ಮಣಿಪಾಲದ ಅಧೀನಕ್ಕೆ ಒಳಪಟ್ಟ ಕಾಲೇಜುಗಳ 2019-20ರ ರ‍್ಯಾಂಕ್ ವಿಜೇತರಿಗೆ ಅಭಿನಂದನೆ 

ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್, ಮಣಿಪಾಲ ಇದರ ವತಿಯಿಂದ ಮಣಿಪಾಲ ಆಡಳಿತದ ಅಧೀನಕ್ಕೆ ಒಳಪಟ್ಟ ೦೬ ಕಾಲೇಜುಗಳ್ಯ್ಲ 2019-20ರ ವಿಶ್ವವಿದ್ಯಾನಿಲಯ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸುವಕಾರ್ಯಕ್ರಮ ಡಾ। ಟಿ.ಎಂ. ಎ.ಪೈ  ಆಡಿಟೋರಿಯಂನಲ್ಲಿ ಜರುಗಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್, ಮಣಿಪಾಲ ಇದರ ಅಧ್ಯಕ್ಷರು, ಮಾಹೆ ವಿಶ್ವವಿದ್ಯಾನಿಲಯದ ಪ್ರೊ ಚಾನ್ಸಿಲರ್ ಡಾ|| ಹೆಚ್ ಎಸ್. ಬಲ್ಲಾಳ್ ವಹಿಸಿದ್ದರು. ಮಣಿಪಾಲ ಸಮೂಹ ಸಂಸ್ಥೆಗಳ ಸಂಸ್ಥಾಪಕ ಡಾ । ಟಿ.ಎಂ.ಎ.ಪೈ ಇವರು ಶಿಕ್ಷಣಕ್ಕೆ ನೀಡಿದ ಶಾಶ್ವತ ಕೊಡುಗೆಯನ್ನು ಗೌರವದಿಂದ ನೆನಪಿಸಿಕೊಂಡರು.  
ಎಲ್ಲಾ ಕಾಲೇಜುಗಳ ವಿಶ್ವವಿದ್ಯಾನಿಲಯದ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು,ಪೋಷಕರನ್ನು, ಪ್ರಾಚಾರ್ಯರನ್ನು ಹಾಗ ಎಲ್ಲಾ ಶಿಕ್ಷಕರನ್ನು ಅಭಿನಂದಿಸಿದರು. ಮಣಿಪಾಲದ ಸಮೂಹ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಭವಿಷ್ಯದಲ್ಲಿ  ತಮ್ಮನ್ನು ತಾವು ಸಮಾಜ ದ ಮುಖ್ಯ ವಾಹಿನಿಯಲ್ಲಿ  ಹೇಗೆ ಗುರುತಿಸಿಕೊಳ್ಳಬೇಕು ಅನ್ನುವ ಅರ್ಥಪೂರ್ಣ ಮಾತುಗಳನ್ನಾಡಿ ವಿದ್ಯಾರ್ಥಿ ಗಳಿಗೆ ಶುಭ ಹಾರೈಸಿದರು.
ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಮಣಿಪಾಲ, ಇದರ ಉಪಾಧ್ಯಕ್ಷ ಹಾಗು  ಮಣಿಪಾಲ್ ಮೀಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್ ನ ಚೆಯರ್ಮೆನ್  ಸತೀಶ್ ಯು ಪೈ ಸಮಾರಂಭದಲ್ಲಿ  ಉಪಸ್ಥಿತರಿದ್ದರು. ಪ್ರಾಸ್ತಾವಿಕ ನುಡಿಗಳೊಂದಿಗೆ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಮಣಿಪಾಲ ಇದರ ಕಾರ್ಯದರ್ಶಿ ಹಾಗು  ಆಡಳಿತಾಧಿಕಾರಿ ಡಾ|| ಹೆಚ್. ಶಾಂತಾರಾಮ್ ಇವರು ವಿದ್ಯಾರ್ಥಿಗಳು ರ‍್ಯಾಂಕ್ ಪಡೆಯುವ ಸಂದರ್ಭದಲ್ಲಿ ಶಿಕ್ಷಕರ ಸಹಕಾರವನ್ನು,ಸಂಸ್ಥೆಯ ಕೊಡುಗೆಯನ್ನು, ಹೆತ್ತವರ ಸಹಕಾರವನ್ನು ಸದಾ  ಸ್ಮರಿಸಿ ಋಣಿಗಳಾಗಿರ ಬೇಕೆಂದರು.
ಮಾಹೆ ವಿಶ್ವವಿದ್ಯಾನಿಲಯದ ವೈಸ್ ಚಾನ್ಸಿಲರ್ ಲೇಪ್ಫ್ಟಿನೆಂಟ್ ಜನರಲ್ ಡಾ । ಎಂ.ಡಿ ವೆಂಕಟೇಶ್ ಸಂಧರ್ಬೋಚಿತವಾಗಿ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು  ಹಾಗು  ಈ ಕಾಲದ ಶಿಕ್ಷಣ  ಪದ್ದತಿಯಲ್ಲಿರುವ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳುವುದರ ಜೊತೆಗೆ ತಾಂತ್ರಿಕತೆಯ ಸ್ಥಿಮಿತದ ಬಳಕೆಯ ಬಗ್ಗೆ ಹಿತನುಡಿಗಳನ್ನು ನೀಡಿದರು.
ಮಾಹೆ ವಿಶ್ವವಿದ್ಯಾನಿಲಯದ  ರಿಜಿಸ್ಟಾರ್ ಡಾ। ನಾರಾಯಣ ಸಭಾಹಿತ್ ಮಣಿಪಾಲದ  ಶಿಲ್ಪಿ  ಡಾ । ಟಿ.ಎಂ.ಎ.ಪೈ  ಇವರ ಕೊಡುಗೆಯನ್ನು ಸ್ಮರಿಸಿ  ರ‍್ಯಾಂಕ್ ವಿಜೇತರನ್ನು ಅಭಿನಂದಿಸಿದರು. ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲರು ಡಾ|| ಮಂಜುನಾಥ ಕೋಟ್ಯಾನ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ  ಡಾ|| ರಾಧಾಕೃಷ್ಣ ಶೆಟ್ಟಿ ಸ್ವಾಗತಿಸಿ, ಡಾ|| ಸ್ವಾಮಿ ವಂದನಾರ್ಪಣೆ ಗೈದರು. 
ಡಾ|| ನಾರಾಯಣ ಶೆಟ್ಟಿ, ಪ್ರಾಂಶುಪಾಲರು, ಭಂಡಾಕರ‍್ಸ್ ಕಾಲೇಜು, ಕುಂದಾಪುರ ಇವರು ಮಣಿಪಾಲ ಆಡಳಿತದ ಅಧೀನಕ್ಕೆ ಒಳಪಟ್ಟ 16 ಕಾಲೇಜುಗಳ 2019-20ರ ವಿಶ್ವವಿದ್ಯಾನಿಲಯ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು.
 
 
 
 
 
 
 
 
 
 
 

Leave a Reply