Janardhan Kodavoor/ Team KaravaliXpress
25.6 C
Udupi
Saturday, July 2, 2022
Sathyanatha Stores Brahmavara

ಹುಟ್ಟು ಹಬ್ಬದಂದೆ ಅಪಘಾತಕ್ಕೆ ಬಲಿ

ತನ್ನ ಹುಟ್ಟು ಹಬ್ಬದ ಖುಷಿ ಸಹಿತ ಮದುವೆ ನಿಗದಿಯಾದ ಯುವಕನೊರ್ವ ತನ್ನವರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಂಗಳೂರು ಕಡೆಯಿಂದ ತನ್ನ ಸ್ಕೂಟರ್ ನಲ್ಲಿ ಮಲ್ಪೆಯ ಮನೆಗೆ ವಾಪಾಸಾಗುತ್ತಿದ್ದ ವೇಳೆ ಹೆಜಮಾಡಿ ಟೋಲ್ ಬಳಿ ಹೆದ್ದಾರಿ ಮಧ್ಯೆ ನಿಲ್ಲಿಸಿದ ಬುಲೆಟ್ ಟ್ಯಾಂಕರ್ ಗೆ ಡಿಕ್ಕಿಯಾಗಿ ದಾರುಣಾವಾಗಿ ಮೃತಪಟ್ಟಿದ್ದಾನೆ.

ಮಲ್ಪೆ ಕೊಡವೂರು ನಿವಾಸಿ ಮಹೇಶ್(27) ಮೃತ ಯುವಕ ಈತನಿಗೆ ಮದುವೆಯೂ ನಿಗದಿಯಾಗಿತ್ತು ಎನ್ನಲಾಗಿದ್ದು, ಈ ದಿನ ಈತನ ಹುಟ್ಟು ಹಬ್ಬ ಕೂಡಾ ಆಗಿದೆ. ಮಂಗಳೂರು ಭಾಗದಲ್ಲಿ ತನ್ನವರ ಕಾರ್ಯಕ್ರಮಕ್ಕೆ ಹೋಗಿ ಮರಳುವ ವೇಳೆ ಹೊಸ ಬಟ್ಟೆಗಳನ್ನು ಖರೀದಿಸಿ, ಸ್ಕೂಟರ್ ಏರಿ ಬಂದ ಈತ ಹೆಜಮಾಡಿ ಟೋಲ್ ಬಳಿ ರಸ್ತೆಯ ಮಧ್ಯಭಾಗದಲ್ಲಿ ನಿಲ್ಲಿಸಲಾಗಿದ್ದ ಗ್ಯಾಸ್ ಟ್ಯಾಂಕರ್‍ರನ್ನು ಗಮನಿಸದೆ ಟ್ಯಾಂಕರ್ ಹಿಂಭಾಗಕ್ಕೆ ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾನೆ.
ಈ ಟೋಲ್ ಪ್ರದೇಶದಲ್ಲಿ ಬಹಳಷ್ಟು ಕ್ಯಾಂಟಿನ್ ಗಳು ಕಾರ್ಯಚರಿಸುತ್ತಿದ್ದು, ಪಕ್ಕದ ದೇವಳದ ದ್ವಾರದ ಬಳಿಯ ಕ್ಯಾಂಟೀನ್‍ಗೆ ಚಾ ಕುಡಿಯಲು ಟ್ಯಾಂಕರ್ ಚಾಲಕ ರಸ್ತೆಯ ಮಧ್ಯೆ ಭಾಗದಲ್ಲೇ ನಿಲ್ಲಿಸಿ ಹೋಗಿದ್ದರಿಂದ ಈ ದುರಂತ ಸಂಭವಿಸುವಂತ್ತಾಗಿದೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!