ಕಲಾವಿದ ಮಂಗಲ್ಪಾಡಿ ಮಹಾಬಲ ಶೆಟ್ಟಿ ನಿಧನ

ತೆಂಕು ತಿಟ್ಟಿನ ಹಿರಿಯ ವೇಷಧಾರಿ ಮಂಗಲ್ಪಾಡಿ ಮಹಾಬಲ ಶೆಟ್ಟಿ(76ವ) ಭಾನುವಾರ ನಿಧನ​ರಾದರು​. ಕಾಸರಗೋಡಿನ ಮಂಗಲ್ಪಾಡಿಯವರಾದ ಇವರು ಯಕ್ಷಗಾನ ಕೃಷಿಯೊಂದಿಗೆ ಕೃಷಿ ಯಲ್ಲು ಆಸಕ್ತರಾಗಿದ್ದರು. ​ ​ಭಗವತಿ, ಮಲ್ಲ, ಮಧೂರು, ಬೆಳ್ಮಣ್ಣು, ಕಟೀಲು, ಸುಂಕದಕಟ್ಟೆ ಮೇಳಗಳಲ್ಲಿ ಮೂರುವರೆ ದಶಕಗಳ ಕಲಾಸೇವೆ ಮಾಡಿದ್ದರು.

 
ಕನ್ನಡ -ತುಳು ಎರಡೂ ಭಾಷೆಗಳಲ್ಲಿ ಹಾಗೇ ಪೌರಾಣಿಕ -ಐತಿಹಾಸಿಕ ಪ್ರಸಂಗಗಳಲ್ಲಿ ಸಮರ್ಥ ವಾಗಿ ಪಾತ್ರ ನಿರ್ವಹಿಸುತ್ತಿದ್ದರು. ಮಂಗಲ್ಪಾಡಿ ಯಕ್ಷಭಾರತಿ ಸಂಘಟನೆಯಲ್ಲಿ ತೊಡಗಿಸಿ ಕೊಂಡಿ ದ್ದರು. ಉಡುಪಿಯ ಯಕ್ಷಗಾನ ಕಲಾರಂಗ ಅವರಿಗೆ ಕೆ.ವಿಶ್ವಜ್ಞ ಶೆಟ್ಟಿ ನೆನಪಿನ ಪ್ರಶಸ್ತಿ‌ನೀಡಿ ಗೌರವಿಸಿತ್ತು.‌ 
 
ಪಟ್ಲ ಫೌಂಡೇಶನ್, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್, ಬಂಜಾರ ಪ್ರಕಾಶ್ ಶೆಟ್ಟಿ ಪ್ರತಿಷ್ಠಾನದ ಪ್ರಶಸ್ತಿ ಸೇರಿದಂತೆ ಹಲಾವರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ ಗಂಗಾಧರ‌ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.
 
 
 
 
 
 
 
 
 
 
 

Leave a Reply