ಪಾರ್ಶ್ವವಾಯು ಜಾಗೃತಿ ಕಾರ್ಯಕ್ರಮ ಮತ್ತು ಗಿನ್ನೆಸ್ ವಿಶ್ವ ದಾಖಲೆಗೆ  ಬಹುಪಾಲು ಪ್ರತಿಜ್ಞೆ   ನಡೆಸಿದ ಫಲಕವನ್ನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಹಸ್ತಾಂತರ  

ಮಣಿಪಾಲ, 13ನೇ ಏಪ್ರಿಲ್ 2022: ಪಾರ್ಶ್ವವಾಯು (ಸ್ಟ್ರೋಕ್) ಒಂದು ಪ್ರಮುಖ ಸಾಂಕ್ರಾಮಿಕವಲ್ಲದ ಕಾಯಿಲೆಯಾಗಿದೆ. ನಾಲ್ಕು ವಯಸ್ಕರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಪಾರ್ಶ್ವವಾಯು ಕಾಯಿಲೆಗೆ  ತುತ್ತಾಗುತ್ತಾರೆ . ಇದರ  ಕುರಿತು ಜಾಗೃತಿ ಮೂಡಿಸಲು,  ಅಕ್ಟೋಬರ್ ತಿಂಗಳಲ್ಲಿ  ವಿಶ್ವ ಪಾರ್ಶ್ವವಾಯು ದಿನದಂದು, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ನರವಿಜ್ಞಾನ ವಿಭಾಗವು ಪಾರ್ಶ್ವವಾಯು ಜಾಗೃತಿ ಅಭಿಯಾನವನ್ನು ನಡೆಸಿತ್ತು.
ಬೋರಿಂಗ್ ಇಂಗ್ಇಲಹಿಂ ಇಂಡಿಯಾ  ಕಂಪನಿಯು ಸ್ಟ್ರೋಕ್ ಮೌಲ್ಯಮಾಪನ ಅಪ್ಲಿಕೇಶನ್ ಮೂಲಕ ಸ್ಟ್ರೋಕ್ ಜಾಗೃತಿ ಅಭಿಯಾನ ಮತ್ತು  ಪ್ರತಿಜ್ಞೆಗಾಗಿ  ಗಿನ್ನೆಸ್ ವಿಶ್ವ ದಾಖಲೆಗಾಗಿ ಈ ಕಾರ್ಯಕ್ರಮ ಆಯೋಜಿಸಿತ್ತು.  ಸ್ಟ್ರೋಕ್ ಪ್ರತಿಜ್ಞೆಗಳನ್ನು ರಚಿಸುವಲ್ಲಿ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ್ ಮತ್ತು ಭಾರತದ ವಿವಿಧ ಸಂಸ್ಥೆಗಳು ಭಾಗವಹಿಸಿದ್ದವು.   ಇದಕ್ಕೆ  ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಗಮನಾರ್ಹ ಕೊಡುಗೆಗಳನ್ನು ನೀಡಿತ್ತು.   ಭಾರತದಾದ್ಯಂತ ಒಟ್ಟು 17,691 ಪ್ರತಿಜ್ಞೆಗಳನ್ನು ರಚಿಸುವ ಮೂಲಕ ಯಶಸ್ವಿಯಾಗಿ ಗಿನ್ನೆಸ್ ವಿಶ್ವ ದಾಖಲೆ ಮಾಡಿದೆ. ನಮ್ಮ ಆಸ್ಪತ್ರೆಯು ಸ್ಟ್ರೋಕ್ ಸ್ಕ್ರೀನಿಂಗ್ ಭಾಗವಾಗಿ ನಡೆಸಿದ  ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ತಪಾಸಣೆಯ ಜೊತೆಗೆ ಸ್ಟ್ರೋಕ್ ಜಾಗೃತಿ ಮತ್ತು  ಪ್ರತಿಜ್ಞಾ ಕಾರ್ಯಕ್ರಮದಲ್ಲಿ  500 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು . ಪ್ರತಿಜ್ಞಾ ನೋಂದಣಿಯನ್ನು https://strokeriskcalculator.in ನಲ್ಲಿ ನಡೆಸಲಾಗಿತ್ತು.

ಇದರ ಮುಂದುವರಿದ ಭಾಗವಾಗಿ  ಮತ್ತು   ಕಸ್ತೂರ್ಬಾ ಆಸ್ಪತ್ರೆಯ ತನ್ನ 60ನೇ ವರ್ಷದ “ರೋಗಿಯೇ  ಮೊದಲು ” ಎಂಬ ಘೋಷ ವಾಕ್ಯದಂತೆ , ಆಸ್ಪತ್ರೆಯಲ್ಲಿ ಸ್ಟ್ರೋಕ್ ಜಾಗೃತಿ ಕಾರ್ಯಕ್ರಮವನ್ನು ಮತ್ತು ಗಿನ್ನೆಸ್ ವಿಶ್ವ ದಾಖಲೆಯ ಭಾಗವಹಿಸುವಿಕೆ ಯಶಸ್ವಿ ಪ್ರಯತ್ನಕ್ಕಾಗಿ ಬೋರಿಂಗ್ ಇಂಗ್ಇಲಹಿಂ ಇಂಡಿಯಾ  ಕಂಪನಿಯು  ಫಲಕವನ್ನು ಹಸ್ತಾಂತರಿಸಿತು.  ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ.ಶರತ್ ಕುಮಾರ್ ರಾವ್, ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಶ್ರೀ ಸಿ.ಜಿ.ಮುತ್ತಣ್ಣ  ಮತ್ತು ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಅವರು ಸ್ವೀಕರಿಸಿದರು.ಈ ಸಂದರ್ಭದಲ್ಲಿ ಮಾನಾಡಿದ ಡಾ ಶರತ್ ರಾವ್  ಅವರು ಪಾರ್ಶ್ವವಾಯು ಜಾಗೃತಿಯ ಅಗತ್ಯವನ್ನು  ಹೇಳಿದರು ಮತ್ತು ಉತ್ತಮ ರೋಗಿಗಳ ಆರೈಕೆ ಮತ್ತು ಸೇವೆಗಳಿಗಾಗಿ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಉಪವಿಭಾಗಗಳನ್ನು ನಿರ್ಮಿಸಲು ಸಹ ಒತ್ತಿ ಹೇಳಿದರು. ರೋಗಿಗಳ ಶಿಕ್ಷಣ ಮತ್ತು ಉತ್ತಮ ಪಾರ್ಶ್ವವಾಯು ಆರೈಕೆಯಲ್ಲಿ ಈ ಸ್ಟ್ರೋಕ್ ಜಾಗೃತಿ ಕಾರ್ಯಕ್ರಮದ ಪ್ರಯತ್ನಗಳನ್ನು ಡಾ ಅವಿನಾಶ ಶೆಟ್ಟಿ  ಶ್ಲಾಘಿಸಿದರು .
ನರರೋಗ ವಿಭಾಗದ ಪ್ರಾಧ್ಯಾಪಕಿ ಹಾಗೂ ಮುಖ್ಯಸ್ಥೆ ಡಾ.ಅಪರ್ಣಾ ಆರ್.ಪೈ ಸ್ವಾಗತಿಸಿದರು. ಸಹ ಪ್ರಾಧ್ಯಾಪಕ ಡಾ.ನಿಕಿತ್ ಎ ಪಾರ್ಶ್ವವಾಯು ಜಾಗೃತಿ ಕುರಿತು ಮಾತನಾಡಿದರು. ಸಹ  ಪ್ರಾಧ್ಯಾಪಕಿ ಡಾ. ನಿಶಾ ಶೆಣೈ, ಕಾರ್ಯಕ್ರಮ ನಿರೂಪಿಸಿ  ಮತ್ತು ಧನ್ಯವಾದವನ್ನು ಸಲ್ಲಿಸಿದರು.

 
 
 
 
 
 
 
 
 
 
 

Leave a Reply