Janardhan Kodavoor/ Team KaravaliXpress
24.6 C
Udupi
Thursday, June 30, 2022
Sathyanatha Stores Brahmavara

ಉಡುಪಿ ಮಲಬಾರ್ ಗೋಲ್ಡ್ ವತಿಯಿಂದ ವಿಶ್ವ ದಾದಿಯರ ದಿನಾಚರಣೆ

ಉಡುಪಿ: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ವಿಶ್ವ ದಾದಿಯರ ದಿನಾಚರಣೆಯನ್ನು ಮಳಿಗೆಯಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ವಿಶೇಷ ಸಾಧನೆ ಮಾಡಿದ ಶ್ರೀಮತಿ ರೋಸ್ಲಿ ಜತನ್ನ, ಶ್ರೀಮತಿ ಪೂರ್ಣಿಮಾ ಶೆಟ್ಟಿ, ಶ್ರೀಮತಿ ಯಶೋಧ ಅಂಡಾರು, ಯಮುನಾ ಕುಮಾರಿ ಕೆ.ಎ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಾಜ ಸೇವಕಾರಾದ ಶ್ರೀ ಲೀಲಾದರ್ ಶೆಟ್ಟಿ ಮಾತನಾಡಿ ದಾದಿಯರು ಕೊರೊನ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಮಾಡಿದ ಜನ ಸೇವೆಯನ್ನು ನೆನೆದರು.

ಪ್ರೊಫೆಸರ್ ಶ್ರೀ ಶಿವಾನಂದ ನಾಯಕ್ ಮಾತನಾಡಿ ಕರುಣೆ, ವಾತ್ಸಲ್ಯ, ಮಮತೆಯಲ್ಲಿ ರೋಗಿಗಳ ಸೇವೆ ಮಾಡುವ ಆರೋಗ್ಯದಾತೆಯರಾದ ದಾದಿಯರ ಅವಿರತ ಸೇವೆಯನ್ನು ಸ್ಮರಿಸಿದರು.

ಡಾ.ರಾಜಲಕ್ಷ್ಮೀ ಮಾತನಾಡಿ ರೋಗಿಗಳಿಗೆ ಆತ್ಮ ವಿಶ್ವಾಸ ತುಂಬಿ ಆರೈಕೆ ಮಾಡುವ ಎಲ್ಲಾ ದಾದಿಯರ ಸೇವೆಯ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್,ರಾಘವೇಂದ್ರ ನಾಯಕ್,ತಂಝೀಮ್ ಶಿರ್ವ ಹಾಗೂ ಸಿಬ್ಬಂದಿ ವರ್ಗ,ಗ್ರಾಹಕರು ಉಪಸ್ಥಿತರಿದ್ದರು. ವಿಗ್ನೇಶ್ ನಿರೂಪಿಸಿ ವಂದಿಸಿದರು

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!