ಉಡುಪಿ ತೆಂಕಪೇಟೆಗೆ ಕಾಶೀಮಠಾದೀಶರ ಭೇಟಿ

ಉಡುಪಿ  ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಕೆ ಶನಿವಾರ ಬೆಳ್ಳಿಗೆ ಶ್ರೀ ಸಂಸ್ಥಾನ ಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ  ಸ್ವಾಮೀಜಿ  ಭೇಟಿ ನೀಡಿದರು.

ಪೂಜ್ಯ ಶ್ರೀಗಳನ್ನು ಪೂರ್ಣ ಕುಂಭ ಸ್ವಾಗತ, ಅರ್ಚಕರ ವೇದ ಘೋಷ  ,  ಮಹಿಳೆಯರುಕಳಶ, ಮಂಗಳವಾದ್ಯದೊಂದಿಗೆ ಸ್ವಾಗತಿಸಿ  ದೇವಾಲಯಕ್ಕೆ  ಕರೆತಂದುದೇವರ  ಭೇಟಿ ಬಳಿಕ   ದೇವಾಲಯದ ಯಾಗ  ಮಂಟಪಕೆ  ಆಗಮಿಸಿ ಶ್ರೀಮದ್ಭಾಗವತ ದಶಮ ಸ್ಕಂದ ಹವನದ ಮಹಾ ಪೂರ್ಣಾಹುತಿ ನೆರವೇರಿಸಿದರು.                                                                                                                    ಚೇಂಪಿ ಶ್ರೀಕಾಂತ್ ಭಟ್ ಹವನದ ಧಾರ್ಮಿಕ ಪೂಜಾ ವಿಧಾನ ಗಳನ್ನು ನೆಡೆಸಿಕೊಟ್ಟರು. ಸೇವಾದಾರದ ಹ್ಯಾಂಗ್ಯೂ ಐಸ್ ಕ್ರೀಮ್ ಮಾಲಕರಾದ   ಬಿ ಜಗದೀಶ್ ಪೈ ದಂಪತಿಗಳು ಪೂಜಾ ಕಾರ್ಯದಲ್ಲಿ  ಸಹಕರಿಸಿದರು.

ದೇವಳದ   ಆಡಳಿತ  ಮೂಕ್ತೇಶ್ವರ ಪಿ ವಿ  ಶೆಣೈ   ಶ್ರೀಪಾದರಿಗೆ ಪಾದ ಪೂಜೆ  ನೆರವೇರಿಸಿ  ಸ್ವಾಗತಿಸಿದರು  ಚೇಂಪಿ ಶ್ರೀಕಾಂತ್ ಭಟ್ ಪ್ರಸ್ತವಿಕ  ದಲ್ಲಿ  ದೇವಳದ ಅಭಿವೃದ್ಧಿ ಸವಿವಿವರ ತಿಳಿಸಿದರು  , ಚೇಂಪಿ ರಾಮಚಂದ್ರ ಭಟ್ ಹಾಗೂ ವೈದಿಕ ವೃಂದ ದವರು ಪ್ರಾಥನೆ ನೆಡೆಸಿಕೊಟ್ಟರು. ಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಶ್ರೀಪಾದರು   ಅನುಗ್ರಹ  ಸಂದೇಶ ನೀಡಿ ಭಕ್ತಾಧಿಗಳಿಗೆ ಫಲ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು. ಸಮಾರಂಭದಲ್ಲಿ, ವಸಂತ ಕಿಣಿ , ವಿಶ್ವನಾಥ ಭಟ್ , ಅಶೋಕ ಬಾಳಿಗಾ ,ಗಣೇಶ ಕಿಣಿ , ರೋಹಿತಾಕ್ಷ ಪಡಿಯಾರ್ , ಪುಂಡಲೀಕ್ ಕಾಮತ್ , ಶಾಂತಾರಾಮ್ ಪೈ ,  ವಿನಾಯಕ ಭಟ್ , ದಯಾಘನ್ ಭಟ್ , ಮಧುಕರ್ ಭಟ್ , ಹರಿಪ್ರಸಾದ್ ಶರ್ಮ , ಪ್ರಕಾಶ್ ಭಕ್ತ , ಉಮೇಶ್ ಪೈ , ನಾರಾಯಣ ಪ್ರಭು , ಅರ್ಚಕ ವೃಂದ ,   ಜಿ  ಎಸ್  ಬಿ  ಮಹಿಳಾ ಮತ್ತು ಯುವಕ ಮಂಡಳಿ ಸದಸ್ಯರು , ಹಾಗೂ   ನೂರಾರು  ಸಮಾಜಭಾಂದವರು ಉಪಸ್ಥರಿದ್ದರು.  
 
 
 
 
 
 
 

Leave a Reply