ಕಳಿಗ ವಿವಿಧ ಆಟಿಕೆ ಮತ್ತು ಪುಸ್ತಕಗಳನ್ನು ವಿತರಿಸಲಾಯಿತು.

ಪೋಷಕರಿಗೆ ಅನ್ವಿತಾ ರವರು ಒತ್ತಡ ನಿವಾರಣೋಪಾಯ ಬಗ್ಗೆ ಮಾಹಿತಿ ನೀಡಿದರು. ಮಕ್ಕಳ ಕ್ಯಾನ್ಸರ್ ವಿಭಾಗದ ಮುಖ್ಯಸ್ಥರಾದ ಡಾI ವಾಸುದೇವ ಭಟ್ ಪ್ಯಾರಮೆಡಿಕಲ್ ವಿಭಾಗದ ಮುಖ್ಯಸ್ಥರಾದ ಡಾ|| ನವೀನ್ ಸಾಲಿನ್ಸ್ ಇತರ ವೈದ್ಯರುಗಳಾದ ಡಾIಪಂಕಜ್ ಡಾ|ಕೃತಿಕಾ ಡಾI ವಿನಯ್ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾದ ಡಾ|| ಪಿ.ವಿ ಭಂಡಾರಿಯವರು ಪ್ಯಾಲಿಯೇಟಿವ್ ಕೇರ್ ವಿಭಾಗದ ಕುರಿತಾಗಿ ಮಕ್ಕಳ ಕ್ಯಾನ್ಸರ್ ಚಿಕಿತ್ಸೆಯ ಲಭ್ಯತೆಯ ಕುರಿತಾಗಿ ಜಾಗೃತಿ ಆಗಬೇಕಾಗಿದೆ ಮಕ್ಕಳ ದೀರ್ಘಕಾಲೀನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಯುವಕರು ಇನ್ನಷ್ಟು ಸಕ್ರೀಯವಾಗಿ ಭಾಗವಹಿಸಲಿ ಎಂದು ಕರೆ ನೀಡಿದರು. ಕಾಯ೯ಕ್ರಮದಲ್ಲಿ ರೋಟರಿ ರೋಟರಾಕ್ಟ್ ಸದಸ್ಯರು ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply