ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ದಿ.ಇಂದಿರಾ ಗಾಂಧಿ ಜನ್ಮ ದಿನಾಚರಣೆ

ಉಡುಪಿ: ಇಂದಿರಾ ಗಾಂಧಿ ದೇಶವನ್ನು ಬಲಿಷ್ಟಗೊಳಿಸಿ, ಭಾರತದ ಕೀರ್ತಿಯನ್ನು ವಿಶ್ವಕ್ಕೆ ಪಸರಿಸಿದ ಧೀಮಂತ ಮಹಿಳೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಳಿನಿ ಆಚಾರ್ಯ ಹೇಳಿದರು. ಅವರು ಗುರುವಾರ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ದಿ. ಇಂದಿರಾಗಾಂಧಿಯವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಮಾತನಾಡಿ ತನ್ನ ದಿಟ್ಟತನದಿಂದ ಮಹಾನ್ ನಾಯಕಿಯಾದ ಇಂದಿರಾ ಗಾಂಧಿ ಅವರ ಆದರ್ಶಗಳು ಕಾಂಗ್ರೆಸ್ ಬಲಿಷ್ಟ ಗೊಳ್ಳಲು ಸಹಕಾರಿಯಾಗಿದೆ. ದೇಶದ ಏಕತೆ, ಸಮಗ್ರತೆ ಹಾಗೂ ಭಾವೈಕ್ಯತೆ ಗಾಗಿ ಜೀವನವನ್ನು ಮುಡುಪಾಗಿಡುವ ಮೂಲಕ ಅವರಿಗೆ ಗೌರವ ಸಲ್ಲಿಸ ಬೇಕೆಂದರು.

ನಾಗೇಶ್ ಕುಮಾರ್ ಉದ್ಯಾವರ ಅವರು ಮಾತನಾಡಿ ದೇಶದಲ್ಲಿ ಮೊದಲ ಬಾರಿ 20 ಅಂಶಗಳ ಕಾರ‍್ಯಕ್ರಮದ ಮೂಲಕ ದೇಶದ ಸಮಾನತೆಗೆ ಶ್ರಮಿಸಿದ ಇಂದಿರಾ ಅವರ ಆದರ್ಶಗಳನ್ನು ಯುವ ಪೀಳಿಗೆಗೆ ತಲುಪಿಸಬೇಕಾಗಿದೆ. ಆ ಮೂಲಕ ಕಾಂಗ್ರೆಸ್ ಇತಿಹಾಸವನ್ನು ತಿಳಿಸುವಂತಹ ಕೆಲಸವಾಗಬೇಕಿದೆ ಎಂದರು. ಇದೇ ವೇಳೆ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಕಟಪಾಡಿಯ ಕಾರುಣ್ಯ ವ್ರದ್ಧಾಶ್ರಮಕ್ಕೆ ಗ್ರೈಂಡರ್ ಒಂದನ್ನು ಕೊಡುಗೆಯಾಗಿ ನೀಡಲಾಯಿತು.


ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ಅಶೋಕ್ ಕುಮಾರ್ ಕೊಡವೂರು,ಮಾಜಿ ನಗರಸಭಾ ಸದಸ್ಯರಾದ ಕುಶಲ ಶೆಟ್ಟಿ, ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೆಲಿಯೊ, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಜ್ಯೋತಿ ಹೆಬ್ಬಾರ್, ನಗರಸಭಾ ಸದಸ್ಯ ರಮೇಶ್ ಕಾಂಚನ್, ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಂಯೋಜಕಿ ರೋಶನಿ ಒಲಿವೇರ್, ನಾಯಕರಾದ ಆಗ್ನೆಸ್ ಡೆಸಾ, ಜ್ಯೋತಿ ಪುತ್ರನ್, ಸೋಶಿಯಲ್ ಮೀಡಿಯಾ ಸೆಲ್ ನ ಪ್ರಭಾಕರ ಆಚಾರ್ಯ ,ಶ್ರೀಮತಿ ಪುಷ್ಪಾ ಅಂಚನ್.

ಹಿರಿಯಡ್ಕ ಬ್ಲಾಕ್ ಮಹಿಳಾ ಅಧ್ಯಕ್ಷೆ ಶ್ರೀಮತಿ ಸಂಧ್ಯಾ ಶೆಟ್ಟಿ, ಅಮೃತಾ ಅಲೆವೂರು,ದೇವಕಿ ಕೋಟ್ಯಾನ್, ಚಂದ್ರಾವತಿ ಭಂಡಾರಿ,ಮೀನಾ ಪಿಂಟೋ, ಶಾಂತಿ ಪಿರೇರಾ, ಸುಮಾ ಸುರೇಂದ್ರ, ಕಿಸಾನ್ ಘಟಕದ ಸತ್ಯಾನಂದ ನಾಯಕ್,ಎನ್ ಎಸ್ ಯು ಐ ಜಿಲ್ಲಾ ಕಾರ್ಯದರ್ಶಿ ಮಸೂದ್ , ಹಾಗೂ ಇತರರು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply