ಮರೆಯಲಿಕ್ಕಾಗದ ಮಗಳಿಗಾಗಿ ದೇವಸ್ಥಾನ ಕಟ್ಟಿಸಿದ ತಂದೆ

ಅಗಲಿದ ಮಗಳನ್ನು ಮರೆಯಲಿಕ್ಕಾಗದ ತಂದೆ ಆಕೆಯ ನೆನಪಲ್ಲಿ ದೇವಸ್ಥಾನ ಕಟ್ಟಿಸಿದ್ದಾರೆ. ಇಂಥದೊಂದು ವಿಶೇಷ ದೇವಾಲಯ ಇರುವುದು ನೆಲ್ಲೂರಿನ ವೆಂಕಟಾಚಲಂ ಮಂಡಲದ ಕಾಕುತೂರಿನಲ್ಲಿ. ಪ್ರತಿವರ್ಷ ಇಲ್ಲಿ ಹಬ್ಬವನ್ನೂ ಆಚರಿಸಲಾಗುತ್ತದೆ. ಚೆಂಚಯ್ಯ ಮತ್ತು ಲಕ್ಷ್ಮಮ್ಮ ದಂಪತಿಗೆ ಐವರು ಮಕ್ಕಳು.

ನಾಲ್ಕನೆಯ ಮಗಳು ಸುಬ್ಬಲಕ್ಷ್ಮಮ್ಮ 2011ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವಿಧಿವಶರಾದರು. ಮಗಳು ಸುಬ್ಬಲಕ್ಷ್ಮಮ್ಮ ತಂದೆಯ ಕನಸಿನಲ್ಲಿ ಬಂದು ತನಗಾಗಿ ದೇವಸ್ಥಾನ ಕಟ್ಟಿಸುವಂತೆ ಹೇಳಿದಳಂತೆ. ಅದರಂತೆ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎಂದು ಚೆಂಚಯ್ಯ ಹೇಳಿದ್ದಾರೆ.

 
 
 
 
 
 
 

Leave a Reply