ದಿನ ನಿತ್ಯದ ಬೆಳೆ ಮಲ್ಲಿಗೆ – ಕುದಿ ಶ್ರೀನಿವಾಸ ಭಟ್

ಮಲ್ಲಿಗೆ ಕೃಷಿ ಉತ್ತಮ ಆದಾಯ ತರುವ ಚಟುವಟಿಕೆಯಾಗಿದ್ದು   ವರ್ಷದಲ್ಲಿ  ಕನಿಷ್ಠ 250 ದಿನ  ಉತ್ತಮ ಆದಾಯ ತರಬಲ್ಲದು ಎಂದು  ರಾಷ್ಟ್ರ ಪ್ರಶಸ್ತಿ ವಿಜೇತ ಕೃಷಿಕ ಕುದಿ ಶ್ರೀನಿವಾಸ ಭಟ್ ಹೇಳಿದರು. ಅವರು ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್  ಪ್ರಾಯೋಜತ್ವದಲ್ಲಿ ಮಲ್ಲಿಗೆ ಕೃಷಿಯ  ಬಗ್ಗೆ  ಮಹಿಳೆಯರಿಗೆ  ಉಡುಪಿ ತಾಲೂಕಿನ ಸ್ಯಾಬ್ರಕಟ್ಟೆಯಲ್ಲಿ ಆಯೋಜಿಸಲಾದ ಒಂದು ದಿನದ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
 
ಮಲ್ಲಿಗೆಯ ಮೌಲ್ಯವರ್ಧನೆ ಮತ್ತು ಉತ್ತಮ ಮಾರುಕಟ್ಟೆಗಾಗಿ ವಿವಿಧ ಯೋಜನೆಗಳನ್ನು ಕೃಷಿ ಸಂಘಟನೆಗಳ ಮೂಲಕ  ಕೈಗೊಳ್ಳಲಾಗುತ್ತಿದೆ.  ಕನಿಷ್ಠ 8 ರಿಂದ 10 ಮಹಿಳೆಯರು ಸ್ವ ಸಹಾಯ  ಗುಂಪಿನಲ್ಲಿ ಮಲ್ಲಿಗೆ ಕೃಷಿ ಕೈಗೊಂಡಲ್ಲಿ ಉತ್ತಮ ಮಾರುಕಟ್ಟೆ ಲಭ್ಯವಾಗುತ್ತದೆ.   ಉತ್ತಮ ಇಳುವರಿಯ ಪಡೆಯಲು  ಸಾವಯವ ಗೊಬ್ಬರ ವನ್ನೇ ಬಳಸಬಹುದು ಎಂದು ಎಂದು ತಿಳಿಸಿದರು.  ಇನ್ನೋರ್ವ ಸಂಪನ್ಮೂಲ ವ್ಯಕ್ತಿ  ಯಶಸ್ವೀ ಮಲ್ಲಿಗೆ ಕೃಷಿಕ ರಾದ  ಪ್ರೇಮಾ ಮಾತನಾಡಿ ತಾರಸಿಯಲ್ಲಿ ಮಲ್ಲಿಗೆ ಕೃಷಿಯನ್ನು ಲಾಭದಾಯಕವಾಗಿ  ಕೈಗೊಳ್ಳುವ ಬಗ್ಗೆ ತಾಂತ್ರಿಕ ಮಾಹಿತಿ ಇತ್ತರು.
 
ಸಮಾರಂಭದಲ್ಲಿ ಅತಿಥಿಗಳಾಗಿ  ಭಾರತೀಯ ವಿಕಾಸ ಟ್ರಸ್ಟಿನ ಅಧಿಕಾರಿ ಅರುಣ್ ಪಟವರ್ಧನ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಕಾರ್ಯಕ್ರಮ ಸಂಯೋಜಕರಾದ ಅವಿನಾಶ್, ಬ್ರಹ್ಮಾವರ ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೇಲ್ವಿಚಾರಕಿ ಲಕ್ಷ್ಮೀ, ನಿವೃತ್ತ ಮುಖ್ಯೋಪಾಧ್ಯಾಯರಾದ ಹರಿದಾಸ್ ಮಂಜ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಕಾರ್ಯದರ್ಶಿ ಪ್ರೇಮಾ, ಜಿಲ್ಲಾ ಒಕ್ಕೂಟದ ಸದಸ್ಯೆಯರಾದ ಜ್ಯೋತಿ, ಶಾರದಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಾರತೀಯ ವಿಕಾಸ ಟ್ರಸ್ಟಿನ  ಕಾರ್ಯಕ್ರಮ ಸಂಯೋಜಕ ರಾಘವೇಂದ್ರ ಆಚಾರ್ಯ ನಿರೂಪಿಸಿದರು 
 
 
 
 
 
 
 
 
 
 
 

Leave a Reply