Janardhan Kodavoor/ Team KaravaliXpress
25.6 C
Udupi
Saturday, July 2, 2022
Sathyanatha Stores Brahmavara

ಬಾಬಾ ಸಾಹೇಬ್ ಅಂಬೇಡ್ಕರ್ ರವರ ಆರ‍್ಶಗಳನ್ನು ಪ್ರತಿಯೊಬ್ಬ ಪ್ರಜೆಗೂ ತಲುಪಿಸುವ ಪ್ರಯತ್ನ: ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್

ಭಾರತೀಯ ಜನತಾ ಪಕ್ಷವು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಆಡಳಿತದಲ್ಲಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರ ಆರ‍್ಶಗಳನ್ನು ದೇಶದ ಪ್ರತಿಯೊಬ್ಬ ಪ್ರಜೆಗೂ ಮುಟ್ಟಿಸುವ
ಕರ‍್ಯಕ್ರಮಗಳನ್ನು ಹಮ್ಮಿ ಕೊಂಡಿದೆ. ನಮ್ಮ ಸರಕಾರ ಆಡಳಿತಕ್ಕೆ ಬಂದ ನಂತರ ದೇಶದ ಪ್ರತೀ ಮತಗಟ್ಟೆಗಳಲ್ಲೂ ಅವರ ಜನ್ಮ ದಿನಾಚರಣೆ ಪ್ರಯುಕ್ತ ವಿವಿಧ ಸಾಮಾಜಿಕ ಕರ‍್ಯಕ್ರಮಗಳನ್ನು ಹಮ್ಮಿ ಕೊಂಡು ಅಂಬೇಡ್ಕರ್ ರವರ
ಸಿದ್ದಾಂತಗಳಿಗೆ ಪೂರಕವಾಗಿ ಕೆಲಸ ಮಾಡಿ ಅವರ ಹೆಸರಿಗೆ ಗೌರವ ಸಲ್ಲಿಸುತ್ತಿದೆ ಎಂದು ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಮಾಹಿತಿ ನೀಡಿದರು. ಅವರು ಗುರುವಾರ ಉಡುಪಿ ನಗರ ಬಿಜೆಪಿ ಮತ್ತು ಕರಂಬಳ್ಳಿ ಮಹಾಶಕ್ತಿ ಕೇಂದ್ರ
ಜಂಟಿ ಆಶ್ರಯದಲ್ಲಿ ಪೆರಂಪಳ್ಳಿ ಮಲ್ಲಂಪಲ್ಲಿ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ವಠಾರದಲ್ಲಿ ಹಮ್ಮಿ ಕೊಂಡ ಅಂಬೇಡ್ಕರ್ ಜನ್ಮದಿನಾಚರಣೆಯ ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರ ಬಿಜೆಪಿ ಪ್ರದಾನ ಕರ‍್ಯರ‍್ಶಿ ಮಂಜುನಾಥ ಮಣಿಪಾಲ್ ರವರು ಬಿ ಆರ್ ಅಂಬೇಡ್ಕರ್ ಅವರ ಜೀವನ ಚರಿತ್ರೆ
ಬಗ್ಗೆ ಮಾಹಿತಿ ನೀಡಿದರು. ಈ ಸಂರ‍್ಭದಲ್ಲಿ ಸಮುದಾಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕುಮಾರಿ ರಶ್ಮಿತ ಪಾಲನ್, ಶ್ರೀಮತಿ ಶಾಲಿನಿ, ತನಿಯ ಗುರಿಕಾರರನ್ನು ಗೌರವ ಸನ್ಮಾನ ಮಾಡಲಾಯಿತು. ನಗರಸಭೆಯ ಸ್ಥಾಯಿ ಸಮಿತಿ
ಅಧ್ಯಕ್ಷ ಡಿ ಬಾಲಕೃಷ್ಣ ಶೆಟ್ಟಿ, ನಗರಸಭಾ ಸದಸ್ಯರಾದ ಪ್ರಭಾಕರ್ ಪೂಜಾರಿ, ಗಿರಿಧರ್ ಆಚರ‍್ಯ, ಭಾರತಿ ಪ್ರಶಾಂತ್, ಅರುಣಾ ಪೂಜಾರಿ, ಜಿಲ್ಲಾ ಮಹಿಳಾ ಮರ‍್ಚಾ ಪ್ರಧಾನ ಕರ‍್ಯರ‍್ಶಿ ರಶ್ಮಿತಾ ಶೆಟ್ಟಿ, ನಗರಾಭಿವ್ರದ್ದಿ ಪ್ರಾಧಿಕಾರ
ಸದಸ್ಯೆ ಸುಮಾ ನಾಯ್ಕ, ನಗರಾಶ್ರಯ ಸಮಿತಿ ಸದಸ್ಯ ಡೆನಿಸ್ ಮಸ್ಕರೇನಸ್ ಯುವ ಮರ‍್ಚಾ ಅಧ್ಯಕ್ಷ ರೋಷನ್ ಶೆಟ್ಟಿ, ನಗರ ಪ್ರಧಾನ ಕರ‍್ಯರ‍್ಶಿ ದಿನೇಶ್ ಅಮೀನ್, ಕರ‍್ಯರ‍್ಶಿ ಆನಂದ್ ಸುರ‍್ಣ, ಲೈಲಾ ಪ್ರಭಾವತಿ, ಸುಮಾ
ನಾಯ್ಕ್ ಉಪಸ್ಥಿತರಿದ್ದರು. ಮಹಾಶಕ್ತಿ ಕೇಂದ್ರ ಅಧ್ಯಕ್ಷ ಕಿಶೋರ್ ಕರಂಬಳ್ಳಿ ಕರ‍್ಯಕ್ರಮ ಸಂಯೋಜಿಸಿ
ನಿರೂಪಿಸಿದರು. ಶಕ್ತಿ ಕೇಂದ್ರ ಅಧ್ಯಕ್ಷ ಹಾಗು ಮಾಜಿ ನಗರಸಭಾ ಸದಸ್ಯ ಪ್ರಶಾಂತ್ ಭಟ್ ವಂದಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!