ಮಾಹೆ ತನ್ನ ಐದನೇ ಆವೃತ್ತಿಿಯ ಮಣಿಪಾಲ್ ಮ್ಯಾಾರಥಾನ್ -2023ನ್ನು ಘೋಷಿಸುತ್ತಿಿದೆ

ಮಣಿಪಾಲ, ಆ. 16, 2022: ಇಂದು ನಡೆದ ಪತ್ರಿಿಕಾಗೋಷ್ಠಿಿಯಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ತನ್ನ 5ನೇ ಅವೃತ್ತಿಿಯ ಮಣಿಪಾಲ್ ಮ್ಯಾಾರಥಾನ್ 2023 (ಒಒ-2023) ನ್ನು ಘೋಷಿಸಿದೆ. ಈ ಕಾರ್ಯಕ್ರಮವನ್ನು ಮಾಹೆಯು ಉಡುಪಿ ಜಿಲ್ಲಾಾ ಅಮೆಚೂರ್ ಆತ್ಲೆೆಟಿಕ್‌ಸ್‌ ಅಸೋಸಿಯೇಶನ್ ಮತ್ತು ಓಇಃ ಸ್ಪೋೋರ್ಟ್‌ಸ್‌ ಬೆಂಗಳೂರು ಇದರ ಸಹಯೋಗದಲ್ಲಿ ನಡೆಸಲಿದೆ..
ಮಣಿಪಾಲ್ ಮ್ಯಾಾರಥಾನ್ ಎಂಬುದು ಉಡುಪಿ ಜಿಲ್ಲೆೆಯಲ್ಲಿ ವಾರ್ಷಿಕವಾಗಿ ನಡೆಯುವ ಒಂದು ಓಟದ ಕಾರ್ಯಕ್ರಮವಾಗಿದ್ದು, ಇದು ದೇಶದಲ್ಲೇ ಒಂದು ದೊಡ್ಡ ಮ್ಯಾಾರಥಾನ್ ಎಂದು ಪರಿಗಣಿಸಲ್ಪಟ್ಟಿಿದೆ. ಇದರ ಹಿಂದಿನ ಆವೃತ್ತಿಿಯು ಜಗತ್ತಿಿನ ವಿವಿಧ ಮೂಲೆಗಳಿಂದ ಎಲ್ಲ ವಯೋಮಾನದ ವೃತ್ತಿಿಪರ ಓಟಗಾರರು, ಆತ್ಲೆೆಟ್‌ಸ್‌ ಮತ್ತು ಇತರ ಸ್ಪರ್ಧಿಗಳನ್ನು ಆಕರ್ಷಿಸಿದೆ.
ಮಣಿಪಾಲ ಮ್ಯಾಾರಥಾನ್‌ನ 5ನೇ ಆವೃತ್ತಿಿಯು ಬಾಲ್ಯಾಾವಸ್ಥೆೆಯಲ್ಲಿ ಕಾಡುವ ಕ್ಯಾಾನ್ಸರ್ ಬಗ್ಗೆೆ ‘‘ಇಚಿಡಿಟಥಿ ಆಣಛಿಣಟಿ ಚಿ ಟ – ಅಚಿಟಿ ಅಡಿ-ಗಿ ಎಂಬ ಟ್ಯಾಾಗ್‌ಲೈನ್ ಮೂಲಕ ಜಾಗೃತಿ ಮೂಡಿಸಲಿದೆ. ಜತೆಗೆ ಈ ಕಾಯಿಲೆಯಿಂದ ಬಳಲುವವರಿಗೆ ಆರ್ಥಿಕ ಸಹಾಯ ಮಾಡಲು ನಿಧಿ ಸಂಗ್ರಹಿಸುವ ಉದ್ದೇಶವನ್ನೂ ಹೊಂದಿದೆ.
ಈ ಕಾರ್ಯಕ್ರಮವು 2023ರ ಫೆಬ್ರವರಿ 12ರಂದು ಆಗ ಜಾರಿಯಲ್ಲಿರುವ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಾಯವಾಗಿ ಪಾಲಿಸಿಕೊಂಡು ನಡೆಯಲಿದೆ. ಸುಮಾರು 15,000 ಓಟಗಾರರು ಭಾಗವಹಿಸುವ ನಿರೀಕ್ಷೆಯಿದೆ. ಈ ಹಿಂದಿನ ಆವೃತ್ತಿಿಯಲ್ಲಿ ಇಥಿಯೋಪಿಯಾ, ಜರ್ಮನಿ, ಕೀನ್ಯಾಾ, ಇಂಗ್ಲಂಡ್, ನೇಪಾಳ, ಮಲೇಶ್ಯಾಾ ಮತ್ತು ಶ್ರೀಲಂಕಾದ ಸ್ಪರ್ಧಿಗಳು ಭಾಗವಹಿಸಿದ್ದು,. 5ನೇ ಆವೃತ್ತಿಿಯಲ್ಲೂ ಅವರು ಪಾಲ್ಗೊೊಳ್ಳುವ ನಿರೀಕ್ಷೆಯಿದೆ.
ಈ ಬಗ್ಗೆೆ ಮಾಹಿತಿ ನೀಡಿದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಾಳ್ ಅವರು, ನಮ್ಮ ಪರಂಪರೆಯ ಮಣಿಪಾಲ್ ಮ್ಯಾಾರಥಾನ್ 2023ನ್ನು ಮರಳಿ ತರಲು ತುಂಬಾ ಸಂತೋಷವಾಗುತ್ತಿಿದೆ. ಮಾಹೆಯು ಯಾವತ್ತೂ ತನ್ನ ವಿದ್ಯಾಾರ್ಥಿಗಳಲ್ಲಿ ಫಿಟ್‌ನೆಸ್ ಮತ್ತು ಉತ್ತಮ ಆರೋಗ್ಯಕ್ಕಾಾಗಿ ಶ್ರಮಿಸುತಿದೆ.ಇದನ್ನು ಸಾಧಿಸಲು ಓಟವು ಅತ್ಯುತ್ತಮ ಮಾಧ್ಯಮವಾಗಿದೆ. ಈ ಬಾರಿ ಈ ಮ್ಯಾಾರಥಾನ್ ಮಕ್ಕಳ ಕ್ಯಾಾನ್ಸರ್ ಬಗ್ಗೆೆ ಜಾಗೃತಿ ಮತ್ತು ಅವರಿಗೆ ಸಹಾಯ ಮಾಡಲು ನಿಧಿ ಸಂಗ್ರಹಿಸುವ ಒಂದು ಉತ್ತಮ ಉದ್ದೇಶವನ್ನೂ ಹೊಂದಿದೆ. ಮ್ಯಾಾರಥಾನ್‌ನ ಮೊದಲ ಆವೃತ್ತಿಿಯಿಂದಲೇ ಉತ್ತಮ ಸ್ಪಂದನೆ ಸಿಕ್ಕಿಿದ್ದು, ಮುಂದಿನ ಆವೃತ್ತಿಿಗೂ ಜನರು ಅದೇ ರೀತಿಯಲ್ಲಿ ಭಾಗವಹಿಸಿ ಉತ್ತಮ ಬೆಂಬಲ ನೀಡುವ ವಿಶ್ವಾಾಸವಿದೆ ಎಂದು ಹೇಳಿದರು.
ಉಡುಪಿ ಶಾಸಕ ಹಾಗೂ ಉಡುಲಿ ಜಿಲ್ಲಾಾ ಅಮೆಚೂರ್ ಆತ್ಲೆೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಕೆ. ರಘುಪತಿ ಭಟ್ ಮಾತನಾಡಿ, ಮಣಿಪಾಲ್ ಮ್ಯಾಾರಥಾನ್ ಎಂಬುದು ಎಲ್ಲರಿಗೂ ಓಟದ ಖುಷಿಯನ್ನು ಆಸ್ವಾಾದಿಸಲು ಇರುವಂಥ ಒಂದು ಉತ್ತಮ ಅವಕಾಶವಾಗಿದೆ. ನೀವು ವೃತ್ತಿಿಪರ ಓಟಗಾರರಾಗಿದ್ದರೂ ಅಥವಾ ಹವ್ಯಾಾಸಿಯಾಗಿದ್ದರೂ ಎಲ್ಲರಿಗೂ ಸರಿಹೊಂದುವಂಥ ಹಾಗೂ ಅವರವರ ಸಾಮಥ್‌ಯ್‌ಕ್ಕೆೆ ಪ್ರತ್ಯೇಕ ವಿಭಾಗಗಳನ್ನು ರೂಪಿಸಲಾಗುವುದು. ಉಡುಪಿ ಹಾಗೂ ಮಣಿಪಾಲದು ಪ್ರಕೃತಿ ಸೌಂದರ್ಯವನ್ನು ಆಸ್ವಾಾದಿಸುತ್ತಾಾ ಓಡುವ ಅವಕಾಶವೂ ಏಕಕಾಲಕ್ಕೆೆ ಈ ಮ್ಯಾಾರಥಾನ್‌ನಿಂದ ಸಿಗಲಿದೆ.
ಮಾಹೆಯ ಉಪ ಕುಲಾಧಿಪತಿ ಲೆ. ಜ. (ಡಾ) ಎಂ.ಡಿ. ವೆಂಕಟೇಶ್ ಮಾತನಾಡಿ, ಈಗಿನ ದಿನಮಾನದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹಾಗೂ ಸ್ವಾಾಸ್ಥ್ಯವು ಆದ್ಯತೆಯ ವಿಷಯವಾಗಿದೆ. ಮಣಿಪಾಲ್ ಮ್ಯಾಾರಥಾನ್ ವಿದ್ಯಾಾರ್ಥಿಗಳು ಹಾಗೂ ಇತರ ಸ್ಪರ್ಧಿಗಳಲ್ಲಿ ಓಟದ ಮೂಲಕ ಆರೋಗ್ಯ ಕಾಪಾಡಿಕೊಳ್ಳುವುದನ್ನು ಪ್ರೋೋತ್ಸಾಾಹಿಸಲಿದೆ. ಈ ಕಾರ್ಯಕ್ರಮವು 2023ರ ಫೆಬ್ರವರಿಯಲ್ಲಿ ಜಾರಿಯಲ್ಲಿರಬಹುದಾದ ಕೋವಿಡ್ ಮಾನದಂಡವನ್ನು ಪಾಲಿಸಿಕೊಂಡು ಸುಗಮವಾಗಿ ನಡೆಯಲಿದೆ ಎಂದು ಹೇಳಿದರು.
ಮಾಹೆಯ ಪ್ರೊೊ. ಚಾನ್ಸೆೆಲರ್ (ಆರೋಗ್ಯ ವಿಜ್ಞಾಾನ) ಡಾ. ವೆಂಕಟೇಶ ಎಂ. ಪ್ರಭು ಮಾತನಾಡಿ, ಓಟವು ಹೃದಯದ ಆರೋಗ್ಯ, ಮೂಳೆ ಸಾಂದ್ರತೆ, ಇತರ ಸಾಮಾನ್ಯ ಫಿಟ್‌ನೆಸ್ ಅನ್ನು ಉತ್ತಮಗೊಳಿಸುತ್ತದೆ, ಇಂಥ ಕಾರ್ಯಕ್ರಮಗಳು ಸಾಧನೆಗೂ ಪೂರಕವಾಗಿದೆ. ಒಂದು ಉತ್ತಮ ಉದ್ದೇಶಕ್ಕಾಾಗಿ ಸಮುದಾಯವನ್ನು ಒಟ್ಟಿಿಗೆ ಸೇರಿಸಲು ಕೂಡ ಕಾರಣವಾಗುತ್ತದೆ ಎಂದು ಹೇಳಿದರು.
ಮಾಹೆಯ ರಿಜಿಸ್ಟ್ರಾಾರ್ ಡಾ. ನಾರಾಯಣ ಸಭಾಹಿತ್ ಮಾತನಾಡಿ, ಮಣಿಪಾಲ್ ಮ್ಯಾಾರಥಾನ್ ಪ್ರತಿಯೊಂದು ಆವೃತ್ತಿಿಯೊಂದಿಗೂ ಓಟದ ಸಂಸ್ಕೃತಿಯನ್ನು ಕ್ರಾಾಂತಿಯುತಗೊಳಿಸುತ್ತದೆ. ಈ ಭಾಗದ ಆತ್ಯುತ್ಸಾಾಹಿಗಳಲ್ಲಿ ಹೊಸ ಹುರುಪನ್ನು ಮೂಡಿಸುತ್ತದೆ ಹಾಗೂ ಎಲ್ಲರಲ್ಲೂ ಸದೃಢವಾಗುವ ಆಸೆಯನ್ನು ಚಿಗುರಿಸುತ್ತದೆ. ಪ್ರತಿವರ್ಷದಂತೆ 5ನೇ ಆವೃತ್ತಿಿಯೂ ಆಕರ್ಷಕ ಬಹುಮಾನ, ಅತ್ಯುತ್ತಮ ಆಹಾರದೊಂದಿಗೆ ಎಲ್ಲರಲ್ಲೂ ಸಂಚಲನ ಮೂಡಿಸಲಿದೆ ಎಂದು ಹೇಳಿದರು.
ಉಡುಪಿ ಶಾಸಕ ಹಾಗೂ ಉಡುಪಿ ಜಿಲ್ಲಾಾ ಅಮೆಚೂರ್ ಆತ್ಲೆೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಕೆ. ರಘುಪತಿ ಭಟ್ ಅವರು ಮ್ಯಾಾರಥಾನ್ ಸಂಘಟಕರಿಗೆ ಶುಭ ಹಾರೈಸಿದ್ದು, ಮಾಹೆಯ 5ನೇ ಆವೃತ್ತಿಿಯ ಮಣಿಪಾಲ್ ಮ್ಯಾಾರಥಾನ್ ಯಶಸ್ವಿಿಯಾಗಲಿ ಹಾಗೂ ಸ್ಪರ್ಧಿಗಳಿಗೆ ಓಟದ ಒಂದು ಅತ್ಯುತ್ತಮ ಅನುಭವವನ್ನು ನೀಡಲಿ ಎಂದು ಆಶಿಸಿದ್ದಾಾರೆ.
ಎನ್‌ಇಬಿ ನಿರ್ದೇಶಕ ಹಾಗೂ ಅರ್ಜುನ ಪ್ರಶಸ್ತಿಿ ಪುರಸ್ಕೃತ ರೀತಿ ಅಬ್ರಹಾಂ ಅವರು ಮಾತನಾಡಿ, ಮಾಹೆ ಮತ್ತು ಉಡುಪಿ ಜಿಲ್ಲಾಾ ಅಮೆಚೂರ್ ಆತ್ಲೆೆಟಿಕ್ ಅಸೋಸಿಯೇಶನ್ ಜತೆಗೆ ಸಹಯೋಗ ಹೊಂದಲು ನಮಗೆ ತುಂಬಾ ಸಂತೋಷವಾಗುತ್ತಿಿದೆ. ಈ ಮ್ಯಾಾರಥಾನ್ ಕೆಲವು ವರ್ಷಗಳಿಂದ ವೃತ್ತಿಿಪರ ಆತ್ಲೆೆಟಿಕ್‌ಗಳಿಗೆ ಬೆಳೆಯಲು ಅತ್ಯುತ್ತಮ ಪ್ಲಾಾಟ್‌ಫಾರ್ಮ್ ಆಗಿದೆ ಹಾಗೂ ಭವಿಷ್ಯದಲ್ಲೂ ಆಗಿರಲಿದೆ. ಕಾರ್ಯಕ್ರಮದ ಸಂಘಟನೆ, ಗುಣಮಟ್ಟ ಹಾಗೂ ನಡವಳಿಕೆಯು ಉತ್ಷಷ್ಟ ಮಟ್ಟದ್ದಾಾಗಿದ್ದು, ಆದ್ದರಿಂದ ಈ ಮ್ಯಾಾರಥಾನ್ ಶೀಘ್ರದಲ್ಲೇ ಇಂಟರ್‌ನ್ಯಾಾಷನಲ್ ಅಸೋಸಿಯೇಶನ್ ಆಫ್ ಆತ್ಲೆೆಟಿಕ್‌ಸ್‌ ಫೆಡರೇಶನ್‌ನಿಂದ ಗೋಲ್‌ಡ್‌ ಲೇಬಲ್ ಮಾನ್ಯತೆ ಪಡೆಯುವ ವಿಶ್ವಾಾಸವಿದೆ ಎಂದು ಹೇಳಿದರು.
ಮಾಹೆಯ ಕ್ರೀಡಾ ಕೌನ್ಸಿಿಲ್ ಕಾರ್ಯದರ್ಶಿ ಡಾ. ವಿನೋದ್ ಸಿ. ನಾಯಕ್ ಮಾತನಾಡಿ, ಮಣಿಪಾಲ್ ಮ್ಯಾಾರಥಾನ್ ಪ್ರತಿ ವರ್ಷದಂತೆ ಈ ವರ್ಷವೂ ಒಂದು ವಿಶಿಷ್ಟ ಸಂದೇಶದೊಂದಿಗೆ ಬರುತ್ತಿಿದೆ. ಜಾಗೃತಿ ಮೂಡಿಸುವುದು ನಮ್ಮ ಆದ್ಯತೆಯ ಗುರಿಯಾಗಿದೆ. ಮಣಿಪಾಲ್ ಮ್ಯಾಾರಥಾನ್ ಮೂಲಕ ನಾವು ಅದನ್ನು ಮುಂದುವರಿಸುತ್ತೇವೆ. ಮಣಿಪಾಲ್ ಮ್ಯಾಾ8ರಥಾನ್ 2023 ಬಾಲ್ಯದಲ್ಲಿ ಕಾಡುವ ಕ್ಯಾಾನ್ಸರ್ ಬಗ್ಗೆೆ ಜಾಗೃತಿ ಮೂಡಿಸಲು ಶ್ರಮಿಸಲಿದೆ ಎಂದು ಹೇಳಿದರು.
ಈ ಮ್ಯಾಾರಥಾನ್ ಅನ್‌ಟೈಮ್‌ಡ್ 3ಕೆ ಫನ್ ರನ್ ಮತ್ತು ಕಾರ್ಪೊರೇಟ್ 3ಕೆ, ಮತ್ತು ಟೈಮ್‌ಡ್ 5ಕೆ, 10ಕೆ, 21ಕೆ ಮತ್ತು 42 ಕೆ ಎಂಬ ವಿಭಾಗಗಳಲ್ಲಿ ನಡೆಯಲಿದೆ. ಶೀಘ್ರದಲ್ಲೇ ನೋಂದಣಿ ಪ್ರಕ್ರಿಿಯೆ ಆರಂಭಗೊಳ್ಳಲಿದೆ.

 
 
 
 
 
 
 
 
 
 
 

Leave a Reply