ಭಾರತ ಸ್ಕೌಟ್ ಅಂಡ್ ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಉಡುಪಿ ದಿನಾಂಕ25/05/2022 ರಂದು ಅಟಲ್ ಬಿಹಾರಿ ವಾಜಪೇಯಿ ಸಭಾಂಗಣ ಮಣಿಪಾಲ, ಇಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾಗಿರುವ ಗೋವಿಂದ ಮಡಿವಾಳ ಇವರ ಅಧ್ಯಕ್ಷತೆಯಲ್ಲಿ BEO, TPEO,BRP, CRP, ಯವರ ಸಭೆಯನ್ನು ಕರೆಯಲಾಯಿತು.
ಭಾರತ ಜಗತ್ತಿಗೆ ಆದರ್ಶವಾಗಿ ಇತರ ದೇಶಗಳ ಕಷ್ಟಸಮಯದಲ್ಲಿ ಸ್ಪಂದಿಸಿ ಸೇವಾ ಮನೋಭಾವನೆಯಿಂದ ಕರ್ತವ್ಯ ಮಾಡಿ ತನ್ನ ಶ್ರೇಷ್ಠ ತೆಯನ್ನು ಮೆರೆದಿದೆ ರಾಷ್ಟ್ರೀಯ ಭಾವೈಕ್ಯತೆಯ ಭ್ರಾತೃತ್ವದಲ್ಲಿ ಸಂಸ್ಕೃತಿಯ ಗುಣವನ್ನು ತೋರಿದೆ.ಇದು ಭಾರತೀಯರಾದ ನಮಗೆ ಅಭಿಮಾನ ಮತ್ತು ತೃಪ್ತಿ. ಇಂತಹ ಸದ್ಗುಣಗಳನ್ನು ಹಾಗೂ ಪರರಿಗೆ ಸಹಾಯ ಮಾಡುವ ಹೃದಯವಂತಿಕೆಯನ್ನು ಮೂಡಿಸುವ ಉದ್ದೇಶವನ್ನು ಸ್ಕೌಟ್ಸ್ ಗೈಡ್ಸ್ ಚಳುವಳಿಯೂ ಹೊಂದಿದೆ. ಭವಿತವ್ಯ ಭಾರತದ ಆಸ್ತಿಗಳಾದ ವಿದ್ಯಾರ್ಥಿಗಳಿಗೆ ದೇಶಪ್ರೇಮ ಪ್ರಕೃತಿ ಪ್ರೇಮ ಮತ್ತೆ ದಿಟ್ಟನಾಯಕತ್ವವನ್ನು ಮೂಡಿಸುವಲ್ಲಿ ಪ್ರತಿಯೊಬ್ಬ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಕೌಟ್ಸ್ ಗೈಡ್ಸ್ ತತ್ವಗಳನ್ನು ವಿದ್ಯಾರ್ಥಿ ಗಳಿಗೆ ಮೈಗೂಡಿಸುವಲ್ಲಿ ಸಹಕರಿಸಬೇಕು.ಎಸ್ಸೆಸ್ಸೆಲ್ಸಿ ಫಲಿತಾಂಶ ವಿಶೇಷವಾಗಿ ಸ್ಕೌಟ್ಸ್. ಗೈಡ್ಸ್ ಅಪ್ರತಿಮ ಸಾಧನೆಯನ್ನು ಮಾಡಿರುವುದು ತುಂಬಾ ಸಂತೋಷವೆಂದು,ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯಸಂಸ್ಥೆ ಮುಖ್ಯ ಆಯುಕ್ತರಾದ ಪಿ. ಜಿ ಆರ್ ಸಿಂಧ್ಯಾ ಇವರು ಉಢುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಹಾಗೂ ಉಡುಪಿ.ಜಿಲ್ಲಾ ಮುಖ್ಯ ಕಾರ್ಯನಿರ್ವಹಕ ಅಧಿಕಾರಿಗಳ ಸಹಕಾರದಲ್ಲಿ ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಜಿಲ್ಲೆಯ ಶೈಕ್ಷಣಿಕ ವಲಯದ ಬಿ ಇ ಒ ಟಿ ಪಿ ಇ ಓ ಬಿ ಆರ್ ಪಿ ಸಿ.ಆರ್ ಪಿ ಗಳಿಗೆ ಒಂದು ದಿನದ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತಾಡಿದರು.ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿಸುವುದೇ ಸ್ಕೌಟ್ಸ್ ಗೈಡ್ಸ್ಚಳುವಳಿಯ ಉದ್ದೇಶ ಎಂದರು* ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ ವಿದ್ಯಾಂಗ ಇಲಾಖೆಯ ಉಪನಿರ್ದೇಶಕ ಗೋವಿಂದ ಮಡಿವಾಳ ವಹಿಸಿ ಶೈಕ್ಷಣಿಕವಾಗಿ ಜ್ಞಾನವನ್ನು ಗಳಿಸುವ ವಿದ್ಯಾರ್ಥಿಗಳು ಉತ್ತಮ ನಾಯಕತ್ವ ದೇಶಸೇವೆ ಮನೋಭಾವನೆಯನ್ನು ಬೆಳೆಸಿಕೊಂಡು ಸತ್ಪ್ರಜೆಯಾಗಿ ಬಾಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ರಾಜ್ಯ ಸಂಸ್ಥೆಯ ಕಾರ್ಯದರ್ಶಿ ಗಂಗಪ್ಪ ಗೌಡ ರು ಮಾತಾನಾಡಿ ವಿದ್ಯಾರ್ಥಿಗಳ ಜೀವನಕ್ಕೆ ಪೂರಕವಾದ ಎಲ್ಲಾ ಜೀವನ ಕೌಶಲ್ಯ ಗಳನ್ನು ಸ್ಕೌಟ್ಸ್. ಗೈಡ್ಸ್ ಚಳುವಳಿಯಲ್ಲಿ ನೀಡಲಾಗುವುದು ಎಂದು ತಿಳಿಸಿದರು. ವೇದಿಕೆಯಲ್ಲಿ ರ ಜ್ಯ ಸಂಘಟನಾ ಆಯುಕ್ತ ಪ್ರಭಾಕರ ಭಟ್ ಉಡುಪಿ ಜಿಲ್ಲಾ ಗೈಡ್ ಆಯುಕ್ತೆ ಜ್ಯೋತಿ ಜೆ ಪೈ ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ ಅಶೋಕ್ ಕಾಮತ್ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಯಾಗಿರುವ ಮುಂದಿನಮನಿ, ಉಡುಪಿ ದೈಹಿಕ ಶಿಕ್ಷಣ ಅಧಿಕಾರಿಯಾಗಿರುವ ಸೀನ್ ರಘುನಾಥ್,,ಉಡುಪಿ ಜಿಲ್ಲಾ ಸಂಸ್ಥೆ ಕಾರ್ಯದರ್ಶಿ ಕೊಗ್ಗ ಗಾಣಿಗ, ಜಿಲ್ಲಾ ಸ್ಕೌಟ್ ಆಯುಕ್ತರಾದ ಡಾಕ್ಟರ್ ವಿಜಯೇಂದ್ರ ವಸಂತರಾವ್ ಉಪಿಸ್ಥಿತರಿದ್ದು ಎಲ್ಲರನ್ನೂ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಇವರು ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ಉಡುಪಿ ಜಿಲ್ಲಾ ಗೈಡ್ ಆಯುಕ್ತೆ ಶ್ರೀಮತಿ ಸಾವಿತ್ರಿ ಮನೋಹರ್ ಜಿಲ್ಲಾ ಸಂಸ್ಥೆ ಉಪಾಧ್ಯಕ್ಷ ಎಡ್ವಿನ್ ಆಳ್ಳ, ಸಮಾಜ ಕಲ್ಯಾಣ ಇಲಾಖೆಯ ಪದಾಧಿಕಾರಿಗಳು, ಎಲ್ಲಾ ಜಿಲ್ಲಾ ಪದಾಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಯವರು ಮೊದಲಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಯನ್ನು ಜಿಲ್ಲಾ ಸ್ಕೌಟ್ ತರಬೇತು ಆಯುಕ್ತರಾದ ಆನಂದ ಅಡಿಗ ನುಡಿದರು. ಕಾರ್ಕಳ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಗಣೇಶ್ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿದರು. ಕಡಿಯಾಳಿ ಮುಕ್ತ ದಳದ ರೋವರ್ಸ್ ರೇಂಜರ್ಸ್ ತಮ್ಮ ಸೇವೆಯನ್ನು ಮಾಡಿದರು.ರಾಜ್ಯ ಸಹ ಸಂಘಟನಾ ಆಯುಕ್ತರಾದ ಶ್ರೀಮತಿ ಸುಮನ್ ಶೇಖರ್ ಕಾರ್ಯಕ್ರಮನ್ನು ಸಂಘಟಿಸಿದರು.