Janardhan Kodavoor/ Team KaravaliXpress
24.6 C
Udupi
Sunday, September 25, 2022
Sathyanatha Stores Brahmavara

“ಹರ್ ಘರ್ ತಿರಂಗ” ಕಾಯ೯ಕ್ರಮದ ಅಂಗವಾಗಿ ರಾಷ್ಟ್ರಧ್ವಜ ವಿತರಿಸುವ ಕಾಯ೯ಕ್ರಮ

ಸ್ವಾತಂತ್ರ್ಯ ಅಮೃತ ಮಹೋತ್ಸವದ ಮೋದಿಜೀಯವರ ಯೋಜನೆಯಾದ “ಹರ್ ಘರ್ ತಿರಂಗ” ಈ ಕಾಯ೯ಕ್ರಮದ ಅಂಗವಾಗಿ ಎಲ್.ಜಿ. ಇಂಡಸ್ಟ್ರೀಸ್ ಕೋಟೇಶ್ವರ (L.G. Industries, Koteshwara ) ಸಂಸ್ಥೆಯ ವತಿಯಿಂದ ನಡೆದ ರಾಷ್ಟ್ರಧ್ವಜವನ್ನು ವಿತರಿಸುವ ಕಾಯ೯ಕ್ರಮದ ಚಾಲನೆಯನ್ನು ಮಾನ್ಯ ಶ್ರೀಮತಿ ವೀಣಾ ಬಿ.ಎನ್. ಅಪರ ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ ಇವರು ದಿನಾಂಕ : 03/08/2022 ನೇ ಬುಧವಾರ ಬೆಳಿಗ್ಗೆ 9.30 ಗಂಟೆಗೆ ಎಲ್.ಜಿ. ಇಂಡಸ್ಟ್ರೀಸ್ ಕೋಟೇಶ್ವರ ಇಲ್ಲಿ ನೆರವೇರಿಸಿದರು.
ಈ ಸಮಾರಂಭದಲ್ಲಿ
• ಡಾ. ಪೂರ್ಣಿಮಾ, ಆರೋಗ್ಯ ಅಧಿಕಾರಿ, ಕೋಟೇಶ್ವರ
• ಕೃಷ್ಣ ಗೊಲ್ಲ, ಅಧ್ಯಕ್ಷರು, ಗ್ರಾಮ ಪಂಚಾಯತ್, ಕೋಟೇಶ್ವರ
• ಯೋಗಿ ನಾಯಕ್, ಮುಖ್ಯೋಪಾಧ್ಯಾಯರು, ಕರ್ನಾಟಕ ಪಬ್ಲಿಕ್ ಸ್ಕೂಲ್, ಕೋಟೇಶ್ವರ
ಹಾಗೂ ಸಂಸ್ಥೆಯ ಪಾಲುದಾರರಾದ ದೀಕ್ಷಾ ಕಾಮತ್ ಮತ್ತು ಹರ್ಷಾ ಕಾಮತ್ ರವರು ಉಪಸ್ಥಿತರಿದ್ದರು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಯೋಜನೆಯಾದ “ಹರ್ ಘರ್ ತಿರಂಗ” ಕಾಯ೯ಕ್ರಮದಂತೆ ಎಲ್ಲಾ ಮನೆಗಳಲ್ಲೂ ರಾಷ್ಟ್ರಧ್ವಜವನ್ನು ಹಾರಿಸಬೇಕೆನ್ನುವ ಹಂಬಲದಂತೆ ಸಂಸ್ಥೆಯು ಸಾವಿರಕ್ಕೂ ಅಧಿಕ ರಾಷ್ಟ್ರಧ್ವಜವನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮೊದಲ ಹೆಜ್ಜೆಯಾಗಿ ಎಲ್.ಜಿ. ಇಂಡಸ್ಟ್ರೀಸ್ ಕೋಟೇಶ್ವರ ಸಂಸ್ಥೆಯಲ್ಲಿ ದುಡಿಯುವ ಎಲ್ಲಾ ಕಾಮಿ೯ಕರ ಮನೆಗಳಲ್ಲೂ ರಾಷ್ಟ್ರಧ್ವಜವನ್ನು ಅರಳಿಸುವ ಉದ್ದೇಶದಿಂದ ಈ ದಿನ ವಿತರಣಾ ಕಾಯ೯ಕ್ರಮವನ್ನು ಆಯೋಜಿಸಲಾಯಿತು.

ಈ ಸಮಾರಂಭದ ಅಧ್ಯಕ್ಷತೆ ವಹಿಸಿದ ಅಪರ ಜಿಲ್ಲಾಧಿಕಾರಿಯವರು ಸರ್ಕಾರದ ಈ ವಿನೂತನ ಯೋಜನೆ ಮತ್ತು ಆಗಸ್ಟ್ 13, 14 ಮತ್ತು 15 ರಂದು ಪ್ರತಿ ಮನೆಯಲ್ಲಿಯೂ ಕೂಡಾ ರಾಷ್ಟ್ರಧ್ವಜವನ್ನು ಹಾರಿಸುವ ಕುರಿತು ವಿದ್ಯುಕ್ತವಾಗಿ ವಿವರಿಸಿದರು. ಹಾಗೂ ಸಂಸ್ಥೆಯು ಹಮ್ಮಿಕೊಂಡಿರುವ ಈ ಕಾಯ೯ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಎಲ್ಲಾ ಮನೆಗಳಲ್ಲೂ ರಾಷ್ಟ್ರಧ್ವಜ ಹಾರಿಸುವಂತೆ ವಿನಂತಿಸಿದರು. ಶ್ರೀಯುತ ಯೋಗಿ ನಾಯಕ್ರವರು “ತ್ರಿವರ್ಣ ಧ್ವಜ”ದ ಮತ್ತು ಅದರ ಮಹತ್ವದ ಕುರಿತಾಗಿ ವಿವರಿಸಿದರು ಹಾಗೂ ಶ್ರೀಯುತ ಕೃಷ್ಣ ಗೊಲ್ಲ ರವರು “ಹರ್ ಘರ್ ತಿರಂಗ” ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹರ್ಷಾ ಕಾಮತ್ರವರು ಅತಿಥಿಗಳಿಗೆ ಧನ್ಯವಾದ ಸಮರ್ಪಿಸಿದರು ಹಾಗೂ ಅಶೋಕ್ ಭಂಡಾರ್ಕರ್ರವರು ಕಾರ್ಯಕ್ರಮ ನಿರೂಪಣೆ ನೆರವೇರಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!