ಮಲ್ಪೆ: ಭಾರೀ ಗಾತ್ರದ ಮೀನು ಗಾಳಕ್ಕೆ

ಮಲ್ಪೆ: ಮಲ್ಪೆ ಸಮುದ್ರದಲ್ಲಿ ಗಾಳಕ್ಕೆ ಭಾರೀ ಗಾತ್ರದ ಎರಡು ಮೀನುಗಳು ಸಿಕ್ಕಿದ್ದು ಮತ್ಸ್ಯಪ್ರಿಯರ ಕುತೂಹಲಕ್ಕೆ ಕಾರಣವಾಗಿವೆ. ಕೇಬಲ್ ಆಪರೇಟರ್ ವೃತ್ತಿ ಮಾಡಿಕೊಂಡಿರುವ ಉದ್ಯಾವರ ನಾಗೇಶ್ ರವರಿಗೆ ಈ ಮೀನುಗಳು ಸಿಕ್ಕಿವೆ. 

ಇವತ್ತು ದೋಣಿಯಲ್ಲಿ ಹೋಗಿ ಮೀನಿಗೆ ಗಾಳ ಹಾಕಿದಾಗ ಬೃಹತ್ ಗಾತ್ರದ ಎರಡು ಮೀನುಗಳು ಇವರ ಗಾಳಕ್ಕೆ ಬಿದ್ದಿವೆ. 25 ಕೆ.ಜಿ ತೂಕದ ಮುರು ಮೀನು ಹಾಗೂ 15 ಕೆ.ಜಿ ತೂಕದ ಕೊಕ್ಕರ್ ಮೀನು ಇವಾಗಿದ್ದು, ಮಾರುಕಟ್ಟೆಯಲ್ಲಿ ಸಾವಿರಾರು ರೂ. ಬೆಳಬಾಳುತ್ತವೆ.

 
 
 
 
 
 
 
 
 
 
 

Leave a Reply