ಅವೈಜ್ಞಾನಿಕ ಸ್ಮಾರ್ಟ್ ವಿನ್ಯಾಸದ ಚರಂಡಿ ಯೋಜನೆ

ಮಂಗಳೂರು : ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಅನೇಕ ಹೊಸ ಕೆಲಸಗಳು,ಪ್ರಯೋಗಗಳಾಗುತ್ತಿದೆ, ಹಲವಾರು ಯೋಜನೆ ಸಕಾರಾತ್ಮಕವಾಗಿ ಇದ್ದರೂ ಬಹಳಷ್ಟು ಅವೈಜ್ಞಾನಿಕ ಕೆಲಸಗಳು ಕಂಡು ಬರುತ್ತಿದೆ.

ಶನಿವಾರ ಬೆಳಿಗ್ಗೆನ ಮಳೆಗೆ ಪಂಪ್ ವೆಲ್ ಮೇಲ್ಸೇತುವೆ ಬಳಿ ನೀರು ನಿಂತು ಕೃತಕ ನೆರೆ ಪರಿಸ್ಥಿತಿ ಉಂಟಾಗಿತ್ತು.ಬಳಿಕ ಪಾಲಿಕೆ ಎಚ್ಚೆತ್ತು ಬಳಿಯ ರಾಜ್ ಕಾಲುವೆಯ ಕಸ,ಹೂಳು ತೆಗೆದ ಪರಿಣಾಮ ನೀರು ಹರಿದು ಹೋಗಲು ಸಾಧ್ಯ ವಾಯಿತು.

ಇದಕ್ಕೆ ಬಹು ಮುಖ್ಯ ಕಾರಣ, ಹೊಸ ವಿನ್ಯಾಸದ ಸ್ಮಾರ್ಟ್ ಚರಂಡಿ ವ್ಯವಸ್ಥೆ ಆಗಿರಬಹುದು ಅಂದರೆ ತಪ್ಪಾಗಲಾರದು. ನಗರದ ಮುಖ್ಯ ಕಾಂಕ್ರೀಟ್ ರಸ್ತೆಯ ಬದಿಯಲ್ಲಿ ಮೊದಲಿದ್ದ ನೀರಿನ ತೋಡು ಈಗ ಇಲ್ಲ ಬದಲಾಗಿ ರಸ್ತೆಯ ಒಳಗಿಂದ ನೀರಿನ ಚರಂಡಿ ವ್ಯವಸ್ಥೆ ಮಾಡಲಾಗಿದೆ.ಅದಕ್ಕೆ ಕಬ್ಬಿಣದ ಕಂಬಿಯ ಮುಚ್ಚಿಕೊಂಡಿದೆ,ಜೋರಾಗಿ ಮಳೆ ಬಂದಾಗ ತಗ್ಗು ಪ್ರದೇಶದ ಇಂತಹ ಚರಂಡಿಗಳು ಪ್ಲಾಸ್ಟಿಕ್,ಮಣ್ಣು, ಕಸಕಡ್ಡಿಗಳಿಂದ ತುಂಬಿ, ನೀರು ಹರಿದು ಹೋಗಲು ಅವಕಾಶ ಇರುವುದಿಲ್ಲ.ಅಲ್ಲದೇ ಕೃತಕ ನೆರೆ ಬರಲು ಬಹು ಮುಖ್ಯ ಕಾರಣವಾಗುವುದು ಅಂತೂ ಖಂಡಿತ.ಕರಾವಳಿ ಪ್ರದೇಶದಲ್ಲಿ ವಾರ್ಷಿಕ ಸರಾಸರಿ ಮಳೆ ಜಾಸ್ತಿ ಇರುವ ಕಾರಣ ಇಂತಹ ವಿನ್ಯಾಸದ ಚರಂಡಿ ಅವೈಜ್ಞಾನಿಕ ಯೋಜನೆ ಗೆ ನಿದರ್ಶನ ಎಂದು ಸಾರ್ವಜನಿಕರ ಅಭಿಪ್ರಾಯ. ಸಂಬಂಧ ಪಟ್ಟವರು ಈ ಬಗ್ಗೆ ಆದಷ್ಟು ಬೇಗ ಗಮನಹರಿಸಬೇಕಾಗಿದೆ.

 
 
 
 
 
 
 
 
 

Leave a Reply