ಶಾಲೆಯ ಲಿಫ್ಟ್ ನಲ್ಲಿ ಸಿಲುಕಿ ಶಿಕ್ಷಕಿಯ ದುರಂತ ಸಾವು

ಶಾಲೆಯ ಲಿಫ್ಟ್ ನಲ್ಲಿ ಸಿಲುಕಿ 26 ವರ್ಷದ ಶಿಕ್ಷಕಿ ಒಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ಮುಂಬೈನಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಉತ್ತರ ಮುಂಬೈನ ಉಪನಗರ ಮಲಾಡ್‌ನ ಚಿಂಚೋಳಿ ಬಂಡರ್‌ನಲ್ಲಿರುವ ಸೆಂಟ್ ಮೇರಿಸ್ ಇಂಗ್ಲಿಷ್ ಹೈಸ್ಕೂಲ್‌ನಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಮೃತ ಶಿಕ್ಷಕಿಯನ್ನು ಜೆನೆಲ್ ಫರ್ನಾಂಡೀಸ್ ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಗಂಟೆಗೆ ಶಾಲಾ
ಕಟ್ಟಡದ 6ನೇ ಮಹಡಿಯಲ್ಲಿದ್ದ ಜೆನೆಲ್, ಎರಡನೇ ಮಹಡಿಯಲ್ಲಿರುವ ಸಿಬ್ಬಂದಿ ಕೊಠಡಿಗೆ ತೆರಳಲು ಲಿಫ್ಟ್‌ಗಾಗಿ ಕಾಯುತ್ತಿದ್ದರು. ಲಿಫ್ಟ್ ಬರುತ್ತಿದ್ದಂತೆ ಅದರೊಳಗೆ ಜೆನೆಲ್ ಎಂಟ್ರಿಯಾಗುವಾಗ ಲಿಫ್ಟ್ ಬಾಗಿಲು ಮುಚ್ಚಿವೆ. ಬಾಗಿಲಗಳ ನಡುವೆಯೇ ಜೆನೆಲ್
ಸಿಲುಕಿದ್ದು, ಲಿಫ್ಟ್ ಚಲಿಸುಲು ಆರಂಭಿಸಿದೆ. ಈ ವೇಳೆ ಜೆನೆಲ್ ಅಲ್ಲಿಯೇ ಸಿಲುಕಿ ದುರಂತವಾಗಿ ಮೃತಪಟ್ಟಿದ್ದಾಳೆ ಎಂದು ವಲಯ 11ರ ಉಪ ಪೊಲೀಸ್ ಆಯುಕ್ತ ವಿಶಾಲ್ ಠಾಕೂರ್ ತಿಳಿಸಿದ್ದಾರೆ.

ಲಿಫ್ಟ್ ಬಾಗಿಲಗಳ ನಡುವೆ ಜೆನೆಲ್ ಸಿಲುಕಿರುವುದನ್ನು ನೋಡಿ ತಕ್ಷಣ ಸಿಬ್ಬಂದಿ ಓಡಿ ಬಂದು ಆಕೆಯನ್ನು ಲಿಪ್‌ನಿಂದ ಹೊರಗಳೆದಿದ್ದಾರೆ. ತಕ್ಷಣ ಆಕೆಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಜೆನೆಲ್ ಆಸ್ಪತ್ರೆಗೆ ತರುವಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

 
 
 
 
 
 
 
 
 

Leave a Reply